ಕಣ್ಣುತೆರೆದ ಶಿವಲಿಂಗ : ಶಿವನ ಪವಾಡ ನೋಡಲು ಹರಿದು ಬಂತು ಭಕ್ತ ಸಾಗರ..!
ಕಲಿಯುಗದಲ್ಲಿ ದೇವರು ಅಲ್ಲಲ್ಲಿ ಆಗಾರ ಹಾಲು ಕುಡಿದ, ಕಣ್ಣು ತೆರೆದ, ಉದ್ಭವವಾದ ಎನ್ನುವ ಅಚ್ಚರಿ ಸಂಗತಿಗಳು ಕೇಳಿ ಬರುತ್ತಿವೆ. ಸದ್ಯ ಶಿವಲಿಂಗ ಕಣ್ಣು ತೆರೆದಿದೆ ಎಂಬ ಸುದ್ದಿ ರಾಮನಗರ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಅಲ್ಲದೆ, ಶಿವಲಿಂಗವನ್ನು ನೋಡಲು ದೇವಸ್ಥಾನದತ್ತ ಅಪಾರ ಭಕ್ತ ಸಾಗರವೇ ಹರಿದು ಬರುತ್ತಿದೆ.
ರಾಮನಗರ : ಕಲಿಯುಗದಲ್ಲಿ ದೇವರು ಅಲ್ಲಲ್ಲಿ ಆಗಾರ ಹಾಲು ಕುಡಿದ, ಕಣ್ಣು ತೆರೆದ, ಉದ್ಭವವಾದ ಎನ್ನುವ ಅಚ್ಚರಿ ಸಂಗತಿಗಳು ಕೇಳಿ ಬರುತ್ತಿವೆ. ಸದ್ಯ ಶಿವಲಿಂಗ ಕಣ್ಣು ತೆರೆದಿದೆ ಎಂಬ ಸುದ್ದಿ ರಾಮನಗರ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಅಲ್ಲದೆ, ಶಿವಲಿಂಗವನ್ನು ನೋಡಲು ದೇವಸ್ಥಾನದತ್ತ ಅಪಾರ ಭಕ್ತ ಸಾಗರವೇ ಹರಿದು ಬರುತ್ತಿದೆ.
ಜಿಲ್ಲೆಯ ಮಾಗಡಿ ಪಟ್ಟಣದಲ್ಲಿರುವ ಉಮಾಮಹೇಶ್ವರಿ ದೇವಸ್ಥಾನದ ಶಿವಲಿಂಗ ಕಣ್ಣು ತೆರೆದಿದೆ ಎಂಬ ಸುದ್ದಿ ಕೇಳಿಬಂದಿದೆ. ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಲ್ಲವೆ ಕಣ್ಣುತೆರೆದ ಶಿವಲಿಂಗವನ್ನು ನೋಡಲು ದೇವಸ್ಥಾನದ ಬಳಿ ಜನ ಸೇರುತ್ತಿದ್ದಾರೆ. ನಿನ್ನೆ ಸಂಜೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಾರ್ತಿಕ ಮಾಸ ಎಫೆಕ್ಟ್ : ಶ್ರೀಶೈಲ ಮಲ್ಲಯ್ಯನ ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹ..!
ಇನ್ನು ದೇವರು ಕಣ್ಣು ತೆರೆದಿದ್ದಾನೆ ಎಂದು ಹೇಳಲಾದ ದೇವಸ್ಥಾನ ಬಹು ಹಳೆಯ ಕಾಲದ್ದು, ಸುಮಾರು 50 ವರ್ಷಗಳ ಇತಿಹಾಸ ಇರುವ ದೇಗುಲ. ನಿನ್ನೆ ಸಂಜೆಯ ವೇಳೆ ಶಿವಲಿಂಗ ಕಣ್ಣು ತೆರೆದಿದೆ ಎಂದು ಹೇಳಲಾಗಿದೆ. ಅಲ್ಲದೆ, ಈ ಕುರಿತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸಿನಿಮಾಗಳಲ್ಲಿ ಇಂತಹ ದೃಶ್ಯಗಳನ್ನು ಸಾಮಾನ್ಯವಾಗಿ ನೋಡಿದ್ದೇವೆ. ಅದ್ರೆ ಅಧುನಿಕತೆಯ ನಡುವೆ ನಡೆಯುವ ಇಂತಹ ಘಟನೆಗಳು ಅಚ್ಚರಿ ಮತ್ತು ಸಂದೇಹಕ್ಕೆ ಕಾರಣವಾಗುತ್ತವೆ.
ಇನ್ನು ಸ್ಥಳೀಯರು ಈ ಉಮಾಹೇಶ್ವರಿ ದೇವಸ್ಥಾನವನ್ನು ಮಿನಿ ನಂಜನಗೂಡು ಮಾಡುವಂತೆ ಕ್ಷೇತ್ರದ ಶಾಸಕರ ಬಳಿ ಮನವಿಯನ್ನೂ ಸಹ ನೀಡಿದ್ದಾರೆ ಎಂದು ಹೇಳಲಾಗಿದೆ. ಶಿವಲಿಂಗ ನೋಡಲು ಬರುತ್ತಿರುವ ಭಕ್ತಸಾಗರವನ್ನು ನಿಯಂತ್ರಿಸಲು ಪೊಲೀಸರು ಸರು ಹರಸಾಹಸ ಪಡಬೇಕಾಗಿದೆ. ಸದ್ಯ ಇದೇಷ್ಟು ನಿಜ, ಎಷ್ಟು ಸುಳ್ಳು ಎಂಬ ವಿಚಾರ ಪರಿಶೀಲನೆಯ ನಂತರವಷ್ಟೇ ತಿಳಿದು ಬರಬೇಕಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.