Snake gaurding Nagamani Viral Video: ಹಾವು ಒಂದು ವಿಷ ಜೀವಿ. ಹೀಗಾಗಿ ಹಾವಿನ ಜೀವನದ ಅನೇಕ ಸಂಗತಿಗಳು ಎಲ್ಲರಿಗೂ ತಿಳಿದಿಲ್ಲ. ನಾಗಮಣಿ ಬಗ್ಗೆ ಪ್ರಾಚೀನ ಭಾರತದ ಪುರಾಣಗಳಲ್ಲಿ ಸಾಕಷ್ಟು ಉಲ್ಲೇಖವಿದೆ. ನಾಗಮಣಿ ಒಂದು ವಿಶೇಷ ರತ್ನವಾಗಿದೆ ಇದು ಅಪರೂಪವೂ ಹೌದು. ನಾಗ ಮಾಣಿಕ್ಯ, ನಾಗ ರತ್ನಂ ಎಂದು ಸಹ ನಾಗಮಣಿಯನ್ನು ಕರೆಯುತ್ತಾರೆ. ನಾಗ ಲೋಕದಿಂದ ಭೂಮಿಗೆ ಬರುವ ಶ್ರೇಷ್ಠ ರತ್ನ ಎಂಬದು ಅನೇಕರ ನಂಬಿಕೆಯಾಗಿದೆ.  


COMMERCIAL BREAK
SCROLL TO CONTINUE READING

ನಾಗರ ಹಾವಿನ ತಲೆ ಮೇಲೆ ಅಂದರೆ ಹೆಡೆಯ ಮೇಲ್ಭಾಗದಲ್ಲಿ ನಾಗಮಣಿ ಇರುತ್ತದೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ನಾಗಮಣಿ ಪಾತಾಳದಲ್ಲಿರುವ ನಾಗಲೋಕದಲ್ಲಿ 9 ವಿಧದ ನಾಗಗಳ ತಲೆಯ ಮೇಲೆ ಮಾತ್ರ ಕಂಡುಬರುತ್ತದೆ. ಇದೀಗ ನಾಗಮಣಿ ಕಾಯುವ ಹಾವಿನ ವಿಡಿಯೋವೊಂದು ವೈರಲ್‌ ಆಗಿದೆ. 


ಇದನ್ನೂ ಓದಿ: Viral Video: ಯುವಕನ ಪ್ಯಾಂಟ್‌ ಒಳಗೆ ನುಸುಳಿದ ಹಾವು... ಮುಂದೇ.! ವಿಡಿಯೋ ನೋಡಿ ಶಾಕ್‌ ಆಗುವಿರಿ


ಈ ನಾಗಮಣಿ ವಿಶೇಷವಾದ ಬೆಳಕನ್ನು ಹೊರಸೂಸುತ್ತದೆ ಎಂಬುದ ಆದಿಕಾಲದಿಂದಲೂ ಬಂದ ನಂಬಿಕೆ. ಈ ಬೆಳಕಿನಿಂದಲೇ ಕತ್ತಲೆಯಲ್ಲಿ ನಾಗಗಳು ಚಲಿಸುವುದು ಎಂದು ಹೇಳಲಾಗುತ್ತದೆ. ನಾಗಮಣಿಗೆ ಅಪಾಯ ಎದುರಾದಲ್ಲಿ ಹಾವುಗಳು ಅದನ್ನು ನುಂಗುತ್ತವಂತೆ. ಹಾವಿನ ಜೊತೆಗೆ ನಾಗಮಣಿ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.


Viral Video: ಎಂದಾದರೂ 4 ಕಾಲುಗಳಿರುವ ಅಪರೂಪದ ಹಾವನ್ನು ನೋಡಿದ್ದೀರಾ? ಇಲ್ಲವಾದ್ರೆ ಮಿಸ್‌ ಮಾಡ್ದೆ ಈ ವಿಡಿಯೋ ನೋಡಿ


ಕಪ್ಪು ಕಾಳಿಂಗ ಸರ್ಪವೊಂದು ನಾಗಮಣಿಗೆ ಕಾವಲು ಕುಳಿತ ವಿಡಿಯೋ ವೈರಲ್‌ ಆಗುತ್ತಿದೆ. ರಾತ್ರಿಯ ಹೊತ್ತಿನಲ್ಲಿ ಕತ್ತಲೆಯಲ್ಲಿ ಕಾಳಿಂಗ ನಾಗಮಣಿ  ಕಾವಲು ಕಾಯುತ್ತಿರುವ ವಿಡಿಯೋ ಇದಾಗಿದೆ. ಇದನ್ನು ನೋಡಿದವರು ಶಾಕ್ ಆಗಿದ್ದಾರೆ. ಈ ವಿಡಿಯೋವನ್ನು  ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಎಲ್ಲಿ ಯಾವಾಗ ಸೆರೆಯಾಗಿದ್ದು ಎಂಬ ಮಾಹಿತಿ ಇಲ್ಲ. (ಸೂಚನೆ: ಇದು ಕೇವಲ ವೈರಲ್‌ ವಿಡಿಯೋ ಆಗಿದೆ. ಇದರ ಸತ್ಯಾಸತ್ಯತೆಯನ್ನು Zee Kannada News ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.