Pak PM Shehbaz struggles with earphone : ವೈರಲ್ ವಿಡಿಯೋವೊಂದರಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಇಯರ್‌ಫೋನ್‌ ಹಾಕಿಕೊಳ್ಳಲು ಪರದಾಡುತ್ತಿರುವುದನ್ನು ಕಾಣಬಹುದು. ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದನ್ನು ನೋಡುತ್ತಾ ನಗುತ್ತಿದ್ದಾರೆ. ಇಯರ್‌ಫೋನ್‌ ಅನ್ನು ಹಾಕಿಕೊಳ್ಳಲು ಸಾಧ್ಯವಾಗದೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ "ಯಾರಾದರೂ ನನಗೆ ಸಹಾಯ ಮಾಡಬಹುದೇ?" ಎಂದು ಕೋರುತ್ತಾರೆ. ನಂತರ ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ಅವರ ಸಹಾಯಕ್ಕೆ ಎರಡು ಬಾರಿ ಬರುತ್ತಾನೆ ಮತ್ತು ಪುಟಿನ್ ಒಮ್ಮೆ ತಮ್ಮ ಇಯರ್‌ಫೋನ್‌ ಅನ್ನು ಪರಿಶೀಲಿಸುತ್ತಾರೆ. ಅಲ್ಲದೇ ಪಾಕ್‌ ಪ್ರಧಾನಿಯ ಪರದಾಟ ಕಂಡು ನಗುತ್ತಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Monkey Video : ಶಾಲೆಗೆ ಬಂದ ಮಂಗಣ್ಣ.! ವಿದ್ಯಾರ್ಥಿ ಪಕ್ಕ ಕುಳಿತು ಮಾಡಿದ ಕಿತಾಪತಿ ನೋಡಿ


ಇಯರ್‌ಫೋನ್‌ ಅನ್ನು ಪಾಕ್‌ ಪ್ರಧಾನಿ ಷರೀಫ್ ಹಾಕಿಕೊಳ್ಳುವವರೆಗೂ ರಷ್ಯಾ ಅಧ್ಯಕ್ಷ ಪುಟಿನ್ ಕಾಯುತ್ತಿದ್ದರು. ಪಾಕ್‌ ಪಿಎಂ ಷರೀಫ್ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೇ, ಪಾಕಿಸ್ತಾನವನ್ನು ಮುಜುಗರಕ್ಕೀಡು ಮಾಡಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬೆಂಬಲಿಗರು ಈ ವಿಡಿಯೋ ಕುರಿತು ಕಟುವಾಗಿ ಟೀಕಿಸಿದ್ದಾರೆ. ಈ ಘಟನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಮುಜುಗರ ತಂದಿದೆ ಎಂದು ಹೇಳಿದ್ದಾರೆ.


 


22ನೇ ಎಸ್‌ಸಿಒ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. 


ಇದನ್ನೂ ಓದಿ: Funny Video: ಮಂಗಗಳ ಕೈಗೆ ಸ್ಮಾರ್ಟ್‌ಫೋನ್‌ ಸಿಕ್ರೆ ಹೇಗಿರುತ್ತೆ? ಈ ವಿಡಿಯೋ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.