Funny Video: ಮಂಗಗಳ ಕೈಗೆ ಸ್ಮಾರ್ಟ್‌ಫೋನ್‌ ಸಿಕ್ರೆ ಹೇಗಿರುತ್ತೆ? ಈ ವಿಡಿಯೋ ನೋಡಿ

Funny Video : ಮಂಗನಿಂದಲೇ ಮಾನವ. ಕೋತಿ ಮನುಷ್ಯರಿಗೆ ತುಂಬಾ ಹತ್ತಿರವಾಗಿರುವ ಜೀವಿ ಎಂದು ಹೇಳಲಾಗುತ್ತದೆ.  ಹಾಗಾಗಿಯೇ ಹಲವು ಸಂದರ್ಭಗಳಲ್ಲಿ ಮನುಷ್ಯನ ವರ್ತನೆಯನ್ನು ಕೋತಿಗಳಿಗೆ ಹೋಲಿಸಲಾಗುತ್ತದೆ. 

Written by - Chetana Devarmani | Last Updated : Sep 12, 2022, 06:30 PM IST
  • ಈ ವಿಡಿಯೋವು ಮಂಗಗಳ ಸಣ್ಣ ಹಿಂಡಿಗೆ ಸಂಬಂಧಿಸಿದೆ
  • ಮಂಗಗಳ ಕೈಗೆ ಸ್ಮಾರ್ಟ್‌ಫೋನ್‌ ಸಿಕ್ರೆ ಹೇಗಿರುತ್ತೆ?
  • ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್
Funny Video: ಮಂಗಗಳ ಕೈಗೆ ಸ್ಮಾರ್ಟ್‌ಫೋನ್‌ ಸಿಕ್ರೆ ಹೇಗಿರುತ್ತೆ? ಈ ವಿಡಿಯೋ ನೋಡಿ   title=
ಮಂಗ

Monkeys Funny Video: ಕೋತಿ ಮನುಷ್ಯರಿಗೆ ತುಂಬಾ ಹತ್ತಿರವಾಗಿರುವ ಜೀವಿ. ಹಾಗಾಗಿಯೇ ಹಲವು ಸಂದರ್ಭಗಳಲ್ಲಿ ಮನುಷ್ಯನ ವರ್ತನೆಯನ್ನು ಕೋತಿಗಳಿಗೆ ಹೋಲಿಸಲಾಗುತ್ತದೆ. ಕೋತಿಗಳು ಎಂದೊಡನೆ ತಕ್ಷಣ ನೆನಪಾಗುವುದೇ ಅವುಗಳ ಚೇಷ್ಟೆ. ಒಂದು ಕ್ಷಣವೂ ಸುಮ್ಮನೆ ಕೂರದ ಅಥವಾ ಕುಳಿತಲ್ಲಿಯೇ ಏನಾದರೂ ಚೇಷ್ಟೆಯನ್ನು ಹುಡುಕುವ ಮಂಗಗಳ ತಮಾಷೆಯ ಚೇಷ್ಟೆಗಳನ್ನು  ನೋಡಿದರೆ ಯಾರು ತಾನೇ ನಗದೇ ಇರಲು ಸಾಧ್ಯ? ಈಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ವಿಡಿಯೋ ಮಂಗಗಳಿಗೆ ಸಂಬಂಧಿಸಿದೆ. 

ಯಾವುದಾದರೂ ವಸ್ತುವನ್ನು ತುಂಬಾ ಉತ್ಸಾಹಭರಿತವಾಗಿ ನೋಡುವಾಗ ಅಥವಾ ಆ ವಸ್ತುವನ್ನು ಎಂದೂ ಕಂಡೇ ಇಲ್ಲ ಎಂಬಂದೆ ಆಡುವುದನ್ನು ನೋಡಿದಾಗ, 'ಮಂಗನ ಕೈಗೆ ಮಾಣಿಕ್ಯ' ಕೊಟ್ಟ ಹಾಗೆ ಆಗಿದೆ ಎಂದು ಸಾಮಾನ್ಯವಾಗಿ ಮನೆಯಲ್ಲಿ ದೊಡ್ಡವರು ಹೇಳುವ ಮಾತನ್ನು ನಾವೆಲ್ಲರೂ ಒಂದಲ್ಲಾ ಒಂದು ಸಮಯದಲ್ಲಿ ಕೇಳಿಯೇ ಇರುತ್ತೇವೆ. ಆದರೆ ನಿಜವಾದ ಮಂಗಗಳ ಕೈಗೆ ಸ್ಮಾರ್ಟ್‌ಫೋನ್‌ ಕೊಟ್ಟಾಗ ಹೇಗಿರುತ್ತೆ?

ಇದನ್ನೂ ಓದಿ : Video viral : ನಡುರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದಾಡಿಕೊಂಡ ವ್ಯಕ್ತಿಗಳು

ವಾಸ್ತವವಾಗಿ, ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ತನ್ನ ಕ್ಯಾಮೆರಾದಲ್ಲಿ ಕೋತಿಗಳನ್ನು ಸೆರೆಹಿಡಿದಿರುವುದನ್ನು ಕಾಣಬಹುದು. ವೀಡಿಯೊ ಮಾಡಿ ಬಳಿಕ ಅದೇ ವಿಡಿಯೋವನ್ನು ಮಂಗಗಳಿಗೆ ತೋರಿಸಿದ್ದಾರೆ. ಹೌದು, ಈ ವೈರಲ್ ವಿಡಿಯೋದಲ್ಲಿ ಯಾರೋ ಒಬ್ಬರು ಒಂದು ಸಣ್ಣ ಮಂಗಗಳ ಹಿಂಡಿಗೆ ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೋ ಆನ್ ಮಾಡಿ ಕೊಟ್ಟಿದ್ದಾರೆ. ಮೊದಲಿಗೆ ಈ ವಿಡಿಯೋ ಫ್ರೇಮಿನಲ್ಲಿ ಮೂರು ಮಂಗಗಳು ವಿಡಿಯೋ ನೋಡುವುದನ್ನು ಕಾಣಬಹುದು. ಅವುಗಳಲ್ಲಿ ಒಂದು ಮಂಗ ವಿಡಿಯೋ ಕಂಡು ಏನೋ ಅಚ್ಚರಿಕಂಡಂತೆ ಉಬ್ಬೇರಿಸಿತು. ಫೋನ್ ಹಿಡಿದಿದ್ದ ವ್ಯಕ್ತಿ ಫೋನ್ ಅನ್ನು ಸ್ವಲ್ಪ ತಿರುಗಿಸುತ್ತಿದ್ದಂತೆ ಪಕ್ಕದಲ್ಲೇ ಇದ್ದ ಇನ್ನೊಂದು ಮಂಗ  ಸ್ಮಾರ್ಟ್‌ಫೋನ್‌ ಅನ್ನು ತನ್ನೆಡೆ ಕಸಿದು ವಿಡಿಯೋಗೆ ಚುಂಬಿಸಲು ಪ್ರಯತ್ನಿಸಿತು. 

 

 

ಅಷ್ಟರಲ್ಲಿ ಮತ್ತೊಂದು ದೊಡ್ಡ ಮಂಗ ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೋದಲ್ಲಿದ್ದ ಮಂಗಗಳ ಹಿಂಡನ್ನು ಸ್ಪರ್ಶಿಸಲು ಯತ್ನಿಸುತ್ತದೆ. ಬಳಿಕ ಆ ಮೂರು ಮಂಗಗಳು ವಿಡಿಯೋ ವೀಕ್ಷಿಸುತ್ತಿದ್ದವು. ಅಷ್ಟರಲ್ಲಿ ಹಿಂಬದಿಯಿಂದ ಒಂದು ಪುಟಾಣಿ ಕೋತಿ ಮರಿ ಗಾಬರಿಗೊಂಡಂತೆ ದೊಡ್ಡ ಕೋತಿಯ ಬಳಿ ಬರುತ್ತದೆ. ತನ್ನದೇ ವೀಡಿಯೋ ನೋಡಿ ಬೆಚ್ಚಿಬಿದ್ದ ಫ್ರೇಮಿನಲ್ಲಿದ್ದ ಚಿಕ್ಕ ಕೋತಿಯ ಪ್ರತಿಕ್ರಿಯೆ ನೋಡಲೇಬೇಕು.

ಇದನ್ನೂ ಓದಿ : WATCH : ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆ ಯೋಗಾಸನ.. ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!

ಕೆಲವೇ ಸೆಕೆಂಡುಗಳ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು ಇದುವರೆಗೂ ಸಾವಿರಾರು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ನೆಟಿಜನ್‌ಗಳು ಇದನ್ನು ಇಷ್ಟಪಟ್ಟಿದ್ದಾರೆ. ವೀಡಿಯೊ ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ತಿಳಿದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News