Snake Shocking Video: ಹೊಟ್ಟೆಯ ಹಸಿವು ತಾಳಲಾರದೆ ಈ ಹಾವು ಮಾಡಿದ ಕೆಲಸ ಕಂಡು ನೀವೂ ದಂಗಾಗುವಿರಿ
Snake Viral Video: ವಿಡಿಯೋದಲ್ಲಿ ಹಸಿದ ಹಾವೊಂದು ತನ್ನ ಸಹೋದರನನ್ನೇ ಜೀವಂತವಾಗಿ ನುಂಗುವುದನ್ನು ನೀವು ನೋಡಬಹುದು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ವಿಡಿಯೋ ನೋಡಿದವರು ದಂಗಾಗಿದ್ದಾರೆ. ವಿಡಿಯೋ ನೋಡಿದ ಹಲವು ನೆಟ್ಟಿಗರ ನಿದ್ದೆಯೇ ಹಾರಿಹೋಗಿದೆ. ಹಾವು ಎಷ್ಟೊಂದು ವೇಗದಲ್ಲಿ ತನ್ನ ಸಹೋದರನನ್ನು ನುಂಗಿ ಹಾಕಿದೆ ಎಂಬುದನ್ನು ನೀವು ವಿಡಿಯೋದಲ್ಲಿ ನೋಡಬಹುದು.
Snake Viral Video: ಹಸಿವಾದಾಗ ತಲೆಗೆ ಏನು ತೋಚುವುದೇ ಇಲ್ಲ, ಮುಂದೆ ಇರುವುದೆಲ್ಲ ಉದರದಾಹುತಿಗೆ ಸ್ವಾಹಾ ಆಗುತ್ತದೆ ಎಂದು ಜನ ಮಾತನಾಡಿಕೊಳ್ಳುವುದನ್ನು ನೀವು ಕೇಳಿರಬಹುದು. ಆದರೆ, ಹಸಿವಾದಾಗ ಯಾವುದಾದರೊಂದು ಜೀವ ತನ್ನ ಸಹೋದರ ಅಥವಾ ಸಹೋದರಿಯನ್ನೇ ತಿಂದು ಹಾಕುತ್ತದೆ ಎಂಬುದನ್ನು ನೀವು ಎಲ್ಲಾದರು ಕೇಳಿದ್ದೀರಾ ಅಥವಾ ನೋಡಿದ್ದೀರಾ? ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹುದ್ದೆ ಒಂದು ಬೆಚ್ಚಿಬೀಳಿಸುವ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹಸಿವಿನಿಂದ ಕಂಗಾಲಾದ ಹಾವೊಂದು ತನ್ನ ಸಹೋದರನನ್ನೇ ಜೀವಂತವಾಗಿ ನುಂಗುತ್ತಿರುವುದನ್ನು ನೀವು ಕಾಣಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ನೋಡಿದ ಜನರು ದಂಗಾಗಿದ್ದಾರೆ ಮತ್ತು ಅವರ ನಿದ್ದೆಯೇ ಹಾರಿಹೋಗಿದೆ.
ಇದನ್ನೂ ಓದಿ-Viral Video: ನಾಗರ ಹಾವು ಮೊಟ್ಟೆ ಇಡುವ ವಿಡಿಯೋ ವೈರಲ್.!
ವಿಚಿತ್ರ ಬಣ್ಣದ ಹಾವೊಂದು ತನ್ನ ಸಹೋದರನನ್ನೇ ನುಗುತ್ತಿರುವುದನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದು. ಹಾವಿಗೆ ತುಂಬಾ ಹಸಿವಾಗಿತ್ತು ಮತ್ತು ಅದಕ್ಕೆ ತಿನ್ನಲು ಏನೂ ಸಿಕ್ಕಿರಲಿಲ್ಲ ಎನ್ನಲಾಗುತ್ತಿದೆ. ಬಳಿಕ ಅದು ಎದುರಿಗೆ ಇರುವ ತನ್ನ ಸಹೋದರನನ್ನೇ ಬಾಯಿಯಲ್ಲಿ ತೆಗೆದುಕೊಂಡು ಜೀವಂತವಾಗಿಯೇ ಕ್ಷಣ ಮಾತ್ರದಲ್ಲಿ ನುಂಗಿಹಾಕಿದೆ ಎನ್ನಲಾಗುತ್ತಿದೆ. ಈ ವಿಡಿಯೋ ಜನರಿಗೆ ಭಾರಿ ಯೋಚನೆಗೀಡು ಮಾಡಿದೆ. ವಿಡಿಯೋ ನೋಡಿ...
ಇದನ್ನೂ ಓದಿ-Snake & Mongoose Fight: ರಸ್ತೆ ಮಧ್ಯೆ ಹಾವು - ಮುಂಗುಸಿ ಕಾದಾಟ, 5 ನಿಮಿಷಗಳ ಹೋರಾಟದಲ್ಲಿ ಗೆದ್ದವರು ಯಾರು?
ಹಾಗೆ ನೋಡಿದರೆ ಹಾವುಗಳು ಪ್ರಪಂಚದ ಅತ್ಯಂತ ವಿಷಕಾರಿ ಜಂತುಗಳಲ್ಲಿ ಒಂದಾಗಿವೆ. ಆದರೆ, ತನ್ನಂತೆಯೇ ಹೋಲುವ ಯಾವುದಾದರೊಂದು ಇತರ ಜಂತುವನ್ನು ನುಂಗಿಹಾಕುತ್ತದೆ ಎಂಬುದು ಕೇಳಲು ಸಿಗುವುದು ತೀರಾ ವಿರಳ. ಹೆಬ್ಬಾವು ನುಂಗಿಹಾಕಬಹುದು ಆದರೆ ಹಾವಿನ ವಿಷಯದಲ್ಲಿ ಅದು ಸ್ವಲ್ಪ ಅತಿಶಯೋಕ್ತಿಯೇ ಹೌದು, ಈ ವಿಡಿಯೋ ನೋಡಿದ ಜನರ ಬೆವರಿಳಿದಿದೆ ಮತ್ತು ಅವರು ದಂಗಾಗಿದ್ದಾರೆ. ಈ ವಿಡಿಯೋದಲ್ಲಿ ನೀವು ಕೆಂಪು ಬಣ್ಣದ ಮುಖವಿರುವ ವಿಚಿತ್ರ ಹಾವನ್ನು ನೋಡಬಹುದು. ಈ ವಿಡಿಯೋವನ್ನು ವೈಲ್ಡ್ ಅನಿಮಲ್ ಪಿಕ್ಸ್ ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದುವರೆಗೂ 40 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.