Viral Video : 20 ವರ್ಷದ ಯುವತಿಯನ್ನು ಮದುವೆಯಾದ ಬಚ್ಚು ಬಾಯಿ ಮುದುಕನ ಖುಷಿ ನೋಡಿ..

Viral Video : 60 ವರ್ಷದ ವರ ಹಾಗೂ 20 ವರ್ಷದ ವಧುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ನೆಟಿಜನ್‌ಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ.  

Written by - Chetana Devarmani | Last Updated : Oct 9, 2022, 03:05 PM IST
  • ಸುಂದರಿ ಯುವತಿಯನ್ನು ಮದುವೆಯಾದ ಬಚ್ಚು ಬಾಯಿ ಮುದುಕ
  • ವಯಸ್ಸಾದ ವ್ಯಕ್ತಿ ಚಿಕ್ಕವಯಸ್ಸಿನ ಹುಡುಗಿಯ ಮದುವೆ
  • ಈ ದೃಶ್ಯವನ್ನು ನೋಡಿದ ಜನರು ಕೂಡ ಬೆಚ್ಚಿಬಿದ್ದಿದ್ದಾರೆ
Viral Video : 20 ವರ್ಷದ ಯುವತಿಯನ್ನು ಮದುವೆಯಾದ ಬಚ್ಚು ಬಾಯಿ ಮುದುಕನ ಖುಷಿ ನೋಡಿ.. title=
ಮದುವೆ

Viral Video : ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಡಿಯೋಗಳು ವೈರಲ್‌ ಆಗುತ್ತವೆ. ಕೆಲವೊಮ್ ಅಂತಹ ವಿಡಿಯೋಗಳು ನಮ್ಮಲ್ಲಿ ನಗುವಿಗೆ ಕಾರಣವಾಗುತ್ತವೆ. ಮತ್ತೆ ಕೆಲವೊಮ್ಮೆ ಕಣ್ಣುಗಳು ತೇವವಾಗುತ್ತವೆ. ಆದರೆ ಇದೀಗ ಅತಿ ಹೆಚ್ಚು ನೋಡಿರುವ ವಿಡಿಯೋ ಯಾರಿಗಾದರೂ ಅಚ್ಚರಿ ಮೂಡಿಸುತ್ತದೆ. ವಿಡಿಯೋ ವಧು-ವರರಿಗೆ ಸಂಬಂಧಿಸಿದ್ದು, ಆದರೆ ಇಬ್ಬರ ವಯಸ್ಸಿನ ವ್ಯತ್ಯಾಸ ನೋಡಿ ತಲೆ ತಿರುಗುತ್ತದೆ. ಈ ವಿಡಿಯೋವನ್ನು ಕ್ಷಣಮಾತ್ರದಲ್ಲಿ ಸಾವಿರಾರು ಲಕ್ಷ ಬಾರಿ ವೀಕ್ಷಿಸಲಾಗಿದ್ದು, ನೆಟಿಜನ್‌ಗಳು ಕೂಡ ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ : Snake & Mongoose Fight: ರಸ್ತೆ ಮಧ್ಯೆ ಹಾವು - ಮುಂಗುಸಿ ಕಾದಾಟ, 5 ನಿಮಿಷಗಳ ಹೋರಾಟದಲ್ಲಿ ಗೆದ್ದವರು ಯಾರು?

ಕೆಲವು ಸೆಕೆಂಡುಗಳ ಈ ವಿಡಿಯೋದಲ್ಲಿ, ಸುಮಾರು 60 ವರ್ಷ ವಯಸ್ಸಿನ ವೃದ್ಧನೊಬ್ಬ ವರನ ಬಟ್ಟೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಅವನ ಕೊರಳಲ್ಲಿ ಹೂವಿನ ಹಾರವಿದೆ. ತಲೆಯ ಮೇಲೆ ಪೇಟವಿದೆ. ಅವನ ಪಕ್ಕದಲ್ಲಿ ಇಪ್ಪತ್ತು ವರ್ಷದ ಹುಡುಗಿ ಕುಳಿತಿದ್ದಾಳೆ. ಅದನ್ನು ನೋಡಿದಾಗ ಹುಡುಗಿ ವಯಸ್ಸಾದವರ ಹೆಂಡತಿ ಎಂದು ಗೊತ್ತಾಗಿದ್ದು, ಇಬ್ಬರಿಗೂ ಈಗಷ್ಟೇ ಮದುವೆಯಾಗಿದೆ. 

 

 

ವಾಸ್ತವವಾಗಿ, ಮದುವೆಯ ನಂತರ, ತಮ್ಮ ವಧುವಿನ ಬಳಿ ಕುಳಿತಿರುವ ತಾತ ತುಂಬಾ ಸಂತೋಷಪಡುತ್ತಿದ್ದಾರೆ. ಸನ್ನೆಗಳಲ್ಲಿ ಮಾತನಾಡುತ್ತಾರೆ. ಅದೇ ವೇಳೆ ಇವರಿಬ್ಬರ ವಯಸ್ಸಿನ ವ್ಯತ್ಯಾಸ ನೋಡಿ ನೆಟ್ಟಿಗರೂ ಕೂಡ ಅಚ್ಚರಿಗೊಂಡಿದ್ದಾರೆ. ಈ ವಿಡಿಯೋಗೆ ಜನರು ಅನೇಕ ಕಾಮೆಂಟ್ ಮಾಡುತ್ತಿದ್ದಾರೆ.  

ಇದನ್ನೂ ಓದಿ : Viral Video: ನಾಗರ ಹಾವು ಮೊಟ್ಟೆ ಇಡುವ ವಿಡಿಯೋ ವೈರಲ್‌.!

ಕೆಲವೇ ಸೆಕೆಂಡುಗಳಲ್ಲಿ ಹೊರಬಿದ್ದ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. ಅವರ ಮುಖದಲ್ಲಿನ ಸಂತೋಷವನ್ನು ಈ ವಿಡಿಯೋದಲ್ಲಿ ಕಾಣಬಹುದು. ಕುಳಿತಿರುವ ವಧು ಸಂಪೂರ್ಣವಾಗಿ ಮೌನವಾಗಿದ್ದಾಳೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News