Scrap Seller earnings : ಮಾಡುವ ವೃತ್ತಿಯನ್ನು ಗೌರವಿಸಿ, ಕೆಲಸವನ್ನೇ ದೇವರಂತೆ ಪರಿಗಣಿಸಿ ಎಂದು ಹಿರಿಯರು ಯಾವಾಗಲೂ ಹೇಳುತ್ತಾರೆ. ದೊಡ್ಡವರಾಗಲಿ ಚಿಕ್ಕವರಾಗಲಿ ಕಷ್ಟಪಟ್ಟು ದುಡಿಯುವವರನ್ನು ಗೌರವಿಸಬೇಕು ಅಂತ ಹೇಳಲಾಗುತ್ತದೆ. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಇತಿಹಾಸದಲ್ಲಿ ಪುಟ ಬರೆದವರು ಅನೇಕರಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು, ಸಣ್ಣಪುಟ್ಟ ಕೆಲಸ ಮಾಡುವವರನ್ನು ಕೀಳಾಗಿ ಕಾಣುವ ಮೊದಲು ಅವರ ಕುರಿತು ಅರಿಯುವುದು ತುಂಬಾ ಒಳ್ಳೆಯದು.. ಅವರು ನಿಮ್ಮ ನಿರೀಕ್ಷೆಗೂ ಮೀರಿ ಎತ್ತರಕ್ಕೆ ಹೋದವರೂ ಇರುತ್ತಾರೆ. ಆದ್ದರಿಂದಲೇ ಯಾರನ್ನೂ ಕೀಳಾಗಿ ಕಾಣಬಾರದು. ಈ ಮಾತಿಗೆ ಅನುಗುಣವಾಗುವ ಅನೇಕ ಸುದ್ದಿಗಳು ಮತ್ತು ವೀಡಿಯೊಗಳು ಪ್ರತಿದಿನ ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುತ್ತವೆ.


ಇದನ್ನೂ ಓದಿ:300 ವರುಷಗಳ ಇತಿಹಾಸ ಹೊಂದಿದೆ ತಿರುಪತಿ ಲಡ್ಡು! ಈ ಪ್ರಸಾದದ ಹಿನ್ನೆಲೆ ಏನು? ಮೊದಲ ಬಾರಿಗೆ ತಯಾರಿಸಿದ್ದು ಯಾರು? ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ


ಈ ಪೈಕಿ ಕಳೆದ ಕೆಲವು ದಿನಗಳಿಂದ ವೀಡಿಯೊ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಯುವಕನೊಬ್ಬ ರಸ್ತೆಯಲ್ಲಿ ಕಸ ಸಂಗ್ರಹಿಸುತ್ತಿದ್ದ. ಕಸ ಎತ್ತುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ. ಅಂತಹ ಯುವಕನನ್ನು ಬ್ಲಾಗರ್ ಒಬ್ಬರು ರಸ್ತೆಯಲ್ಲಿ ಭೇಟಿಯಾದರು. ಅವನೊಂದಿಗೆ ಅನೇಕ ವಿಷಯಗಳ ಕುರಿತು ಮಾತನಾಡುತ್ತಾ ಆದಾಯದ ಬಗ್ಗೆ ಕೇಳಿದನು. 


ನೀವು ಒಂದು ದಿನ್ಕಕೆ ಎಷ್ಟು ಸಂಪಾದಿಸುತ್ತೀರಿ ಅಂತ ಬ್ಲಾಗರ್‌ ಯುವಕನ್ನು ಕೇಳಿದನು.. ಅದಕ್ಕೆ ಆ ಯುವಕ 5 ಸಾವಿರ ರೂ. ಅಂತಾನೆ.. ಇದನ್ನ ಕೇಳಿ ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಬೆಚ್ಚಿಬಿದ್ದಿದ್ದಾನೆ. ದಿನಕ್ಕೆ ಐದು ಸಾವಿರ ಆದಾಯ ಎಂದರೆ ಆ ಯುವಕನ ತಿಂಗಳಿಗೆ ಒಂದು ಲಕ್ಷದ 50 ಸಾವಿರ ರೂ. ಗಳಿಗೆ ಮಾಡುತ್ತಾನೆ..


ಇದನ್ನೂ ಓದಿ:ನೌಕೆ, ಸೇನೆ, ವಾಯುಪಡೆಯ ಕಮಾಂಡರ್‌ಗಳಾದ ʼಬೆಸ್ಟ್‌ ಫ್ರೆಂಡ್ಸ್ʼ:‌ ಮೂವರು ಸ್ನೇಹಿತರ ಕೈಸೇರಿದ ಭಾರತದ ಸರ್ವ ಸೇನಾಪಡೆ


ಈ ವೀಡಿಯೊವನ್ನು @D3vilsCall ಖಾತೆಯಿಂದ X ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಈಗಾಗಲೇ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರೊಬ್ಬರು.. ಒಬ್ಬ ಜಡ್ಜ್ ಗಿಂತ ಜಾಸ್ತಿ ಸಂಪಾದನೆ ಮಾಡ್ತಾನೆ ಅಣ್ಣ’ ಅಂತ ಕಾಮೆಂಟ್ ಹಾಕಿದರೆ.. ಮತ್ತೊಬ್ಬರು ‘ರಸ್ತೆಯಲ್ಲಿ ಕಸ ತೆಗೆಯೋಕೆ ಶುರು ಮಾಡೋಣ ಬನ್ನಿ?’ ಅಂತ ಕಮೆಂಟ್ ಮಾಡಿದ್ದಾನೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.