Expensive Dog : ₹10 ಕೋಟಿ ಮೌಲ್ಯದ ನಾಯಿ ನೋಡಲು ಮುಗಿಬಿದ್ದ ಜನ!
ನಗರದಲ್ಲಿ ದಸರಾ ಅಂಗವಾಗಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶಿವಮೊಗ್ಗ : 10 ಕೋಟಿ ರೂಪಾಯಿ ಮೌಲ್ಯದ ನಾಯಿಯನ್ನು ನೋಡಲು ಜನ ಮುಗಿ ಬಿದ್ದ ಘಟಕ ನಗರದ ಗಾಂಧಿ ಪಾರ್ಕ್ ನಲ್ಲಿ ನಡೆದಿದೆ, ಈ ಘಟನೆ ರವಿವಾರ ನಡೆದಿದೆ.
ನಗರದಲ್ಲಿ ದಸರಾ ಅಂಗವಾಗಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಉಡುಪಿ, ಭದ್ರಾವತಿ, ದಾವಣಗೆರೆ ಹೀಗೆ ರಾಜ್ಯದ ಹಲವಾರು ಜಿಲ್ಲೆಗಳಿಂದ ಶ್ವಾನ ಪ್ರಿಯರು ಶ್ವಾನ ಪ್ರಿಯರು ಭಾಗವಹಿಸಿದ್ದರು.
ಇದನ್ನೂ ಓದಿ : ಆಟೋ ಪ್ರಯಾಣಿಕರಿಗೆ ಸಿಹಿ ಸುದ್ದಿ : ಚಾಲಕರ ಸುಲಿಗೆಗೆ ನಮ್ಮ ಮೆಟ್ರೋ ನಿಗಮದಿಂದ ಬ್ರೇಕ್, BMRCL ಮಹತ್ವದ ನಿರ್ಧಾರ
ಶ್ವಾನ ಸ್ಪರ್ಧೆಯಲ್ಲಿ ಜರ್ಮನ್ ಶೆಫರ್ಡ್, ರಾಟ್ ವಿಲ್ಲರ್ ಫಗ್, ಪಮೋರಿಯನ್ ಮುಧೋಳ, ಗೋಲ್ಡನ್ ರಿಟ್ರೇವರ್, ಹಸ್ಕಿ, ಹೀಗೆ 15 ತಳಿಯ ನಾಯಿಗಳು ಭಾಗವಹಿಸಿದ್ದವು.
ಆದ್ರೆ, ಇಲ್ಲಿ ಗಮನಸೆಳೆದ ನಾಯಿ ಎಂದರೆ ಬೆಂಗಳೂರಿನ ಇಂಡಿಯನ್ ಡಾಗ್ ಬ್ರಿಡರ್ ಅಸೋಸಿಯೇಶನ್ಸ್ ಅಧ್ಯಕ್ಷ ಸತೀಶ್ ಅವರು ತಂದ ಟಿಬೇಟಿಯನ್ ಮಸ್ತಿಫ್ ನಾಯಿ, ಈ ನಾಯಿಯ ಬೆಲೆ 10 ಕೋಟಿ ರೂ. ಇದಕ್ಕೆ ಅವರು 'ಭೀಮ' ಎಂದು ಹೆಸರಿಟ್ಟಿದ್ದಾರೆ. ಇದನ್ನೂ ನೋಡಲು ಜನ ಸಾಗರವೆ ಹರಿದು ಬಂದಿತ್ತು.
ಸತೀಶ್ ಅವರು ಇದನ್ನ ಬೀಜಿಂಗ್‌ನಿಂದ ತರಿಸಿಕೊಂಡಿದ್ದಾರೆ. ಇದಕ್ಕೆ ಸಧ್ಯ ಎರಡು ವರ್ಷ ವಯಸ್ಸು. ಇದರ ಆರೈಕೆಯ ಬಗ್ಗೆ ಹೇಳಿದ ಸತೀಶ್, ಭೀಮನಿಗೆ ಪ್ರತಿದಿನ ಚಿಕನ್ ನೀಡುತ್ತವೆ, ಎಸಿ ರೊಂನಲ್ಲಿ ಮಲಗಿಸುತ್ತವೆ. ಇದಕ್ಕೆ ಪ್ರತಿ ತಿಂಗಳು 50 ರೂ. ಖರ್ಚು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : CFI ಮೇಲೆ ದಾಳಿ ವೇಳೆ ಸಿಕ್ಕಿದೆ ಯುವ ಸಮೂಹವನ್ನು ಬ್ರೈನ್ ವಾಶ್ ಮಾಡುವ ನರಮೇಧದ ಪತ್ರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.