Student viral video : ಹುಚ್ಚುಕೋಡಿ ಮನಸ್ಸು ಅದು ಹದಿನಾರರ ವಯಸ್ಸು ಅನ್ನುವ ಮಾತನ್ನು ಎಲ್ಲರೂ ಕೇಳಿರುತ್ತೀರಿ. ಈ ವಯಸ್ಸಿನಲ್ಲಿ ಏನು ಮಾಡುತ್ತಿದ್ದೇವೆ, ಯಾಕೆ ಮಾಡುತ್ತಿದ್ದೇವೆ ಎನ್ನುವುದೇ ಅರ್ಥವಾಗುವುದಿಲ್ಲವಂತೆ. ನೋಡಿದ್ದೆಲ್ಲವೂ ಚಂದ ಕಂಡಿದ್ದೆಲ್ಲವೂ ಬೇಕು ಎನ್ನುವ ತುಡಿತ. ಪ್ರೀತಿ ಪ್ರೇಮ ಎಂದು ಮನಸ್ಸು ಹಾಡುವುದು ಕೂಡಾ ಈ ವಯಸ್ಸಿನಲ್ಲಿಯೇ ಹೆಚ್ಚು. ಪ್ರೀತಿಯಲ್ಲಿ ಬಿದ್ದ ಹುಚ್ಚು ಮನಸ್ಸು ಜನ ಜಂಗುಳಿ, ಸ್ಥಳ ಇದೆಲ್ಲವನ್ನೂ ಮರೆತು ಬಿಡುತ್ತದೆ. ಇಂಥಹ ಒಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಹುಡುಗಿಯನ್ನು ಹುಡುಗರು ಚುಡಾಯಿಸುತ್ತಾರೆ ಎನ್ನುವುದೇ ಸಾಮಾನ್ಯವಾಗಿ ಜನರ ಮನಸ್ಸಿನ ಭಾವನೆ. ಬಹುತೇಕ ಪ್ರಕರಣಗಳಲ್ಲಿ ಇದು ಹೌದು ಕೂಡಾ. ಆದರೆ ಇಲ್ಲಿ ಸ್ವಲ್ಪ ಟ್ವಿಸ್ಟ್ ಇದೆ. ಇಲ್ಲಿ ತರಗತಿಯಲ್ಲಿ ಹುಡುಗ ಪಾಪ ತನ್ನ ಪಾಡಿಗೆ ತಾನು ಓದುವುದರಲ್ಲಿ ಮಗ್ನನಾಗಿ ಕುಳಿತಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಒಬ್ಬ ಹುಡುಗಿಯ ಎಂಟ್ರಿಯಾಗುತ್ತದೆ. ಆ ಹುಡುಗಿಯ ಕೈಯ್ಯಲ್ಲಿ ಗುಲಾಬಿಯ ಹೂವನ್ನು ಕೂಡಾ ಕಾಣಬಹುದು.  


ಇದನ್ನೂ ಓದಿ : Viral video : ಸರ ಸರನೆ ಬಂದು ಮನೆ ಒಳಗೆ ನುಗ್ಗಲು ಯತ್ನಿಸಿದ ಹಾವು.! ಮುಂದೆ?


ಹುಡುಗಿ ಬಂದು  ಹುಡುಗನ ಮುಂದೆ ಕುಳಿತು ಗುಲಾಬಿ ನೀಡುತ್ತಿದ್ದಂತೆಯೇ ಹುಡುಗ ಬೆಚ್ಚಿ ಬೀಳುತ್ತಾನೆ. ತನಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಪಕ್ಕದ ಬೆಂಚಿಗೆ ತಿರುಗಿಕೊಳ್ಳುತ್ತಾನೆ. ಆದರೆ ಅಲ್ಲಿಗೆ ಇನ್ನೊಬ್ಬ ಹುಡುಗಿ ಬಂದು ಸೇರುತ್ತಾಳೆ. ಇಬ್ಬರು ಹುಡುಗಿಯರು ಸೇರಿ ಆ ಹುಡುಗನಿಗೆ ಪ್ರಪೋಸ್ ಮಾಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. 



ಈ ವಿಡಿಯೋವನ್ನು ನೋಡುವಾಗ ಹೆಣ್ಣು ಮಕ್ಕಳಾಗಲೀ ಗಂಡು ಮಕ್ಕಳಾಗಲಿ ಮನೆಯಿಂದ ಹೊರಗೆ  ಹೋದ ಮೇಲೆ ಯಾರೂ ಸುರಕ್ಷಿತವಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗುತ್ತಿದೆ. 


ಇದನ್ನೂ ಓದಿ : Viral video : ಸೂಕ್ಷ್ಮವಾಗಿ ನೋಡಿ.. ಬಾಳೆಹಣ್ಣು ಅಂತ ಕೈಹಾಕಿದ್ರೆ ಗೋವಿಂದ.. ಗೋವಿಂದಾ...!


ಫಂಟಾಪ್ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಅಲ್ಲದೆ, ಈ ವಿಡಿಯೋಗೆ ನೆಟಿಜನ್‌ಗಳು ಹಲವಾರು ನೆಗೆಟಿವ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.  ಈ ವೀಡಿಯೋವನ್ನು ಇದುವರೆಗೆ ಲಕ್ಷ ಲಕ್ಷ ಮಂದಿ ವೀಕ್ಷಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.