Banana Snake viral video : ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವೀಡಿಯೊಗಳನ್ನು ನೋಡಿ ಕಳೆಯುತ್ತಿದ್ದಾರೆ. ಕೆಲ ಇಂಟ್ರೆಸ್ಟಿಂಗ್ ವೀಡಿಯೋಗಳು ಎಲ್ಲರಿಗೂ ಸ್ಟ್ರೆಸ್ ಬಸ್ಟರ್. ಅಚ್ಚರಿ, ಅಪರೂಪದ ವಿಡಿಯೋಗಳನ್ನು ನೋಡುವ ಮೂಲಕ ಒತ್ತಡ ಕಳೆದುಕೊಳ್ಳುತ್ತಾರೆ. ಕಾಮಿಡಿ ವಿಡಿಯೋಗಳಂತೂ ಇನ್‌ಸ್ಟಾಗ್ರಾಮ್‌ಗಲ್ಲಿ ತುಂಬಿರುತ್ತವೆ.
ಅಲ್ಲದೆ, ಹುಚ್ಚುಚ್ಚಾಗಿ ಜನರು ಮಾಡುವ ರೀಲ್‌ಗಳು ಮತ್ತು ಯೂಟ್ಯೂಬ್ ವೈರಲ್ ವೀಡಿಯೊಗಳು ಜನರ ಗಮನ ಸೆಳೆಯುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಸಿಗುವ ವಿಡಿಯೋಗಳಲ್ಲಿ ಕಾಡು ಪ್ರಾಣಿಗಳು, ಹಾವುಗಳ ವೀಡಿಯೋ ನೋಡುವವರೇ ಹೆಚ್ಚು. ಅಲ್ಲದೆ, ತಾವು ನೋಡಿ ಸುಮ್ಮನಿರದೆ ತಮ್ಮ ಸ್ನೇಹಿತರಿಗೂ ಸಹ ಕಳುಹಿಸಿ ಅವರನ್ನೂ ಹೆದರಿಸುತ್ತಾರೆ. ಈ ಹಾವುಗಳ ವೀಡಿಯೋ ನೋಡಿ ತುಂಬಾ ಜನ ಹೆದರುತ್ತಾರೆ. ಆದರೆ ಕೆಲವರು ಇದನ್ನು ಕೂಲ್ ಆಗಿ ತೆಗೆದುಕೊಳ್ಳುತ್ತಾರೆ.
The way this ball python looks like a banana 🍌
pic.twitter.com/xdUt6K2a2R— Science girl (@gunsnrosesgirl3) January 8, 2023
ಇದನ್ನೂ ಓದಿ: Trending Video : ಅರೆ.. ಸೀರೆಯುಟ್ಟು ಜಿಮ್‌ನಲ್ಲಿ ವರ್ಕೌಟ್! ಹೇ ನಾರಿ ನಿನಗ್ಯಾರೇ ಸಾಟಿ?
ಇಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಇದು ಬಾಳೆಯ ಹಣ್ಣಿನಂತೆ ಕಾಣುವ ಹಾವಿನ ವಿಡಿಯೋ. ನಂಬಲಾಗುತ್ತಿಲ್ಲವೇ..? ಇದು ಬಾಲ್ ಪೈಥಾನ್. ಬಾಲ್ ಪೈಥಾನ್ ಹೆಬ್ಬಾವು ಜಾತಿಗೆ ಸೇರಿದೆ. ಬಾಲ್ ಹೆಬ್ಬಾವುಗಳಲ್ಲಿ ಹಲವು ರೂಪಗಳಿವೆ. ಆದರೆ ಈ ವೀಡಿಯೋದಲ್ಲಿರುವ ಹಾವನ್ನು ನೋಡಿದ್ರೆ ಇದು ನಿಜಕ್ಕೂ ಇದು ಬಾಳೆಹಣ್ಣೇ ಅಂತ ತಿಳಿದು ಕೈ ಹಾಕಿದ್ರೆ ಕಚ್ಚಿಸಿಕೊಳ್ಳೊದಂತು ಸತ್ಯ. ಜನರನ್ನು ದಾರಿತಪ್ಪಿಸಲು ಹಾವಿನ ಪಕ್ಕದಲ್ಲಿ ಹಣ್ಣನ್ನೂ ಇಡಲಾಗಿದೆ ಅಷ್ಟೇ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ವಿಡಿಯೋಗೆ ಕಾಮೆಂಟ್ ಮಾಡಿರುವ ನೆಟ್ಟಿಗರು, ಒಂದು ವೇಳೆ ಈ ಹಾವು ಬಾಳೆಹಣ್ಣಿನ ಬುಟ್ಟಿಯಲ್ಲಿ ಗೊತ್ತಿಲ್ಲ ಹೋದ್ರೆ ಹೇಗೆ..? ಪ್ರಶ್ನೆಮಾಡಿದ್ದಾರೆ. ಈ ವೀಡಿಯೊವನ್ನು ಸೈನ್ಸ್ ಗರ್ಲ್ ಟ್ವಿಟರ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಇಲ್ಲಿಯವರೆಗೆ 852.4k ಜನರು ವೀಕ್ಷಿಸಿದ್ದಾರೆ. ಈ ವಿಡಿಯೋದ ಕೆಳಗೆ ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.