ನವದೆಹಲಿ : Man Dancing With Dangerous Python - ಸಾಮಾನ್ಯವಾಗಿ ಯಾವುದೇ ಹಾವು ನಮಗೆ ಕಂಡರೆ, ನಾವು ಬೆಚ್ಚಿಬೀಳುತ್ತೇವೆ. ಹೀಗಿರುವಾಗ ಹಬ್ಬಾವಿನ ವಿಷಯದಲ್ಲಿ ಹೇಳುವುದಾದರೆ , ಅದು ಮನುಷ್ಯರನ್ನು ಸೇರಿದಂತೆ ಇತರ ಹಲವು ಪ್ರಾಣಿಗಳನ್ನು ಜೀವಂತವಾಗಿ ನುಂಗುತ್ತದೆ. ಹೀಗಾಗಿ ಹೆಬ್ಬಾವುಗಳಿಂದ ದೂರವಿರಲು ಯಾವಾಗಲೂ ಸಲಹೆ ನೀಡಲಾಗುತ್ತದೆ. ಆದರೆ, ಇದಕ್ಕೆ ವ್ಯತರಿಕ್ತ ಎಂಬಂತೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಎರಡು ಹೆಬ್ಬಾವುಗಳನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ನೀವು ಗಮನಿಸಬಹುದು. 

COMMERCIAL BREAK
SCROLL TO CONTINUE READING

ಆ ವ್ಯಕ್ತಿ ಹೆಬ್ಬಾವನ್ನು ಹೆಗಲ ಮೇಲೆ ಹೊತ್ತುಕೊಂಡು ನೃತ್ಯ ಮಾಡುತ್ತಿದ್ದಾನೆ
ಆದರೆ, ಎರಡು ಅಪಾಯಕಾರಿ ಹೆಬ್ಬಾವುಗಳನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು, ವ್ಯಕ್ತಿ ಕೇವಲ ನಡೆದುಕೊಂಡು ಹೋಗುತ್ತಿಲ್ಲ. ಆತ ಮಾಡುತ್ತಿರುವುದನ್ನು ನೀವು ಊಹಿಸಲು ಕೂಡ ಸಾಧ್ಯವಿಲ್ಲ. ಆ ವ್ಯಕ್ತಿ ಈ ಹೆಬ್ಬಾವುಗಳನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ನೃತ್ಯ ಮಾಡುತ್ತಿರುವುದನ್ನು ನೋಡಿದರೆ, ನಿಮಗೂ ಕೂಡ ಆಶ್ಚರ್ಯವಾಗಬಹುದು. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ವ್ಯಕ್ತಿಯ ಹುಚ್ಚುತನಕ್ಕೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ವೀಡಿಯೋ ಮಾಡುವ ಭರದಲ್ಲಿ ವ್ಯಕ್ತಿ ಎಷ್ಟೊಂದು ದೊಡ್ಡ ಅಪಾಯ ತೆಗೆದುಕೊಂಡಿದ್ದಾನೆ ಎಂದು ಜನ ಅಂದುಕೊಳ್ಳುತ್ತಿದ್ದಾರೆ.


ಇದನ್ನೂ ಓದಿ-ನಾಗರಹಾವಿನೊಂದಿಗೆ ಮುಂಗುಸಿಗಳ ಕಾಳಗ- ವಾಚ್ ವಿಡಿಯೋ

ವೈರಲ್ ವಿಡಿಯೋವನ್ನು ನೋಡಿ ನೀವೂ ಕೂಡ ಒಂದು ಕ್ಷಣ ನಿಮ್ಮ ಎರಡೂ ಕೈಗಳಿಂದ ನಿಮ್ಮ ತಲೆ ಹಿಡಿದುಕೊಳ್ಳುವಿರಿ. ವ್ಯಕ್ತಿ ಎರಡೂ ಹೆಬ್ಬಾವುಗಳನ್ನು ತನ್ನ ಭುಜದ ಮೇಲೆ ಹೊತ್ತು ನೃತ್ಯ ಮಾಡಲು ಆರಂಭಿಸುತ್ತಾನೆ. ವ್ಯಕ್ತಿ ತನ್ನ ಮುಖಕ್ಕೆ ಮಾಸ್ಕ್ ಧರಿಸಿದ್ದು, ಆತನ ತಲೆ ಮೇಲೆ ಟೋಪಿ ಕೂಡ ಇದೆ. ವ್ಯಕ್ತಿ ಕೇವಲ ಎರಡೂ ಹೆಬ್ಬಾವುಗಳ ಮುಖಗಳನ್ನು ಮಾತ್ರ ತನ್ನ ಹೆಗಲ ಮೇಲೆ ಇಟ್ಟುಕೊಂಡಿದ್ದಾನೆ ಮತ್ತು ನಂತರ ನೃತ್ಯ ಮಾಡಲು ಆರಂಭಿಸುತ್ತಾನೆ. 



ಇದನ್ನೂ ಓದಿ-Viral Video: ವಿಮಾನಕ್ಕೆ ಡಿಕ್ಕಿ ಹೊಡೆದ ಟೆಸ್ಲಾ ಕಾರು, ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ

ಈ ದೃಶ್ಯವನ್ನು ನೋಡಿದವರೆಲ್ಲರೂ ವ್ಯಕ್ತಿಯನ್ನು ಹುಚ್ಚು ಎಂದು ಕರೆಯುತ್ತಿದ್ದಾರೆ. ಆದರೆ, ವ್ಯಕ್ತಿ ಮಾತ್ರ ಎರಡೂ ಹೆಬ್ಬಾವುಗಳ ಜೊತೆ ಸುಲಭವಾಗಿ ಚೆಲ್ಲಾಟವಾಡುತ್ತಿರುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಸಾಮಾನ್ಯವಾಗಿ ನೀವು ಇಂತಹ ದೃಶ್ಯವನ್ನು ನಿಮ್ಮ ಜೀವನದಲ್ಲಿ ಎಂದೂ ನೋಡಿರಲಿಕ್ಕಿಲ್ಲ. world_of_snakes ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, 'ವ್ಯಕ್ತಿ ತನ್ನ ಜೀವನಕ್ಕೆ ಬೇಸತ್ತು ಹೋಗಿದ್ದಾನೆ ಎಂಬಂತಿದೆ' ಎಂದಿದ್ದಾರೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.