Shocking Viral Video: ಜನ ವಾಯುವಿಹಾರಕ್ಕೆ ಹೋಗುವಾಗ ತಮ್ಮ ಮನೆಯಲ್ಲಿರುವ ಸಾಕು ಪ್ರಾಣಿಯನ್ನು ಕರೆದುಕೊಂಡು ಹೋಗುವುದನ್ನು ನೀವು ನೋಡಿರಬಹದು ಮತ್ತು ಅದು ಸಾಮಾನ್ಯ ಕೂಡ ಹೌದು. ಕೆಲವರು ತಮ್ಮ ಜೊತೆಗೆ ಸಾಕು ನಾಯಿಯನ್ನು ಕರೆದುಕೊಂಡು ಹೋದರೆ, ಕೆಲವರು ತಮ್ಮ ಸಾಕು ಬೆಕ್ಕನ್ನು ತೆಗೆದುಕೊಂಡು ಹೋಗಲು ಇಷ್ಟಪಡುತ್ತಾರೆ. ಆದರೆ, ಮನುಷಯನೊಬ್ಬ ತಯನ್ನೊಂದಿಗೆ ಹುಲಿಯನ್ನು ಕರೆದುಕೊಂಡು ಸುತ್ತಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ? ಹೌದು, ಸಾಮಾಜಿಕ ಮಾಧ್ಯಮದಲ್ಲಿ ಇಂತಹುದೇ  ಒಂದು ಮೈನವಿರೇಳಿಸುವ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ದೋಣಿಯ ಮೇಲೆ ಹುಲಿಯೊಂದಿಗೆ ಹೋಗುತ್ತಿರುವುದನ್ನು ನೀವು ನೋಡಬಹುದು. ಹುಲಿಯೊಂದಿಗೆ ಸಂಚರಿಸುತ್ತಿರುವ ಮಹಿಳೆಯ ಮುಖದಲ್ಲಿ ಭಯದ ಯಾವುದೇ ಚಿಹ್ನೆಗಳಿಲ್ಲದಿರುವುದನ್ನು ನೀವು ಗಮನಿಸಬಹುದು. ಈ ವಿಡಿಯೋ ಹಳೆಯದಾದರೂ ಕೂಡ ಇಂದಿಗೂ ಕೂಡ ಜನರ ಭಾರಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಜೀವನದಲ್ಲಿ ಯಶಸ್ಸು ಸಿಗಬೇಕು ಅಂದ್ರೆ ನೀವು ಈ ವಿಡಿಯೋ ನೋಡಲೇಬೇಕು!


ದೋಣಿಯ ಮೇಲೆ ಕುಳಿತು ಹುಲಿಯೊಂದಿಗೆ ಸಂಚರಿಸುತ್ತಿದ್ದಾಳೆ ಮಹಿಳೆ
ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವು ಸರಿಯಾಗಿ ಗಮನಿಸಿದರೆ, ಮಹಿಳೆ ಚಿಕ್ಕದಾದ ಒಂದು ದೋಣಿಯ ಮೇಲೆ ಹುಲಿಯನ್ನು ಕೂರಿಸಿದ್ದಾಳೆ. ಮಹಿಳೆಯು ಕೂಡ ಅದೇ ದೋಣಿಯ ಮೇಲೆ ಕುಳಿತುಕೊಂಡಿದ್ದಾಳೆ. ದೋಣಿಯ ಮುಂಭಾಗದಲ್ಲಿ ಕುಳಿತ ಹುಲಿ ತನ್ನ ನಾಲ್ಕು ದಿಕ್ಕುಗಳತ್ತ ತಿರುಗಿ ನೋಡುತ್ತಿದೆ. ಅದು ತನ್ನ ಒಂದು ಕಾಲನ್ನು ನೀರಿಗೆ ಬಿಟ್ಟಿದೆ ಮತ್ತು ಸವಾರಿಯ ಮಜಾ ಸವಿಯುತ್ತಿದೆ. ಆಗಾಗ ಹುಲಿರಾಯ ನೀರನ್ನು ಕೂಡ ಕುಡಿಯುತ್ತಿದ್ದಾನೆ ಮತ್ತು ಮಜದಿಂದ ಸುತ್ತಾಡುತ್ತಿರುವುದನ್ನು ನೀವು ನೋಡಬಹುದು. ಇನ್ನೊಂದೆಡೆ ಮಹಿಳೆಯ ಮುಖದಲ್ಲಿ ಹುಲಿ ಕುರಿತಾದ ಯಾವುದೇ ಭಯದ ಛಾಯೆ ಇಲ್ಲ ಎಂಬುದನ್ನು ನೀವು ನೋಡಬಹುದು. 


Shocking Video: ಎಂಟನೇ ಮಹಡಿಯಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿ!


ಭಾರಿ ವೈರಲ್ ಆಗುತ್ತಿದೆ ಈ ವಿಡಿಯೋ
ಸಾಮಾಜಿಕ ಮಾಧ್ಯಮದಲ್ಲಿ ಜನರು ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ಸ್ಟಾ ಗ್ರಾಮ್  ರೀಲ್ಸ್ ನಲ್ಲಿ mokshabybee_tigers ಹೆಸರಿನ ಖಾತೆಯ ಮೂಲಕ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.