Shocking Video: ಎಂಟನೇ ಮಹಡಿಯಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿ!

Shocking Video: ಇಂಟರ್ನೆಟ್‌ನಲ್ಲಿ ಪ್ರತಿದಿನ ಸಾವಿರಾರು ವೀಡಿಯೊಗಳು  ವೈರಲ್ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ಎದೆ ನಡುಗಿಸುತ್ತವೆ. ಅಂತಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ  8 ನೇ ಮಹಡಿಯಿಂದ ನೇತಾಡುವ ಮಗುವಿನ ವೀಡಿಯೊ ವೈರಲ್ ಆಗುತ್ತಿದೆ. 

Written by - Yashaswini V | Last Updated : May 16, 2022, 09:05 AM IST
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ
  • 8ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡುತ್ತಿದ್ದ ಮಗು
  • ಮಗುವನ್ನು ರಕ್ಷಿಸಲು ಟವರ್ ಏರಿದ ಧೀರ
Shocking Video: ಎಂಟನೇ ಮಹಡಿಯಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿ!  title=
Child shocking video

ಶಾಕಿಂಗ್ ವೀಡಿಯೋ:  ಎಂಟನೇ ಮಹಡಿಯಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಲು ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಸಾಹಸದ ವಿಡಿಯೋ ವೈರಲ್ ಸದ್ಯ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ದಾರಿಹೋಕರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಾದ ಬಳಿಕ ವಿಡಿಯೋ ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸುಮಾರು 3 ವರ್ಷದ ಬಾಲಕಿ ತನ್ನ ತಾಯಿ ಅಂಗಡಿಗೆಂದು ಮಾರುಕಟ್ಟೆಗೆ ಹೋಗಿದ್ದ ಸಂದರ್ಭದಲ್ಲಿ ಕಿಟಕಿಯಿಂದ ಹೊರಬರಲು ಕುಶನ್ ಮತ್ತು ಆಟಿಕೆಗಳನ್ನು ಬಳಸಿದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- Viral Video: ಸ್ಕೂಟರ್ ಮೇಲೆ ಕುಳಿತ್ತಿದ್ದ ವ್ಯಕ್ತಿಗೆ ಏಕಾಏಕಿ ಅಟ್ಕಾಯಿಸಿಕೊಂಡ ಆತ್ಮ..!

8ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡುತ್ತಿದ್ದ ಮಗುವನ್ನು ಆ ವ್ಯಕ್ತಿ ಈ ರೀತಿ ರಕ್ಷಿಸಿದ್ದಾನೆ:
ವಿಡಿಯೋವನ್ನು ಪೋಸ್ಟ್ ಮಾಡಿರುವ ಗುಡ್ ನ್ಯೂಸ್ ಮೂವ್‌ಮೆಂಟ್, ತನ್ನ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಎಂಟನೇ ಮಹಡಿಯ ಕಿಟಕಿಯಿಂದ ಮಗು ನೇತಾಡುತ್ತಿದ್ದದ್ದನ್ನು ಕಂಡು ತಕ್ಷಣ ಮಗುವನ್ನು ರಕ್ಷಿಸಲು ಯಾವ ರೀತಿ ಕಾರ್ಯಪ್ರವೃತ್ತರಾದರು ಎಂಬುದನ್ನು ವಿವರಿಸಿದೆ. 

ಇದನ್ನೂ ಓದಿ- ವೈರಲ್ ವಿಡಿಯೋ: ನಾರಿ ಜೊತೆ ಡ್ಯಾನ್ಸ್ ಮಾಡಲು ವೇದಿಕೆ ಬಳಿ ಬಂದ ವ್ಯಕ್ತಿ, ಬೆಚ್ಚಿಬಿದ್ದ...
 
ಕಜಕಿಸ್ತಾನದಲ್ಲಿ 8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗುವನ್ನು ರಕ್ಷಿಸಲು ಟವರ್ ಏರಿದ ಧೀರನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News