Viral Video: ವಿದ್ಯೆ ಕಲಿಯಿರಿ ಅಂತಾ ಶಾಲೆಗೆ ಕಳುಹಿಸಿದ್ರೆ... ಈ ವಿದ್ಯಾರ್ಥಿಗಳು ಮಾರ್ಗಮಧ್ಯೆ ಮಾಡಿದ್ದು...! ವಿಡಿಯೋ ನೋಡಿ
Students Marriage Viral Video: ಶಿಕ್ಷಣ ಪಡೆಯಲಿ ಎಂದು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ, ಆ ಮಕ್ಕಳು ದಾರಿ ತಪ್ಪುವ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ನಿರ್ದಶನ ಎಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Inter students got married at Bus Stop: ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ದೊಡ್ಡವರಾಗಿ ಒಳ್ಳೆಯ ಜೀವನ ನಡೆಸಲಿ ಎಂದು ಪೋಷಕರು ಭರವಸೆಯಿಟ್ಟು ಅವರನ್ನು ಶಾಲೆಗೆ ಕಳುಹಿಸುತ್ತಾರೆ. ಕಷ್ಟವಾದರೂ ಸರಿ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯೆ ನೀಡಬೇಕೆಂಬುದು ಅವರ ಉದ್ದೇಶವಾಗಿರುತ್ತದೆ. ಆದರೆ ಕೆಲ ಮಕ್ಕಳಿಗೆ ಪಾಲಕರ ಕಷ್ಟಗಳು ಅರಿವಿಗೇ ಬರುವುದಿಲ್ಲ ಅನಿಸುತ್ತದೆ.
ಇದನ್ನೂ ಓದಿ: ರಾತ್ರಿ ವೇಳೆ ತಪ್ಪಿಯೂ ಸಹ ಈ ದಿಕ್ಕಿಗೆ ಕಾಲು ಹಾಕಿ ಮಲಗಬೇಡಿ: ಮನೆ ಹಿರಿಯನ ಆಯಸ್ಸಿಗೆ ಬರುತ್ತೆ ಆಪತ್ತು; ಬಡತನ ಹೆಚ್ಚುತ್ತೆ!
ಶಿಕ್ಷಣ ಪಡೆಯಲಿ ಎಂದು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ, ಆ ಮಕ್ಕಳು ದಾರಿ ತಪ್ಪುವ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ನಿರ್ದಶನ ಎಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಸ್ ನಿಲ್ದಾಣದಲ್ಲಿ ಇಂಟರ್ ವಿದ್ಯಾರ್ಥಿಗಳು ಮದುವೆಯಾದ ಘಟನೆ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಚಿದಂಬರಂ ಸಮೀಪದ ಪೆರಂಬಾಟು ಪಂಚಾಯತ್ʼನ ವೆಂಗಾಯತಲಮೇಡು ಗ್ರಾಮದ ಇಂಟರ್ ದ್ವಿತೀಯ ವರ್ಷದ ವಿದ್ಯಾರ್ಥಿ ಮತ್ತು ಚಿದಂಬರಂ ಸಮೀಪದ ವಡಕರಿರಾಜಪುರಂ ಗ್ರಾಮದ ಪಾಲಿಟೆಕ್ನಿಕ್ ವಿದ್ಯಾರ್ಥಿ ಕಳೆದ ಕೆಲವು ದಿನಗಳಿಂದ ಪ್ರೀತಿಸುತ್ತಿದ್ದರಂತೆ. ಹೀಗಾಗಿ ಈ ಜೋಡಿ ಮದುವೆಯಾಗಲು ಬಯಸಿದೆ. ಇದಕ್ಕೆ ಗೆಳೆಯರೂ ಸಹಕರಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಆ ವಿದ್ಯಾರ್ಥಿ ತನ್ನ ಗೆಳತಿಯ ಕುತ್ತಿಗೆಗೆ ಅರಶಿನ ದಾರ ಕಟ್ಟಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಮುಗುಳ್ನಗುತ್ತಾ ನಾಚಿಕೆಯಿಂದ ಮುಖ ಮುಚ್ಚಿಕೊಂಡಿದ್ದಾರೆ.
ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಮದುವೆಯ ವಿಡಿಯೋ ಭಾರೀ ವೈರಲ್ ಆಗಿದ್ದಲ್ಲದೆ, ಸಂಚಲನ ಸೃಷ್ಟಿಸಿದೆ. ಈ ವಿಡಿಯೋ ಕುರಿತು ಚಿದಂಬರಂ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಅದಲ್ಲದೆ, ಈ ಘಟನೆಗೆ ಸಾಮಾಜಿಕ ಕಾರ್ಯಕರ್ತರು ಸಹ ಅಸಮಾಧಾನ ಹೊರಹಾಕಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.