ಚಾಮರಾಜನಗರ: ಒಬ್ಬಂಟಿಯಾಗಿ ಬೈಕ್ ಏರಿ ಸವಾರಿ ಮಾಡುತ್ತಿದ್ದ ವ್ಯಕ್ತಿ ಮುಂದೆ  ದಿಢೀರ್ ಎಂದು ಆನೆ ಬಂದ್ರೆ ಹೇಗಿರುತ್ತೆ? ಅಯ್ಯಯ್ಯೋ ನೆನೆಸಿಕೊಂಡರೆ ಸಾಕು ಎದೆ ಝಲ್ ಅನ್ನುತ್ತೆ. ಆದರೆ, ಇಲ್ಲೊಬ್ಬ ಬೈಕ್ ಸವಾರ ರಸ್ತೆಯಲ್ಲಿ ಬರುತ್ತಿದ್ದಾಗ ದೈತ್ಯ ಆನೆಯೊಂದು ಎದುರಿಗೆ ಬಂದಿರುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.


COMMERCIAL BREAK
SCROLL TO CONTINUE READING

ಹೌದು, ನಡುರಸ್ತೆಯಲ್ಲಿ ಆನೆ ಕಂಡು ಬೈಕ್ ಸವಾರನೊಬ್ಬ ಆಯತಪ್ಪಿ ಬಿದ್ದಿರುವ ಶಾಕಿಂಗ್ ಘಟನೆ ಚಾಮರಾಜನಗರ ಜಿಲ್ಲೆಯ ಗಡಿ ಭಾಗವಾದ ತಮಿಳುನಾಡಿನ ತಲೆಮಲೈಯಲ್ಲಿ ಬೆಳಕಿಗೆ ಬಂದಿದೆ. 


ಇದನ್ನೂ ಓದಿ- Monkey Video : ಸಖತ್‌ ಸ್ಟೈಲಾಗಿ ಸಿಗರೇಟ್‌ ಸೇದುವ ಕೋತಿ.. ನಶೆಯಲ್ಲಿ ತೇಲಾಡಿದ ಮಂಗಣ್ಣ


ನೈನಿತಾಳಪುರಂ ಗ್ರಾಮದ ರಾಮಸ್ವಾಮಿ ಎಂಬಾತ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಒಂದು ತಿರುವಿನ ಬಳಿ  ದಿಢೀರ್ ಎಂದು ಆನೆ ಪ್ರತ್ಯಕ್ಷವಾಗಿದೆ. ಮುಂದೇನಾಯ್ತು ಎಂದು ತಿಳಿಯಲು ನೋಡಿ ಈ ವೈರಲ್ ವಿಡಿಯೋ... Viral Video: ಹಿಂದೆಂದೂ ಕಂಡಿರದ ಸರೀಸೃಪಗಳ ರಣಕಾಳಗ: ಈ ಭೀಕರ ಕಾದಾಟದಲ್ಲಿ ಗೆದ್ದದ್ದು….!! ವಿಡಿಯೋ ನೋಡಿ


ಸೋಮವಾರ (ಮಾರ್ಚ್ 13) ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.