Viral Video : ಬೇಟೆಗೆ ಬಂದ ಚಿರತೆಯನ್ನು ಉಳಿಗಾಲವಿಲ್ಲ ಎಂಬಂತೆ ಓಡಿಸಿದ ಈ ಸಾಧು ಪ್ರಾಣಿ

Viral Video : ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿದಿಯೋವೊಂದು ವೈರಲ್ ಆಗುತ್ತಿದೆ. ಆ ವಿಡಿಯೋ ನೋಡುವಾಗ ಆಶ್ಚರ್ಯವಾಗುತ್ತದೆ. ಚಿರತೆಯ ಮುಂದೆ ಎದೆಯೊಡ್ಡಿ ನಿಂತ ಜೀಬ್ರಾದ ವಿಡಿಯೋವಿದು.  

Written by - Ranjitha R K | Last Updated : Feb 24, 2023, 04:14 PM IST
  • ಹುಲಿ, ಚಿರತೆ, ಸಿಂಹ ಇವುಗಳೆಲ್ಲಾ ಬಲಿಷ್ಠ ಪ್ರಾಣಿಗಳ ಸಾಲಿನಲ್ಲಿ ನಿಲ್ಲುತ್ತವೆ.
  • ಜಿಂಕೆ, ಜೀಬ್ರಾ, ಮುಂತಾದ ಪ್ರಾಣಿಗಳು ಅಪಾಯಕಾರಿಯಲ್ಲದ ಪ್ರಾಣಿಗಳು.
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ.
Viral Video : ಬೇಟೆಗೆ ಬಂದ ಚಿರತೆಯನ್ನು ಉಳಿಗಾಲವಿಲ್ಲ ಎಂಬಂತೆ ಓಡಿಸಿದ ಈ ಸಾಧು ಪ್ರಾಣಿ  title=

Viral Video : ಸಾಮಾನ್ಯವಾಗಿ ಹುಲಿ, ಚಿರತೆ, ಸಿಂಹ ಇವುಗಳೆಲ್ಲಾ ಬಲಿಷ್ಠ ಪ್ರಾಣಿಗಳ ಸಾಲಿನಲ್ಲಿ ನಿಲ್ಲುತ್ತವೆ. ಇವುಗಳ ಮುಂದೆ ಜಿಂಕೆ, ಜೀಬ್ರಾ, ಮುಂತಾದ ಪ್ರಾಣಿಗಳು  ಅಪಾಯಕಾರಿಯಲ್ಲದ ಪ್ರಾಣಿಗಳು. ಮಾತ್ರವಲ್ಲ ಹುಲಿ ಚಿರತೆಗಳನ್ನು ಕಂಡಾಕ್ಷಣ ಸ್ಥಳದಿಂದ ಓಡಿ ಹೋಗುವ ಜಾಯಮಾನ ಈ ಪ್ರಾನಿಗಳದ್ದು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಆ ವಿಡಿಯೋ ನೋಡುವಾಗ ಆಶ್ಚರ್ಯವಾಗುತ್ತದೆ. ಚಿರತೆಯ ಮುಂದೆ ಎದೆಯೊಡ್ಡಿ ನಿಂತ ಜೀಬ್ರಾದ ವಿಡಿಯೋವಿದು.  

ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಈ ವಿಡಿಯೋಗಳು ಅಚ್ಚರಿ ಅದ್ಭುತ ಎನ್ನುವ ಕಾರಣಕ್ಕೇ ಅದು ಸದ್ದು ಮಾಡುತ್ತದೆ. ನಿರೀಕ್ಷೆಗೆ ಮೀರಿದ ಪ್ರಾಣಿಗಳ ವರ್ತನೆ, ಪ್ರಕೃತಿಗೆ ವಿರುದ್ದ ಎನ್ನುವಂಥಹ ನಡವಳಿಕೆಗಳು ನಮ್ಮನ್ನು ಹುಬ್ಬೇರಿಸಿ ಬಿಡುತ್ತವೆ. ಈ ಜೀಬ್ರಾ ಕೂಡಾ ಮಾಡುತ್ತಿರುವುದು ಅದನ್ನೇ.  

ಇದನ್ನೂ ಓದಿ : Viral Video: ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ಕುಸಿದುಬಿದ್ದು ಪೊಲೀಸ್ ಪೇದೆ ಸಾವು!

ವಿಡಿಯೋದಲ್ಲಿ ಜೀಬ್ರಾಗಳು ತಮ್ಮ ಪಾಡಿಗೆ ಮೇಯುತ್ತಿವೆ. ಆ ವೇಳೆ ಅಲ್ಲಿಗೆ ಚಿರತೆ ಬರುತ್ತದೆ. ಚಿರತೆ ಬಂದಾಕ್ಷಣ ಜೀಬ್ರಾ ಸ್ಥಳದಿಂದ ಓಡಿ ಹೋಗುತ್ತದೆ ಎಂದು ಕೊಂಡರೆ ಆ ಜೀಬ್ರಾ ಚಿರತೆಯನ್ನೇ ಅಲ್ಲಿಂದ ಓಡಿಸಿಬಿಡುತ್ತದೆ. ಬಹಳ ದೂರದವರೆಗೆ ಜೀಬ್ರಾ ಚಿರತೆಯನ್ನು ಹೇಗೆ ಬೆನ್ನಟ್ಟಿ ಬಿಡುತ್ತದೆಯೆಂದರೆ ಪಾಪ ಚಿರತೆ ಬದುಕುಳಿದರೆ ಸಾಕು ಎನ್ನುವ ಮಟ್ಟಿಗೆ ಕಾಲಿಗೆ ಬುದ್ದಿ ಹೇಳಿದೆ.  

 

ಇದನ್ನೂ ಓದಿ Viral Video : ಹಾವನ್ನೇ ಶೂವಾಗಿಸಿದ ಭೂಪ ! ನಡೆದಾಡಿಕೊಂಡು ಹೋಗುತ್ತಿದ್ದರೆ ಜುಮ್ಮೆನ್ನುತ್ತದೆ ಮೈ ಮನ !
 
ಜೀಬ್ರಾ ಮತ್ತು ಚಿರತೆಗೆ ಸಂಬಂಧಿಸಿದ ಈ ವಿಡಿಯೋ ಪೋಸ್ಟ್ ಮಾಡಿದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆಯಲಾರಂಭಿಸಿದೆ. ವೈಲ್ಡ್‌ಲೈಫ್‌ ಅನಿಮಲ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು ಅಪ್‌ಲೋಡ್ ಮಾಡಲಾಗಿದೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News