python: ತಮ್ಮ ದೈನಂದಿನ ಕರ್ಮಗಳನ್ನು ಮುಗಿಸಿಕೊಳ್ಳಲು ಜನ ಸಾಮಾನ್ಯವಾಗಿ ಬೆಳಗ್ಗೆ ಎದ್ದ ಒಡನೆ ಟಾಯ್ಲೆಟ್‌ಗೆ ಹೋಗುವುದು ಸಾಮಾನ್ಯ. ಆದರೆ, ಅದೇ ಜಾಗದಲ್ಲಿ ಯಮಧರ್ಮನಂತೆ ಹಾವು ಕಾಣಿಸಿಕೊಂಡರೆ ನೀವೇನು ಮಾಡುತ್ತಿರಾ? ಕೇಳೋಕೆ ಭಯ ಆಗುತ್ತಿದೆ ಅಲ್ವಾ? 


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ಜನರು ಬೆಳಗ್ಗೆ ಎದ್ದ ಒಡನೆ ತಮ್ಮ ಪ್ರತಿ ನಿತ್ಯದ ಕಾರ್ಯಗಳನ್ನು ಮುಗಿಸಿಕೊಳ್ಳುತ್ತಾರೆ. ಎಂದಿನಂತೇಯೆ ಈತ ಕೂಡ ತನ್ನ ನಿತ್ಯಕರ್ಮಕ್ಕಾಗಿ ಟಾಯ್ಲೆಟ್‌ ಪ್ರವೇಶಿಸಿದ್ದ ಆದರೆ ಮುಂದೆ ನಡೆಯುವ ಘಟನೆಯ ಕುರಿತು ಅವನಿಗೆ ಕೊಂಚ ಕೂಡ ಅರಿವಿರಲಿಲ್ಲ.


ಥಾಯ್ಲೆಂಡ್‌ ನಲ್ಲಿ ಒಂದು ಅವಾಂತರ ನಡೆದು ಹೋಗಿದೆ. ಹೆಬ್ಬಾವೊಂದು ಟಾಯ್ಲೆಟ್‌ನಲ್ಲಿ ಕೂತಿದ್ದ ವ್ಯಕ್ತಿಯ ಖಾಸಗಿ ಅಂಗಕ್ಕೆ ಸೀದಾ ಬಾಯ್‌ ಹಾಕಿ ಕಚ್ಚಿಯೇ ಬಿಟ್ಟಿದೆ.


ಹೌದು, ಥಾಯ್ಲೆಂಡ್‌ನ ಥಾನತ್ ತಾಂಗ್ತೆವಾನಾನ್ ಎನ್ನುವ ವ್ಯಕ್ತಿ ಎಂದಿನಂತೆ ತನ್ನ ನಿತ್ಯಕರ್ಮಗಳನ್ನು ಮುಗಿಸಿಕೊಳ್ಳಲು ಟಾಯ್ಲೆಟ್‌ನಲ್ಲಿ ಹೋಗಿ ಕುಳಿತ್ತಿದ್ದ. ಕಲೆವೇ ನಿಮಿಷಗಳಲ್ಲಿ ತನ್ನ ವೃಷಣಗಳಲ್ಲಿ ನೋವು ಕಾಣಿಸಿಕೊಳ್ಳಲು ಶುರುವಾಗಿತ್ತು. ಅರ್ರೇ ಇದೇನಪ್ಪಾ ಆಯ್ತು ಅಂತಾ ಎದ್ದು ನಿಂದು ನೋಡುವಷ್ಟರಲ್ಲಿ ಕಮೋಡ್‌ನಲ್ಲಿ 12 ಅಡ ಎತ್ತರದ ಹೆಬ್ಬಾವು ಕಾಣಿಸಿಕೊಂಡಿತ್ತು.


ಇದನ್ನೂ ಓದಿ: Viral Video: ಸೊಂಟದಲ್ಲಿ ತುಂಡು ಬಟ್ಟೆ ಬಿಟ್ರೆ ಎನೂ ಇಲ್ಲ..!! ಮೆಟ್ರೊದಲ್ಲಿ ಬೆತ್ತಲೆ ಸುಂದರಿ ಕಂಡು ದಂಗಾದ ಪ್ರಯಾಣಿಕರು.. ವಿಡಿಯೋ ವೈರಲ್ ...!


ಹಾವನ್ನು ನೋಡಿದ ತಕ್ಣ ಭಯ ಪಡದೆ ವ್ಯಕ್ತಿ ತನ್ನ ಕೈಯಿನಿಂದಲೇ ಹೆಬ್ಬಾವಿನ ಕತ್ತು ಹಿಚುಕಿ ಕೊಂದಿದ್ದಾನೆ. ಈ ವಿಡಿಯೋವನ್ನು ಸಾಮಾಜಿನ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಆತ, " ನಾನು ಎಂದಿನಂತೆಯೇ ಅಂದು ಕೂಡ ಟಾಯ್ಲೆಟ್‌ಗೆ ಹೋಗಿ ಕೂತಿದ್ದೆ. ಪ್ರತಿನಿತ್ಯ ನಾನು ಟಾಯ್ಲೆಟ್‌ ಬಳಸುವ ಮುನ್ನ ಫ್ಲಶ್‌ ಮಾಡಿ ಕೂರುತ್ತಾನೇ. ಅಂದು ಸಹ ನಾನು ಫ್ಲಶ್‌ ಮಾಡಿಯೇ ಟಾಯ್ಲೆಟ್‌ನಲ್ಲಿ ಕುಳಿತೆ. ಕೆಲವೇ ನಿಮಿಷಗಳಲ್ಲಿ ನನ್ನ ವೃಷಣಗಳಲ್ಲಿ ನೋವು ಕಾಣಿಸಿಕೊಳ್ಳಲು ಆರಂಭವಾಯಿತು, ಏನೋ ಕಚ್ಚುತ್ತಿರುವಂತೆ ಭಾಸವಾಯಿತು. ಎದ್ದು ನೋಡಿದರೆ ಟಾಯ್ಲೆಟ್‌ನಲ್ಲಿ ದೈತ್ಯ ಹೆಬ್ಬಾವು ಕಾಣಿಸಿಕೊಂಡಿತು"


"ಹಾವು ನನ್ನ ಟಾಯ್ಲೆಟ್‌ನಲ್ಲಿ ಹಡಗಿ ಕೂತಿದೆ ಎನ್ನುವ ವಿಚಾರ ನನಗೆ ತಿಳಿದೇ ಇರಲಿಲ್ಲ. ಕೂಡಲೆ ಹಾವಿನ ಕುತ್ತಿಗೆಯನ್ನು ಹಿಡಿದು ಅದನ್ನು ಟಾಯ್ಲೆಟ್‌ನಿಂದ ಹೊರ ತೆಗೆಯಲು ಪ್ರಯತ್ನಿಸಿದೆ ದೈತ್ಯ ಹಾವು ಆಗಿದ್ದ ಕಾರನ ಅದು ಅಲ್ಲಿಂದ ಹೊರ ಬರಲಿಲ್ಲ. ಅಷ್ಟೊತ್ತು ಸಿಟ್ಟನ್ನು ನುಂಗಿಕೊಂಡಿದ್ದ ನನಗೆ ಸಿಟ್ಟು ನೆತ್ತಿಗೇರಿತ್ತು ಟಾಯ್ಲೆಟ್‌ನಲ್ಲಿದ್ದ ಕ್ಲೀನಿಂಗ್‌ ಬ್ರಷ್‌ಅನ್ನು ತೆಗೆದುಕೊಂಡು ಹಾವಿಗೆ ಒಡೆದು ಸಾಯಿಸಿದೆ. ನಂತರ ನೆರೆಯವರ ಸಹಾಯದಿಂದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದೆ. ಸದ್ಯ ನನ್ನ ಅದೃಷ್ಟವೂ ಏನೋ ನನಗೆ ಏನೂ ಆಗಿಲ್ಲ" ಎಂದು ಬರೆದುಕೊಂಡಿದ್ದಾನೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.