ಬೆಂಗಳೂರು : ಹಾವು ಕಪ್ಪೆಯನ್ನು ಹಿಡಿದು ತಿನ್ನುತ್ತವೆ. ಹಾವನ್ನು ಕಂಡ ಕೂಡಲೇ ಕಪ್ಪೆ ಎದ್ದು ಬಿದ್ದು ಸ್ಥಳದಿಂದ ಓಡುತ್ತವೆ. ಯಾಕೆಂದರೆ ಕಪ್ಪೆ ಹಾವಿನ ಆಹಾರ. ಕಪ್ಪೆಗಳು ಬಹಳ ಸಂಖ್ಯೆಯಲ್ಲಿ ಇವೆ ಎಂದಾದರೆ ಆ ಜಾಗದಲ್ಲಿ ಹಾವು ಕೂಡಾಡ ಇರುತ್ತವೆ. ಆದರೆ ಕೆಲವೊಮ್ಮೆ ಪ್ರಕೃತಿಗೆ ವಿರುದ್ದವಾದ ವಿಚಿತ್ರವಾದ ಘಟನೆಗಳು ನಡೆದು ಬಿಡುತ್ತವೆ. ಇಲ್ಲಿ ಆದದ್ದು ಕೂಡಾ ಅದೇ. 


COMMERCIAL BREAK
SCROLL TO CONTINUE READING

ಮೊದಲೇ ಹೇಳಿದಂತೆ ಹಾವಿನ ಆಹಾರ ಕಪ್ಪೆ. ಆದರೆ ಇಲ್ಲಿ ಕಪ್ಪೆ ಹಾವನ್ನು ನುಂಗಲು ಹೊರಟಿದೆ. ಕಪ್ಪೆ  ಹಾವಿನ ದೇಹದ ಅರ್ಧ ಭಾಗವನ್ನು ನುಂಗಿದೆ. ಹಾವಿನ ದೇಹದ ಇನ್ನರ್ಧ ಭಾಗ ಕಪ್ಪೆಯ ಬಾಯಿಯಿಂದ ಹೊರಗೆ ಚಾಚಿಕೊಂಡಿದೆ. ಹಾಗಂತ ಇಲ್ಲಿ ಹಾವು ಸತ್ತೂ ಇಲ್ಲ. 


ಇದನ್ನೂ ಓದಿ : Viral Video: ಜನನಿಬಿಡ ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಐಷಾರಾಮಿ BMW ಕಾರು..!


ಹೀಗೆ ಹಾವನ್ನು ಅರ್ಧ ನುಂಗಿದ ಕಪ್ಪೆಗೆ ಬೆಕ್ಕು ಎದುರಾಗಿದೆ. ಬೆಕ್ಕಿಗೋ ಈ ದೃಶ್ಯ ಪರಮಾಶ್ಚರ್ಯ. ಅದು ಕಪ್ಪೆಯ ಬಾಯಿಯಲ್ಲಿ ಇರುವುದು ಹಾವು ಹೌದೋ ಅಲ್ಲವೋ ಎನ್ನುವುದನ್ನು ಮತ್ತೆ ಮತ್ತೆ ಟೆಸ್ಟ್ ಮಾಡಿ ನೋಡುತ್ತದೆ. ಅಲ್ಲದೆ ಹಾವಿಗೆ ಪದೇ ಪದೇ ಹೊಡೆಯುತ್ತದೆ. ಹಾವು ಕೂಡಾ ಬೆಕ್ಕು ಹೊಡೆಯಲು ಬಂದಾಗ ಅದನ್ನು ತಪ್ಪಿಸಿ ಬೆಕ್ಕನ್ನು ಕಚ್ಚುವ ಪ್ರಯತ್ನ ಮಾಡುತ್ತದೆ. 


 


ಆನೆಗಳ ಹಿಂಡು ಕಂಡು ಪೊದೆಯಲ್ಲಿ ಅವಿತ ಹುಲಿರಾಯ


ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಆಗುತ್ತಿದೆ. ಅಲ್ದೆ ವಿಡಿಯೋ ವೀಕ್ಷಿಸಿದವರು ವಿಡಿಯೋ ಬಗ್ಗೆ ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ. ಒಬ್ಬರು ಈ ಹಾವು ಹಾವಿನ ಜಾತಿಗೆ ಕಳಂಕ ಎಂದು ಬರೆದಿದ್ದರೆ, ಇನ್ನೊಬ್ಬ್ಬರು ಕಪ್ಪೆಯ ಬಲಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು Weird and Terrifying ಎನ್ನುವ ಖಾತೆಯಲ್ಲಿ ಶೇರ್ ಮಾಡಲಾಗಿದೆ.  


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.