Snake cute viral video: ಹಾವುಗಳನ್ನು ಅತ್ಯಂತ ವಿಷಕಾರಿ ಜಂತುಗಳು ಎಂದು ಪರಿಗಣಿಸಲಾಗುತ್ತದೆ. ಹಾವು.. ಎಂಬ ಹೆಸರು ಕೇಳಿದ್ರೆನೆ ಜನ ಎದ್ದು ಬಿದ್ದು ಓಡುತ್ತಾರೆ ಆದರೆ ಇಲ್ಲೊಂದು ಹಾವು ಎದ್ದು ನಿಂತು ಕ್ಯಾಮರಾಗೆ ಕ್ಯೂಟ್‌ ಆಗಿ ಪೋಸ್‌ ಕೊಟ್ಟಿದೆ, ಇದನ್ನು ನೋಡಿದ ನೆಟ್ಟಿಗರು ಹಾವಿನ ಕ್ಯೂಟ್‌ನೆಸ್‌ನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. 


COMMERCIAL BREAK
SCROLL TO CONTINUE READING

ನಮ್ಮ ಸುತ್ತ ಮುತ್ತಲೂ ಸಾವಿರ ತಳಿಯ ಹಾವುಗಳು ಇರಬಹುದು, ಅದರಲ್ಲಿ ಕೆಲವೊಂದು ತುಂಬಾ ವಿಷಕಾರಿ, ಇನ್ನೂ ಕೆಲವು ಕಚ್ಚಿದರೆ ಅಷ್ಟೇನು ಅಪಾಯ ಇರುವುದಿಲ್ಲವಾದರೂ, ಹಾವುಗಳು ಎಂದಿಗೂ ಭಯಾನಕ, ಈ ಹೆಸರು ಕೇಳುತ್ತಿದ್ದಂತೆ ಎಂತಹವರ ಎದೆಯಲ್ಲೂ ನಡುಕ ಶುರುವಾಗುತ್ತೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್‌ ಆಗುತ್ತಿದೆ, ಈ ವಿಡಿಯೋದಲ್ಲಿ ಹಾವು ಎದ್ದು ನಿಂತು ಕ್ಯೂಟ್‌ ಆಗಿ ಪೋಸ್‌ ಕೊಡುತ್ತಿದೆ.


ವೈರಲ್‌ ಆಗುತ್ತಿರುವ ಈ ವಿಡಿಯೋವನ್ನು ಯಾವುದೋ ಮರಳುಗಾಡಿನಲ್ಲಿ ಚಿತ್ರೀಕರಿಸಲಾಗಿದೆ. ವಿಭಿನ್ನವಾದ ಹಾವನ್ನು ಸೆರೆಹಿಡಿಯಲು ಛಾಯಾಗ್ರಾಹಕ್ಕೆ ಪ್ರಯತ್ನಿಸುತ್ತಿದ್ದಾನೆ, ಹಳದಿ ಬಣ್ಣದಲ್ಲಿರುವ ಉದ್ದನೆಯ ಈ ಹಾವು ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಎದ್ದು ನಿಂತಿದೆ, ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಈ ವಿಡಿಯೋ ಅಷ್ಟಕ್ಕೆ ಮುಗಿಯುವುದಿಲ್ಲ, ಎದ್ದು ನಿಂತ ಹಾವನ್ನು ಎಲ್ಲಾ ಆಂಗಲ್‌ ನಲ್ಲೂ ಛಾಯಾಗ್ರಾಹಕ ಸೆರೆಹಿಡಿಯಲು ಪ್ರಯತ್ನಿಸುತ್ತಾನೆ, ಆದರೆ ಕ್ಯಾಮೆರಾ ಯಾವ ಕಡೆಗೆ ತಿರುಗುತ್ತೋ ಆ ಕಡೆಗೆ ಹಾವು ಕೂಡ ತಿರುಗುತ್ತೆ, ಕ್ಯೂಟ್‌ ಆಗಿ ಎದ್ದು ನಿಂತು ಭಯದಿಂದ ಕ್ಯಾಮೆರಾದ ಕಡೆಗೆ ನೋಡುತ್ತಾ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು, ಮಂಡಿಯೂರಿ ಬೇಡಿಕೊಳ್ಳುತ್ತಿರುವಂತೆ, ಈ ದೃಶ್ಯ ಭಾಸವಾಗುತ್ತದೆ. 


ಸದ್ಯ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ವಿಡಿಯೋದಲ್ಲಿ ಹಾವು ತನ್ನ ಪ್ರಾಣ ಉಳಿಸಿಕೊಳ್ಳಲು ಈ ರೀತಿ ಮಾಡಿದೆಯಾದರೂ, ಇದು ಮಾಡಿರುವ ಈ ಕೆಲಸ ನೆಟ್ಟಿಗರ ಮನಸ್ಸು ಗೆಲ್ಲುತ್ತಿದೆ.


ತನ್ನ ದೇಹವನ್ನು ಬಿಗೆಯನ್ನು ಹಿಡಿದು, ತನ್ನ ಹೆಡೆಯನ್ನು ಮರೆಮಾಚಿ ಎದ್ದು ನಿಂತ ಹಾವು ಕ್ಯೂಟ್‌ ಆಗಿ ಪೋಸ್‌ ಕೊಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ, ಹಾವೆಂದರೆ ಎಂತಹ ಭಯ ಇರುವವರು ಕೂಡ ಒಮ್ಮೆ ಹಾವಿನ ಮೇಲಿನ ಭಯ ಕಲೆದುಕೊಂಡು ಈ ವಿಡಿಯೋ ನೋಡಿ ಎಂಜಾಯ್‌ ಮಾಡುತ್ತಿದ್ದಾರೆ. 
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.