Snake Viral Video: ಬೇರೆ ಋತುಮಾನಗಳಿಗೆ ಹೋಲಿಸಿದರೆ ಮಳೆಗಾಲದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹುಳು-ಹುಪ್ಪಟೆ, ಹಾವಿನಂತಹ ಸರೀಸೃಪಗಳು ಮನೆಯೊಳಗೆ ಬರುವುದನ್ನು ನೀವು ನೋಡಿರಬಹುದು. ಆದರಿಲ್ಲಿ, ಮಿಡಿ ನಾಗರವೊಂದು ಶೂಸ್ ಒಳಗೆ ಬೆಚ್ಚಗೆ ಅವಿತು ಕುಳಿತಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಹೌದು, ಧಾರವಾಡ ಜಿಲ್ಲೆಯ ಹೊಸಯಲ್ಲಾಪೂರದ ಮೇದಾರ ಓಣಿಯಲ್ಲಿ ಶೂಸ್ ಒಳಗೆ ಬೆಚ್ಚಗೆ ಮಲಗಿದ್ದ ನಾಗರ ಹಾವು ಪತ್ತೆಯಾಗಿದೆ. ನಂದಿತಾ ಶಿವನಗೌಡರ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ನಂದಿತ ಕಸ ಗುಡಿಸುವ ವೇಳೆ ಶೂ ಒಳಗೆ ನಾಗರ ಹಾವಿನ ಮರಿ ಕಂಡು ಗಾಬರಿಗೊಂಡಿದ್ದಾರೆ. ತಕ್ಷಣವೇ ಈ ಕುರಿತಂತೆ ಉರಗ ರಕ್ಷಕ ಯಲ್ಲಪ್ಪ ಜೋಡಳ್ಳಿಗೆ ಮಾಹಿತಿ ನೀಡಿದ್ದಾರೆ. 


ಇದನ್ನೂ ಓದಿ- ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ, ಮಕ್ಕಳ ಜೀವದ ಜೊತೆಯೇ ಚೆಲ್ಲಾಟ


ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ  ಉರಗ ರಕ್ಷಕ ಯಲ್ಲಪ್ಪ 
ಜೋಡಳ್ಳಿ ಅವರು ಮಿಡಿ ನಾಗರವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಇನ್ನೂ ಈ ವೇಳೆ ಮಿಡಿ ನಾಗರ ಕಚ್ಚಿದರೆ ಏನಾಗುತ್ತದೆ? ಹಾವಿನಿಂದ ಹೇಗೆ ರಕ್ಷಣೆ ಪಡೆಯಬಹುದು ಎಂಬ ಬಗ್ಗೆಯೂ ಮಾಹಿತಿ ಹಂಚಿಕೊಂಡಿರುವ ಯಲ್ಲಪ್ಪ ಜೋಡಳ್ಳಿ ಕೆಲವೊಂದು ಸಲಹೆಯನ್ನು ಸಹ ನೀಡಿದ್ದಾರೆ. 


ಉರಗ ತಜ್ಞ ಯಲ್ಲಪ್ಪ ಜೋಡಳ್ಳಿ ಅವರ ಪ್ರಕಾರ,  ಶೂ ಹಾಕಿಕೊಳ್ಳುವ ಸಮಯದಲ್ಲಿ ಎಚ್ಚರಿಕೆಯಿಂದ ಹಾಕಿಕೊಳ್ಳಬೇಕು. ಮಾತ್ರವಲ್ಲ, ಶೂ ಬಿಡುವಾಗ ಅದನ್ನು ಯಾವ ರೀತಿ ಬಿಡಬೇಕು ಎಂತಲೂ ಅವರು ವಿವರಿಸಿದ್ದಾರೆ. ಸಾಮಾನ್ಯವಾಗಿ ಚಪ್ಪಲಿ ಬಿಡುವಂತೆ ಶೂ ಬಿಟ್ಟಾಗ, ಒಂದೊಮ್ಮೆ ಹಾವು ಅದರೊಳಗೆ ಹೊಕ್ಕರೆ, ಒಳಗೆ ಹೋಗಿ ಕೂರುತ್ತದೆ. ಹಾಗಾಗಿ, ಶೂವನ್ನು ಗೋಡೆಗೆ ಒರಗಿಸಿ ನಿಲ್ಲಿಸುವಂತೆ ಅವರು ಸಲಹೆ ನೀಡಿದ್ದಾರೆ.  ನಾಗರಹಾವಿನಿಂದ ರಕ್ಷಣೆ ಪಡೆಯಲು ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂದು ಅವರು ವಿವರಿಸಿದ್ದಾರೆ. 


ಇದನ್ನೂ ಓದಿ- Snake Viral Video: ಅಡುಗೆ ಮನೆಗೆ ಎಂಟ್ರಿ ಕೊಟ್ಟ ನಾಗರಹಾವು, ಮುಂದೆ...


ಹಾವಿನಿಂದ ರಕ್ಷಣೆ ಪಡೆಯಲು ಇಲ್ಲಿದೆ ಉರಗ ತಜ್ಞರ ಸಲಹೆ-ವಾಚ್ ವಿಡಿಯೋ:


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.