Snake Video: ಇದು ಹಠಮಾರಿ ಹಾವು.. ತನ್ನನ್ನು ತಾನೇ ಹೇಗೆ ಕಚ್ಚಿಕೊಂಡು ಸಾಯುತ್ತದೆ ನೀವೇ ನೋಡಿ..

Rattlesnake Bites Itself Video: ಪ್ರಸ್ತುತ ಹಾವಿಗೆ ಸಂಬಂಧಿಸಿದ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿವೆ. ಇದನ್ನು ಕಂಡು ನೆಟ್ಟಿಗರು ಗಾಬರಿಯಾಗಿದ್ದಾರೆ. ಇದನ್ನು ನೋಡಿದರೆ ಇಂಥ ವಿಸ್ಮಯಗಳೂ ಭೂಮಿಯ ಮೇಲೆ ನಡೆಯುತ್ತವಾ ಎಂದು ನೀವು ಆಶ್ಚರ್ಯ ಪಡುತ್ತೀರಿ.   

Written by - Chetana Devarmani | Last Updated : Jun 13, 2023, 11:27 AM IST
  • ಹಾವಿಗೆ ಸಂಬಂಧಿಸಿದ ವಿಡಿಯೋ ವೈರಲ್
  • ತನ್ನನ್ನು ತಾನೇ ಹೇಗೆ ಕಚ್ಚಿಕೊಂಡು ಸಾಯುವ ಹಾವು
  • ದೃಶ್ಯ ಕಂಡು ದಂಗಾದ ಇಂಟರ್‌ನೆಟ್‌ ಬಳಕೆದಾರರು
Snake Video: ಇದು ಹಠಮಾರಿ ಹಾವು.. ತನ್ನನ್ನು ತಾನೇ ಹೇಗೆ ಕಚ್ಚಿಕೊಂಡು ಸಾಯುತ್ತದೆ ನೀವೇ ನೋಡಿ..  title=
Sake

Rattlesnake Bites Itself Video: ಹಾವುಗಳು ವಿಷಜಂತುಗಳು. ಸಾಮಾನ್ಯವಾಗಿ ಇವುಗಳನ್ನು ಕಂಡರೆ ಎಲ್ಲರೂ ಹೆಸುರುವರು. ಹಾವುಗಳಲ್ಲಿಯೂ ಅನೇಕ ವಿಧಗಳಿವೆ. ಅದರಲ್ಲಿ ಕಾಳಿಂಗ ಸರ್ಪ ಭೂಮಿಯ ಮೇಲಿನ ಅತ್ಯಂತ ಭಯಭೀತ ಹಾವುಗಳಲ್ಲಿ ಒಂದಾಗಿದೆ. ಎಲ್ಲಾ ಹಾವುಗಳಲ್ಲಿ ಇದು ಅತ್ಯಂತ ವಿಷಕಾರಿ ಹಾವು ಎಂದು ಹೇಳಬಹುದು. ಒಮ್ಮೆ ಕಚ್ಚಿದರೆ ಒಬ್ಬ ವ್ಯಕ್ತಿಯು ಸಾಯುವುದು ಖಚಿತ ಎಂದು ಸಾಮಾನ್ಯವಾದ ನಂಬಿಕೆಯಿದೆ. ಈ ಹಾವುಗಳು ಹೆಚ್ಚಾಗಿ ಮರುಭೂಮಿ ಪ್ರದೇಶ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತವೆ. ಅಮೆಜಾನ್ ಕಾಡುಗಳಲ್ಲಿಯೂ ಈ ಹಾವುಗಳ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ.  

ಇದನ್ನೂ ಓದಿ: Viral Video: ನಡುರಸ್ತೆಯಲ್ಲಿ ಒಂದೇ ಬಾರಿ 10 ಹಾವುಗಳ ಮಿಲನ.. ಮೈಝುಮ್ಮೆನ್ನಿಸುವ ವಿಡಿಯೋ ವೈರಲ್‌

ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ರೀತಿಯ ವಿಡಿಯೋಗಳು ವೈರಲ್‌ ಆಗುತ್ತವೆ. ಅದರಲ್ಲೂ ಹಾವಿನ ವಿಡಿಯೋಗಳನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಿದೆ. ಇದೀಗ ವಿಚಿತ್ರವಾಗಿ ವರ್ತಿಸುತ್ತಿರು ಹಾವಿನ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ವಿಡಿಯೋದಲ್ಲಿ, ಅತ್ಯಂತ ಭಯಾನಕ ಕಪ್ಪು ಹಾವಿನ ತಲೆಯು ಅದರ ದೇಹದಿಂದ ಬೇರ್ಪಟ್ಟಿದೆ. ತಲೆ ಬದಿಗೆ ಮಲಗಿರುವ ಜೀವಂತ ಹಾವು ಒಮ್ಮೆಲೆ ಕಚ್ಚಲು ಯತ್ನಿಸಿತು. ಆದರೆ  ಹಾವಿನ ಬಾಲವು ಅಲ್ಲಿಯೇ ಉಳಿದಿದೆ. ಹಾವಿನ ದೇಹವು ಬಾಲವನ್ನು ತುಂಬಾ ಕೆಟ್ಟದಾಗಿ ಕಚ್ಚುತ್ತದೆ. ಅದು ತನ್ನನ್ನು ತಾನೇ ಕಚ್ಚಿ ಸಾಯುತ್ತದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹಾವು ತನ್ನನ್ನು ತಾನೇ ಕಚ್ಚುವ ಈ ವೈರಲ್ ವಿಡಿಯೋವನ್ನು @lrelandrbi ಎಂಬ ಯೂಟ್ಯೂಬ್ ಚಾನೆಲ್ ಪೋಸ್ಟ್ ಮಾಡಿದೆ. ಈ ವಿಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಇದಲ್ಲದೆ, ನೆಟಿಜನ್‌ಗಳು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ವ್ಯಕ್ತಪಡಿಸುತ್ತಾರೆ. ಈ ವಿಡಿಯೋಗೆ 9 ಸಾವಿರ ಮಂದಿ ಕಾಮೆಂಟ್ ಮಾಡಿದ್ದಾರೆ. ಭಯಂಕರವಾದ ಹಾವು ತನ್ನನ್ನು ತಾನೇ ಕಚ್ಚಿಕೊಂಡಿರುವುದು ಆತಂಕಕಾರಿಯಾಗಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:  Shocking Video: ಅಪಾಯಕಾರಿ ಹಾವನ್ನು ಕಚ್ಚಿ ತಿನ್ನುವ ಜಿಂಕೆ, ವಿಡಿಯೋ ನೋಡಿ ಶಾಕ್‌ ಆಗ್ತೀರಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News