ಇಲ್ಲಿ ಹೆಣ ಬಲವಂತವಾಗಿ ಹಣ ಕೇಳುತ್ತೇ, ಕೊಡದೆ ಹೋದ್ರೆ...!
Strange Death Tredition: ರಾಜಸ್ಥಾನದ ನೈಋತ್ಯ ಭಾಗಗಳಲ್ಲಿ ಮೌತಾಣಾ ಎಂಬ ಪದ್ಧತಿಯು ಚಾಲ್ತಿಯಲ್ಲಿತ್ತು. `ಮೌತಾನ` ಎಂಬುದು ಎರಡು ಪದಗಳ ಸಂಯೋಜನೆಯಾಗಿದೆ. `ಮೌತ್` ಎಂಬುದು ಸ್ಪಷ್ಟವಾಗಿ ಸಾವು ಎಂದು ಸೂಚಿಸುತ್ತದೆ ಮತ್ತು `ಆಣಾ` ಹಣದ ಸೂಚಕವಾಗಿ ಬಳಸಲಾಗಿದೆ.ಮೌತಾಣಾ ಪದ್ಧತಿಯು ಅಲ್ಲಿನ ನೈಋತ್ಯ ಭಾಗಗಳ ಬುಡಕಟ್ಟು ಪ್ರದೇಶಗಳಲ್ಲಿ ಆಳವಾಗಿ ಬೇರೂರಿದೆ.
Death Rituals: ಭಾರತವು ಹಲವು ಸಂಪ್ರದಾಯಗಳಿಂದ ಕೂಡಿದ ದೇಶವಾಗಿದೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಹಲವಾರು ಆಚರಣೆಗಳು ಭಾರತದಲ್ಲಿವೆ. ಬಹುತೇಕ ಎಲ್ಲಾ ಸಮಾಜಗಳಲ್ಲಿ, ಹಿರಿಯರು ಸಂಪ್ರದಾಯವನ್ನು ಕಾನೂನು ಎಂದು ಪರಿಗಣಿಸುತ್ತಾರೆ. ಭಾರತ ಮಾತ್ರವಲ್ಲ, ಇತರ ಹಲವು ದೇಶಗಳ ಅನೇಕ ಸಮಾಜಗಳು ಯಾವುದೇ ವಿಷಯವನ್ನು ಅಭ್ಯಾಸಗಳ ಆಧಾರದ ಮೇಲೆ ನಿರ್ಧರಿಸುತ್ತವೆ. ಕೆಲವು ಪದ್ಧತಿಗಳು ಕಾಲ ಸರಿದಂತೆ ನಶಿಸಿ ಹೋಗುವ ನಂತದಲ್ಲಿವೆ. ಅರಿವಿದ್ದರೂ, ನಾಗರಿಕ ಸಮಾಜದಲ್ಲಿ ಈ ಆಚರಣೆಗಳ ಮುಂದುವರಿಕೆ ಸಾರ್ವಜನಿಕರಿಗೆ ದೊಡ್ಡ ಅನ್ಯಾಯವೆಂದು ಪರಿಗಣಿಸಲಾಗುತ್ತದೆ ಮತ್ತು ಕ್ರಮೇಣ ಕ್ರಮೇಣ ಅವುಗಳನ್ನು ನಿಲ್ಲಿಸಲಾಗುತ್ತದೆ. ಇಂದು ನಾವು ನಿಮಗೆ 'ಮೌತಾಣಾ' ಎಂಬ ಹೆಸರಿನ ಅಂತಹ ಒಂದು ಪದ್ಧತಿಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
ರಾಜಸ್ಥಾನದ ನೈಋತ್ಯ ಭಾಗಗಳಲ್ಲಿ ಮೌತಾಣಾ ಎಂಬ ಪದ್ಧತಿಯು ಚಾಲ್ತಿಯಲ್ಲಿತ್ತು. "ಮೌತಾನ" ಎಂಬುದು ಎರಡು ಪದಗಳ ಸಂಯೋಜನೆಯಾಗಿದೆ. "ಮೌತ್" ಎಂಬುದು ಸ್ಪಷ್ಟವಾಗಿ ಸಾವು ಎಂದು ಸೂಚಿಸುತ್ತದೆ ಮತ್ತು "ಆಣಾ" ಹಣದ ಸೂಚಕವಾಗಿ ಬಳಸಲಾಗಿದೆ.ಮೌತಾಣಾ ಪದ್ಧತಿಯು ಅಲ್ಲಿನ ನೈಋತ್ಯ ಭಾಗಗಳ ಬುಡಕಟ್ಟು ಪ್ರದೇಶಗಳಲ್ಲಿ ಆಳವಾಗಿ ಬೇರೂರಿದೆ. ರಾಜಸ್ಥಾನದ ಮೇವಾರ್ ಪ್ರದೇಶದ ರಾಜಸಮಂದ್, ಸಿರೋಹಿ, ಪಾಲಿ, ಉದಯಪುರ, ಬನ್ಸ್ವಾರಾ, ಪ್ರತಾಪಗಢ ಜಿಲ್ಲೆಗಳಲ್ಲಿ ಈ ಪದ್ಧತಿಯ ಪ್ರಸ್ತಾಪ ಕೆಲವೊಮ್ಮೆ ಕೇಳಿಬರುತ್ತದೆ.
ಮೃತಪಟ್ಟವರ ಅವಲಂಬಿತರಿಗೆ ಹಣಕಾಸಿನ ನೆರವು ನೀಡಲು ಈ ರೂಡಿಯನ್ನು ಜಾರಿಗೆ ತರಲಾಗಿತ್ತು. ಈ ಪದ್ಧತಿಯ ಪ್ರಕಾರ, ಅಸಹಜ, ಆಕಸ್ಮಿಕ, ಅಕಾಲಿಕ ಮರಣಕ್ಕೆ ಗುರಿಯಾದ ವ್ಯಕ್ತಿಯ ಕುಟುಂಬಸ್ಥರಿಗೆ ಹಣವನ್ನು ನೀಡಬೇಕಾಗುತ್ತಿತ್ತು. ಹಿಂದಿನ ಕಾಲದಲ್ಲಿ, ರಾಜಸ್ಥಾನದ ಜನರು ವಲಸೆ ಹೋಗುತ್ತಿದ್ದರು ಮತ್ತು ಅವರು ಕೃಷಿಯ ಮೇಲೆ ಅವಲಂಬಿತರಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಲವು ಬಾರಿ ಎರಡು ಬುಡಕಟ್ಟು ಗುಂಪುಗಳು ಪರಸ್ಪರ ಹಲ್ಲೆ ನಡೆಸುತ್ತಿದ್ದವು. ಈ ಹತ್ಯಾಕಾಂಡಕ್ಕೆ ಅಂತ್ಯ ಹಾಡಲು ಈ ಮೌತಾಣಾ ಜಾರಿಗೆ ತರಲಾಯಿತು. ಗುಂಪಿನ ಮುಖಂಡರು ಕುಳಿತು ಕೊಲೆಗಾರನಿಗೆ ಈ ಮೌತಾಣಾ ವಿಧಿಸುತ್ತಿದ್ದರು. ಎರಡೂ ಪಕ್ಷಗಳು ಒಮ್ಮತಕ್ಕೆ ಬರುವವರೆಗೂ ಮೊತ್ತವು ಹೆಚ್ಚುತ್ತಲೇ ಇರುತ್ತದೆ ಮತ್ತು ಕೆಲವೊಮ್ಮೆ ಕಡಿಮೆ ಕೂಡ ಆಗುತ್ತಿತ್ತು.
ಇದನ್ನೂ ಓದಿ-ವಿಜ್ಞಾನಿಗಳಿಗೂ ಭೇಧಿಸಲು ಸಾಧ್ಯವಾಗಿಲ್ಲ ಈ ಶಿವಾಲಯದ ರಹಸ್ಯ!
ಇಲ್ಲಿ ವಿಶೇಷ ಎಂದರೆ ಮೌತಾಣಾ ನಿರ್ಧಾರವಾಗುವವರೆಗೆ ಮೃತ ದೇಹದ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿರಲಿಲ್ಲ. ಆರೋಪಿ ವ್ಯಕ್ತಿ ಅಥವಾ ಹತ್ಯೆ ಮಾಡಿದ ವ್ಯಕ್ತಿ ಮೌತಾಣಾ ನೀಡಲು ಒಪ್ಪದಿದ್ದಾಗ ಮೃತದೇಹವನ್ನು ಅವರ ಮನೆ ಬಾಗಿಲಲ್ಲೇ ಇಡಲಾಗುತ್ತಿತ್ತು. ಕೊನೆಗೆ ಆರೋಪಿ ಪಕ್ಷ ಮೌತಾಣಾಗೆ ಒಪ್ಪಬೇಕಾಗುತಿತ್ತು. ಕೊಲೆ ಪ್ರಕರಣದಲ್ಲಿ ಮಾತ್ರ ಮೌತಾಣಾ ವಿಧಿಸಲಾಗುತ್ತದೆ ಎಂದಲ್ಲ. ಒಬ್ಬ ವ್ಯಕ್ತಿಯು ಕೆಲಸ ಮಾಡುವಾಗ ಹೊಲದಲ್ಲಿ ಮೃತಪಟ್ಟರೆ, ಹೊಲದ ಮಾಲೀಕರು ಮೌತಾಣಾ ತೆರಬೇಕಾಗಿತ್ತು. ವಾಹನದಲ್ಲಿ ಸವಾರಿ ಮಾಡುವ ವ್ಯಕ್ತಿ ಅಪಘಾತಕ್ಕೀಡಾದರೆ ಮತ್ತು ಆ ವ್ಯಕ್ತಿ ಮೃತಪಟ್ಟರೆ, ವಾಹನದ ಮಾಲೀಕರು ಮೌತಾಣಾ ತೆರಬೇಕಾಗುತ್ತದೆ. ಅನೇಕ ಪ್ರಕರಣಗಳಲ್ಲಿ, ಮೌತಾಣಾ ನೀಡದಿದ್ದರೆ ಸಂಬಂಧಪಟ್ಟ ವ್ಯಕ್ತಿಯನ್ನು ಸುಮ್ಮನೆ ಬಿಡಲಾಗುತ್ತಿರಲಿಲ್ಲ
ಇದನ್ನೂ ಓದಿ-ದಿನವೊಂದಕ್ಕೆ ಲಕ್ಷಕ್ಕೂ ಅಧಿಕ ಗಳಿಕೆ ಮಾಡ್ತಾಳೆ ಈ 'ಲೋನ್ಲಿ ಮ್ಯಾನ್ಸ್ ಗರ್ಲ್ ಫ್ರೆಂಡ್'!
ಆರೋಪಿಗಳು ಮೌತಾಣಾ ನಿರಾಕರಿಸಿದರೆ, ಅವರ ವಿರುದ್ಧ 'ಚಡೋತರಾ' ಕ್ರಮ ಕೈಗೊಳ್ಳಲಾಗುತ್ತಿತ್ತು. 'ಚಡೋತರಾ' ಎಂದರೆ ಆಯುಧಗಳನ್ನು ಹಿಡಿದು ಅಪಾರ ಸಂಖ್ಯೆಯ ಜನರು ಆರೋಪಿಯ ಮನೆಯನ್ನು ಸುತ್ತುವರೆಯುತ್ತಿದ್ದರು. ಕಾಲ ಕಳೆದಂತೆ ಈ ಪದ್ಧತಿ ನಶಿಸಿಹೋಯಿತು. ಆದರೂ ಕೆಲವೊಮ್ಮೆ ಮೌತಾಣಾ ಪ್ರಕರಣಗಳು ಅಲ್ಲಿಲ್ಲಿ ಕೇಳಿಬರುತ್ತಲೇ ಇರುತ್ತವೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.