Swiggy Delivery Girl : ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಮಾತನ್ನು ನೀವು ಕೇಳಿರಬೇಕು. ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುವ ಈ ವಿಶೇಷ ಸಾಮರ್ಥ್ಯವುಳ್ಳ ಮಹಿಳೆ ಸಾಧನೆಗೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ನಮಗೆ ಹಸಿವಾದಾಗ ಮತ್ತು ಮನೆಯಲ್ಲಿ ಏನನ್ನಾದರೂ ಮಾಡಲು ಮನಸ್ಸಾಗದಿದ್ದಾಗ, ನಾವು ಕುಳಿತು ಆಹಾರವನ್ನು ಆರ್ಡರ್ ಮಾಡುತ್ತೇವೆ. ಇದರ ನಂತರ, ಡೆಲಿವರಿ ಏಜೆಂಟ್ ಆದಷ್ಟು ಬೇಗ ಬರಬೇಕು ಮತ್ತು ಆಹಾರವನ್ನು ತಕ್ಷಣವೇ ತಲುಪಿಸಬೇಕು ಎಂದು ನಾವು ಖಂಡಿತವಾಗಿ ಭಾವಿಸುತ್ತೇವೆ. ತಡವಾದಾಗ ಕಾರಣ ತಿಳಿಯದೆ ಕೆಲವರು ಡೆಲಿವರಿ ಏಜೆಂಟ್ ಗೆ ಕರೆ ಮಾಡಿ ಸುಳ್ಳು ಹೇಳುತ್ತಿದ್ದಾರೆ ಎಂದು ಬೈಯುತ್ತಾರೆ. ಆದರೆ ಈ ವಿಡಿಯೋ ನೋಡಿದ ಮೇಲೆ ನೀವು ಅವರೊಂದಿಗೆ ಇನ್ಮುಂದೆ ಹಾಗೆ ವರ್ತಿಸುವುದಿಲ್ಲ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: No. 1 Car: Alto-WagonR  ಅಲ್ಲ, ಕೇವಲ 6.49 ಲಕ್ಷ ರೂ.ಗೆ ಸಿಗುವ ಈ ಕಾರ್ ದೇಶದ ನಂ.1 ಕಾರ್!


ದಿವ್ಯಾಂಗ ಮಹಿಳೆಯಿಂದ ಮನೆ ಬಾಗಿಲಿಗೆ ಫುಡ್‌ ಡೆಲಿವರಿ :


[[{"fid":"256426","view_mode":"default","fields":{"format":"default","field_file_image_alt_text[und][0][value]":"Swiggy Delivery Girl ","field_file_image_title_text[und][0][value]":"ವ್ಹೀಲ್‌ಚೇರ್‌ ಮೇಲೆ ಫುಡ್‌ ಡೆಲಿವರಿ "},"type":"media","field_deltas":{"1":{"format":"default","field_file_image_alt_text[und][0][value]":"Swiggy Delivery Girl ","field_file_image_title_text[und][0][value]":"ವ್ಹೀಲ್‌ಚೇರ್‌ ಮೇಲೆ ಫುಡ್‌ ಡೆಲಿವರಿ "}},"link_text":false,"attributes":{"alt":"Swiggy Delivery Girl ","title":"ವ್ಹೀಲ್‌ಚೇರ್‌ ಮೇಲೆ ಫುಡ್‌ ಡೆಲಿವರಿ ","class":"media-element file-default","data-delta":"1"}}]]


ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಅಂಗವಿಕಲ ಮಹಿಳೆಯೊಬ್ಬರು ಸ್ವಿಗ್ಗಿ ಸರ್ವಿಸ್ ಟಿ-ಶರ್ಟ್ ಧರಿಸಿ ತನ್ನ ಮೋಟಾರ್ ಚಾಲಿತ ಗಾಲಿಕುರ್ಚಿಯಲ್ಲಿ ಆಹಾರವನ್ನು ವಿತರಿಸುತ್ತಿರುವುದನ್ನು ಕಾಣಬಹುದು. ಜಗವಿಂದರ್ ಸಿಂಗ್ ಘುಮಾನ್ ಎಂಬ ಬಳಕೆದಾರರು ಲಿಂಕ್ಡ್‌ಇನ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಚಿಕ್ಕ ಕ್ಲಿಪ್‌ನಲ್ಲಿ, ಸ್ವಿಗ್ಗಿ ಏಜೆಂಟ್ ಮೋಟಾರೀಕೃತ ಗಾಲಿಕುರ್ಚಿಯಲ್ಲಿ ಆಹಾರವನ್ನು ವಿತರಿಸುವುದನ್ನು ಕಾಣಬಹುದು.  


ಪೋಸ್ಟ್ ವೈರಲ್ ಆಗಿದ್ದು, ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಒಬ್ಬ ಬಳಕೆದಾರರು, "ನಾನು ಅವರನ್ನು ತುಂಬಾ ಮೆಚ್ಚುತ್ತೇನೆ. ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ" ಎಂದಿದ್ದಾರೆ. "ಇದು ಅದ್ಭುತ ಮತ್ತು ಧೈರ್ಯಶಾಲಿ ಕೆಲಸ""= ಎಂದು ಮತ್ತೊಬ್ಬ ಯೂಸರ್‌ ಬರೆದಿದ್ದಾರೆ. 


ಇದನ್ನೂ ಓದಿ: Bigg Boss 9: ಅತಿ ಶೀಘ್ರದಲ್ಲೇ ನಿಮ್ಮ ಟಿವಿ ಪರದೆ ಮೇಲೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 9


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.