Bigg Boss 9: ಅತಿ ಶೀಘ್ರದಲ್ಲೇ ನಿಮ್ಮ ಟಿವಿ ಪರದೆ ಮೇಲೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 9

Bigg Boss Kannada Season 9 : ಸ್ಮಾಲ್‌ ಸ್ಕ್ರೀನ್‌ನ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಗಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ. 

Written by - Chetana Devarmani | Last Updated : Sep 8, 2022, 11:59 AM IST
  • ಸ್ಮಾಲ್‌ ಸ್ಕ್ರೀನ್‌ನ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌
  • ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್‌ 9
  • ಪ್ರೋಮೋವನ್ನು ಹಂಚಿಕೊಂಡ ಕಲರ್ಸ್‌ ಕನ್ನಡ ವಾಹಿನಿ
Bigg Boss 9: ಅತಿ ಶೀಘ್ರದಲ್ಲೇ ನಿಮ್ಮ ಟಿವಿ ಪರದೆ ಮೇಲೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 9  title=
ಬಿಗ್‌ ಬಾಸ್‌

Bigg Boss Kannada Season 9 : ಸ್ಮಾಲ್‌ ಸ್ಕ್ರೀನ್‌ನ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಗಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ಬಿಗ್​ ಬಾಸ್​ ಓಟಿಟಿಯಲ್ಲಿ ಮುಕ್ತಾಯಗೊಳ್ಳಲು ಕೇವಲ ಎರಡು ವಾರ ಬಾಕಿ ಇದೆ.​ ಈ ಬೆನ್ನಲ್ಲೇ ಕಲರ್ಸ್​ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಸಿಹಿ ಸುದ್ದಿ ಕೊಟ್ಟಿದ್ದು, ಅತಿ ಶೀಘ್ರದಲ್ಲೇ ಟಿವಿ ಪರದೆ ಮೇಲೆ ಪ್ರೇಕ್ಷಕರು ಬಿಗ್ ಬಾಸ್​ ಹೊಸ ಸೀಸನ್ ನೋಡಬಹುದಾಗಿದೆ. 

ಇದನ್ನೂ ಓದಿ: ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ನಟಿ ಉರ್ವಶಿ ರೌಟೇಲಾ..!

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್‌ನಲ್ಲಿ ಸದ್ಯ 9 ಸ್ಪರ್ಧಿಗಳು ಇದ್ದಾರೆ. ಇವರ ಪೈಕಿ ಮೂವರು ಟಿವಿಯಲ್ಲಿ ಪ್ರಸಾರವಾಗುವ ಬಿಗ್‌ಬಾಸ್‌ ಸೀಸನ್‌ಗೆ​ ಕಾಲಿಡಲಿದ್ದಾರೆ. ಇದರ ಜತೆಗೆ ಹೊಸದಾಗಿ 13 ಸ್ಪರ್ಧಿಗಳು ದೊಡ್ಮನೆ ಸೇರಲಿದ್ದಾರೆ. 

 

 

ಆಗಸ್ಟ್‌ನಲ್ಲಿ ಶುರುವಾದ ಮಿನಿ ಸೀಸನ್ ಅಕ್ಟೋಬರ್‌ನಲ್ಲಿ ಮುಕ್ತಾಯವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಸೀಸನ್ ಪ್ರಸಾರವಾಗ್ತಿದ್ದು ಈ ಸೀಸನ್ 100 ದಿನಗಳ ಕಾಲ ನಡೆಯಲಿದೆ. ಇದೀಗ ಸುದೀಪ್‌ ಇರುವ ಪ್ರೋಮೋವನ್ನು ಕಲರ್ಸ್‌ ಕನ್ನಡ ವಾಹಿನಿ ಹಂಚಿಕೊಂಡಿದ್ದು, ಶೀಘ್ರದಲ್ಲೇ ಶುರುವಾಗಲಿದೆ.

ಇದನ್ನೂ ಓದಿ: Photos : ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ಸೀಮಂತ ಕಾರ್ಯಕ್ರಮದ ಫೋಟೋಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News