Snake Suicide Viral News: ಹಾವು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೀವು ಎಂದಾದರೂ ನೋಡಿದ್ದೀರಾ? ವಿಷಸರ್ಪಗಳು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಅಂತಾ ನೀವು ಎಂದಾದರೂ ಯೋಚಿಸಿದ್ದೀರಾ? ಹಾವೊಂದು ಆತ್ಮಹತ್ಯೆ ಮಾಡಿಕೊಂಡಿರುವ ಫೋಟೋ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್​ ಆಗುತ್ತಿದೆ.


COMMERCIAL BREAK
SCROLL TO CONTINUE READING

ಹಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯವನ್ನು ನೋಡಿದ ವ್ಯಕ್ತಿಯೊಬ್ಬರು ಆಘಾತಕ್ಕೊಳಗಾಗಿದ್ದು, ಅದರ ಫೋಟೋವನ್ನು redditನಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಚಿತ್ರದಲ್ಲಿ ಹಾವು ಸ್ವತಃ ಸುತ್ತಿಕೊಂಡು 10 ನಿಮಿಷಗಳ ನಂತರ ಕೊನೆಯುಸಿರೆಳೆದಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಕುದುರೆ ಸವಾರಿ ಮಾಡಿದವರು ಯಾರು ಗೊತ್ತೆ..? ಉತ್ತರ ಕೇಳಿದ್ರೆ ಶಾಕ್‌ ಆಗ್ತೀರಾ..


ಸೋಷಿಯಲ್‌ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಹಾವೊಂದು ಸುತ್ತಿಕೊಂಡಿರುವುದನ್ನು ನೀವು ಕಾಣಬಹುದು. ಹಾವು ತನ್ನ ಬಾಲದಿಂದ ಬಾಯಿ, ಕತ್ತನ್ನು ಬಿಗಿಯಾಗಿ ಹಿಡಿದುಕೊಂಡಿದೆ. ಈ ಹಾವು ಆತ್ಮಹತ್ಯೆಗೆ ಯತ್ನಿಸಿದ 10 ನಿಮಿಷಗಳ ನಂತರ ಕತ್ತು ಹಿಸುಕಿ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಫೋಟೋ ಶೇರ್ ಮಾಡಿದ ವ್ಯಕ್ತಿ ಹೇಳಿದ್ದಾರೆ. ʼYesterday I found a snake which was strangling himself, after 10 minutes he diedʼ ಎಂದು ಫೋಟೋ ಹಂಚಿಕೊಂಡಿರುವ ವ್ಯಕ್ತಿ ಕಾಪ್ಶನ್‌ ಹಾಕಿದ್ದಾರೆ. 


Yesterday I found a snake which was strangling himself, after 10 minutes he died
byu/MrBartolomeo inu_MrBartolomeo

ಹಾವು ಆತ್ಮಹತ್ಯೆ ಮಾಡಿಕೊಂಡಿರುವ ಫೋಟೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಸಖತ್ ವೈರಲ್​ ಆಗಿದೆ. ಲಕ್ಷಾಂತರ ಜನರು ಈ ಫೋಟೋವನ್ನು ವೀಕ್ಷಿಸಿದ್ದಾರೆ. ಈ ಬಗ್ಗೆ ಹತ್ತು ಹಲವು ಪ್ರಶ್ನೆಗಳು ಹಾಗೂ ಅನುಮಾನಗಳನ್ನು ಹುಟ್ಟು ಹಾಕಿದೆ. ʼಅಯ್ಯೋ ಪ್ರಾಣಿಗಳು ಮತ್ತು ಹಾವುಗಳು ಸಹ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಾರಂಭಿಸಿದವೇ?, ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡುವ ಬದಲು ಅದರ ಫೋಟೋ ತೆಗೆದುಕೊಂಡಿರುವ ವ್ಯಕ್ತಿಯನ್ನು ಶಿಕ್ಷಿಸಬೇಕು ಅಂತಾ ಕೆಲವು ಕಾಮೆಂಟ್‌ ಮಾಡಿದ್ದಾರೆ.


ಇದನ್ನೂ ಓದಿ: ವಿವಾದಗಳ ಬೆನ್ನಲ್ಲೇ ಮತ್ತೊಂದು ಶಾಕಿಂಗ್!ವಿಶ್ರಾಂತಿಗೆಂದು ಮನೆಗೆ ತೆರಳಿದ್ದ ಸಿಎಂ ಅಧಿಕೃತ ನಿವಾಸದಿಂದಲೇ ನಾಪತ್ತೆ!


ಈ ಫೋಟೋ ನೋಡಿದ ಕೆಲವರು ʼಪಾಪ ಅದಕ್ಕೇನು ತೊಂದರೇನೋ ಏನೋʼ?, ʼಹಾವಿಗೂ ಲವ್ ಫೆಲ್ ಆಗಿರಬೇಕುʼ!, ʼThink Family problemʼ, ʼಸಾಲ ಹೆಚ್ಚಾಗಿರಬಹುದುʼ.. ಹೀಗೆ ಹಲವು ರೀತಿಯಲ್ಲಿ ಫನ್ನಿ ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ. ಆದರೆ ಹಾವು ಆತ್ಮಹತ್ಯೆ ಮಾಡಿಕೊಂಡಿರುವ ಈ ಸುದ್ದಿ ಎಷ್ಟರಮಟ್ಟಿಗೆ ಸತ್ಯ ಎನ್ನುವುದು ಮಾತ್ರ ಇನ್ನೂ ತಿಳಿದುಬಂದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.