ಓದಿದ್ದು ಕೇವಲ 9ನೇ ತರಗತಿ, 20 ವರ್ಷಗಳಿಂದ ಸರ್ಜರಿ ಮಾಡುತ್ತಿದ್ದ ನಕಲಿ ವೈದ್ಯ..!

Fake Doctor : ಹಣ ಸಂಪಾದನೆಗೆ ಮಾಡಲು ಕೆಟ್ಟ ಮಾರ್ಗ ಹಿಡಿದ ನಕಲಿ ವೈದ್ಯನೊಬ್ಬ 20 ವರ್ಷಗಳಿಂದ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ. ಅವನು ಓದಿದ್ದು ಕೇವಲ 9ನೇ ತರಗತಿವರೆಗೆ ಮಾತ್ರ. ಆದರೆ, ವೈದ್ಯರೆಂದು ಹೇಳಿಕೊಂಡು ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Sep 27, 2024, 09:53 PM IST
    • ಹಣ ಸಂಪಾದನೆಗೆ ಮಾಡಲು ಕೆಟ್ಟ ಮಾರ್ಗ ಹಿಡಿದ ನಕಲಿ ವೈದ್ಯ
    • ನಕಲಿ ವೈದ್ಯನೊಬ್ಬ 20 ವರ್ಷಗಳಿಂದ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ.
    • ಈತ ಓದಿದ್ದು ಕೇವಲ 9ನೇ ತರಗತಿವರೆಗೆ ಮಾತ್ರ.
ಓದಿದ್ದು ಕೇವಲ 9ನೇ ತರಗತಿ, 20 ವರ್ಷಗಳಿಂದ ಸರ್ಜರಿ ಮಾಡುತ್ತಿದ್ದ ನಕಲಿ ವೈದ್ಯ..! title=

Viral News : ಹಣ ಸಂಪಾದಿಸುವ ಆಸೆಯಿಂದ ಅಡ್ಡ ದಾರಿ ಹಿಡಿದ ಹುಮನಾಯ್ಡ್ ವೈದ್ಯರೊಬ್ಬರು ಮುಖವಾಡ ಬಯಲಾಗಿದೆ.. ಸುಮಾರು 20 ವರ್ಷಗಳಿಂದ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ನಕಲಿ ವೈದ್ಯನ ಬಂಡವಾಳ ಬಯಲಾಗಿದೆ. ಆತ ಓದಿದ್ದು 9ನೇ ತರಗತಿವರೆಗೆ ಮಾತ್ರ, ಆದರೆ ವೈದ್ಯರೆಂದು ಹೇಳಿಕೊಂಡು ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ..

ಸೆಂಟ್ರಲ್ ಥೈಲ್ಯಾಂಡ್‌ನ ಸಮುತ್ ಸಖೋನ್ ನಗರದ ಕಿಟ್ಟಿಕಾರ್ನ್ ಸಾಂಗ್ರಿ (36) ತನ್ನದೇ ಆದ ಕ್ಲಿನಿಕ್ ಸ್ಥಾಪಿಸಿ ಕಳೆದ 20 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕೆಲಸವನ್ನು ಪ್ರಚಾರ ಮಾಡುತ್ತಿದ್ದ. ಆರಂಭದಲ್ಲಿ ಸಂಗ್ರಿ ಮಾಯಾ ಮಾತುಗಳನ್ನು ನಂಬಿದ ರೋಗಿಗಳು ಅವನ ಆಸ್ಪತ್ರೆಗೆ ಬರುತ್ತಿದ್ದರು.

ಇದನ್ನೂ ಓದಿ:ನನಗೆ ನೋಟಿಸ್ ಬಂದಿಲ್ಲ, ಸ್ವಇಚ್ಛೆಯಿಂದ ಬಂದಿದ್ದೇನೆ: ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ

ಆದರೆ ಇತ್ತೀಚೆಗೆ ಈತನಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗೆ ಗಂಭೀರ ಸಿಲಿಕಾನ್ ಸೋಂಕು ಕಾಣಿಸಿಕೊಂಡಿತು. ವೈದ್ಯರ ವರ್ತನೆಯಿಂದ ಅನುಮಾನಗೊಂಡ ರೋಗಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕುಟುಕು ಕಾರ್ಯಾಚರಣೆಯ ಮೂಲಕ ನಕಲಿ ಶಸ್ತ್ರಚಿಕಿತ್ಸಕನ ಬಂಡಾರ ಭೇದಿಸಿದ್ದಾರೆ.

ನಕಲಿ ವೈದ್ಯನ ವಿಚಾರಣೆ ನಡೆಸಿದಾಗ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ತನಿಖೆಯ ಸಮಯದಲ್ಲಿ ಈತ, ವೈದ್ಯಕೀಯ ಅಧ್ಯಯನ ಮಾಡಿಲ್ಲ, ಪರವಾನಗಿಯನ್ನು ಪಡೆದಿಲ್ಲ ಎಂದು ಒಪ್ಪಿಕೊಂಡಿದ್ದಾರೆ.. ಯಾವುದೇ ವೈದ್ಯಕೀಯ ಹಿನ್ನೆಲೆ ಅಥವಾ ಪರವಾನಗಿ ಇಲ್ಲದೇ ಪ್ರತಿ ತಿಂಗಳು ಕನಿಷ್ಠ ಎರಡು ಅಥವಾ ಮೂರು ಜನರಿಗೆ ಆಪರೇಷನ್ ಮಾಡುತ್ತಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಇದನ್ನೂ ಓದಿ:ನಿಮಗೆ ಆಗೋದಾದ್ರೆ ಈ ಕಾಯ್ದೆ ಜಾರಿಗೆ ತನ್ನಿ... ರಾಜೀನಾಮೆ ಒತ್ತಡ ಬೆನ್ನಲ್ಲೇ ಪ್ರಧಾನಿ ಮೋದಿಗೆ ಹೀಗೊಂದು ಸವಾಲೆಸೆದ ಸಿಎಂ ಸಿದ್ದರಾಮಯ್ಯ

14ನೇ ವಯಸ್ಸಿನಲ್ಲಿ ಇಂಪ್ಲಾಂಟ್ ಮಾಡುವುದನ್ನು ಕಲಿತಿದ್ದ, ಅಂದಿನಿಂದ ಅನೇಕರಿಗೆ ಆಪರೇಷನ್ ಮಾಡಿದ್ದಾರನೆ.. ಪ್ರತಿ ಆಪರೇಷನ್ ಗೆ ರೂ.13 ಸಾವಿರದಿಂದ ರೂ.50 ಸಾವಿರ ವಸೂಲಿ ಮಾಡುತ್ತಿದ್ದ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಸಧ್ಯ ನಕಲಿ ವೈದ್ಯನ ಬಂಧನವಾಗಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News