Viral Video: ಅಪ್ಪನ ಮುಂದೆಯೇ ಸಿಗರೇಟ್ ಹಚ್ಚಿ ಅವಾಜ್ ಹಾಕಿದ ಮಗ.. ಹೇಗ್ ಬಿತ್ತು ನೋಡಿ ಒದೆ!
Smoking Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿನಿತ್ಯ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಕೆಲವು ನೋಡುಗರನ್ನು ನಗಿಸಿದರೆ, ಕೆಲವು ಆಶ್ಚರ್ಯವನ್ನು ಉಂಟು ಮಾಡುತ್ತವೆ. ಇದೀಗ ಅಚ್ಚರಿಯ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ.
Smoking Viral Video: ಧೂಮಪಾನ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಧೂಮಪಾನವು ಶ್ವಾಸಕೋಶದ ಕಾಯಿಲೆ ಮತ್ತು ಕ್ಯಾನ್ಸರ್ ಸೇರಿದಂತೆ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇಷ್ಟೆಲ್ಲ ಇದ್ದರೂ ಪ್ರಪಂಚದಾದ್ಯಂತ ಧೂಮಪಾನಿಗಳು ಪ್ರತಿದಿನ ಕೋಟ್ಯಂತರ ರೂಪಾಯಿ ಮೌಲ್ಯದ ಸಿಗರೇಟ್ ಸೇದುತ್ತಾರೆ. ಪ್ರಸ್ತುತ, ಹೆಚ್ಚಿನ ದೇಶಗಳಲ್ಲಿ, ಪೋಷಕರು ತಮ್ಮ ಮಕ್ಕಳನ್ನು ಕೆಟ್ಟ ಅಭ್ಯಾಸಗಳಿಂದ ದೂರವಿರಿಸಲು ಪ್ರಯತ್ನಿಸುತ್ತಿದ್ದಾರೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಕಾಣಿಸಿಕೊಂಡಿದೆ, ಇದನ್ನು ನೋಡಿ ಧೂಮಪಾನಿಗಳು ಸ್ವಲ್ಪ ಸಮಯ ದಂಗಾಗಿದ್ದಾರೆ.
ಇದನ್ನೂ ಓದಿ: ಗುಟ್ಟಾಗಿ ಹೊಲದ ಮಧ್ಯೆ ಆಂಟಿ - ಅಂಕಲ್ ಗುದ್ದಾಟ.. ಆದ್ರೂ ವೈರಲ್ ಆಯ್ತು ವಿಡಿಯೋ!
ಸಾಮಾನ್ಯವಾಗಿ, ನಮ್ಮ ದೇಶದಲ್ಲಿ, ಹೆಚ್ಚಿನ ಚಿಕ್ಕ ಮಕ್ಕಳು ತಮ್ಮ ಹೆತ್ತವರಿಗೆ ಗೊತ್ತಿಲ್ಲದೆ, ಕದ್ದುಮುಚ್ಚಿ ಸಿಗರೇಟ್ ಸೇದುವುದು ಮತ್ತು ಮಾದಕ ದ್ರವ್ಯಗಳನ್ನು ಸೇವಿಸುವುದನ್ನು ಕಾಣಬಹುದು. ಹೆತ್ತವರು ಹೊಡೆಯುವ ಭಯದಿಂದ ಅವರು ಈ ರೀತಿ ಮಾಡುತ್ತಾರೆ. ಯಾವ ಪೋಷಕರೂ ತಮ್ಮ ಮಕ್ಕಳು ಈ ರೀತಿಯ ಕೆಟ್ಟ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದನ್ನು ನೋಡಲು ಇಷ್ಟಪಡುವುದಿಲ್ಲ. ಮತ್ತೊಂದೆಡೆ ಮಕ್ಕಳು ಧೂಮಪಾನ ಮಾಡುವುದು ಅವರ ಹೆತ್ತವರಿಗೆ ಕಂಡರೆ, ಅವರು ಕೆಂಡಾಮಂಡಲರಾಗುವುದು ಖಚಿತ.
ತಂದೆಯ ಮುಂದೆ ಸಿಗರೇಟ್ ಹಚ್ಚಿದ ಮಗ:
ಇತ್ತೀಚೆಗಷ್ಟೇ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಒಬ್ಬ ಹುಡುಗ ತನ್ನ ತಂದೆಯ ಮುಂದೆ ತಿಳಿಯದೆ ಸಿಗರೇಟ್ ಸೇದುತ್ತಿರುವುದನ್ನು ಕಾಣಬಹುದು. ವಾಸ್ತವವಾಗಿ ವಿಡಿಯೋದಲ್ಲಿ ವ್ಯಕ್ತಿಯು ರೆಸ್ಟೋರೆಂಟ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಆ ಸಮಯದಲ್ಲಿ ಅವನ ತಂದೆಯು ಹಿಂದಿನಿಂದ ಬರುತ್ತಾನೆ. ಮಗ ಸಿಗರೇಟ್ ಸೇದುವುದನ್ನು ಕಂಡು, ಅವನ ತಂದೆ ಬಲವಾಗಿ ಹೊಡೆಯುತ್ತಾನೆ.
ಇದನ್ನೂ ಓದಿ: ನೀವು 20 ರೂ.ಗೆ ಖರೀದಿಸುವ ಚಿಪ್ಸ್ ಪ್ಯಾಕೆಟ್, ಅಂಗಡಿಯವರಿಗೆ ಎಷ್ಟು ಬೆಲೆಗೆ ಸಿಕ್ಕಿರುತ್ತೆ ಗೊತ್ತಾ?
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ :
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದನ್ನು ನೋಡಿದ ಬಳಕೆದಾರರು ತಪ್ಪು ದಾರಿಯಲ್ಲಿ ಸಾಗುವ ಮುನ್ನ ಮಕ್ಕಳನ್ನು ತಡೆಯುವ ಇಂತಹ ತಂದೆಯೇ ನಮ್ಮ ಸಮಾಜಕ್ಕೆ ಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋ ಒಂದು ಲಕ್ಷ 26 ಸಾವಿರಕ್ಕೂ ಹೆಚ್ಚು ಬಳಕೆದಾರರು ಲೈಕ್ ಮಾಡಿದ್ದಾರೆ ಮತ್ತು 5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಇದನ್ನು ವೀಕ್ಷಿಸಿದ್ದಾರೆ. ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ.
ಇದನ್ನೂ ಓದಿ: ಹಿಮಾಲಯದ ಸ್ನೋವನ್ನು ಐಸ್ ಕ್ರೀಮ್ ಎಂದು ತಿಂದ ಮಹಿಳೆ: ವಿಡೀಯೊ ಫುಲ್ ವೈರಲ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.