Interesting Facts: ನೀವು 20 ರೂ.ಗೆ ಖರೀದಿಸುವ ಚಿಪ್ಸ್ ಪ್ಯಾಕೆಟ್, ಅಂಗಡಿಯವರಿಗೆ ಎಷ್ಟು ಬೆಲೆಗೆ ಸಿಕ್ಕಿರುತ್ತೆ ಗೊತ್ತಾ?

Interesting Facts about Chips Packet: ಭಾರತದಲ್ಲಿ ಚಿಪ್ಸ್ ಅನ್ನು ತಿಂಡಿಗಳಾಗಿ ಬಳಸಲಾಗುತ್ತದೆ. ಯಾವುದೇ ಪಾರ್ಟಿ ಅಥವಾ ಪಿಕ್ನಿಕ್ ಚಿಪ್ಸ್ ಇಲ್ಲದೆ ಅಪೂರ್ಣವಾಗಿದೆ. ಪ್ಯಾಕ್ ಮಾಡಿದ ಚಿಪ್ಸ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಆಹಾರ ಉತ್ಪನ್ನಗಳಲ್ಲಿ ಒಂದಾಗಿದೆ.   

Written by - Chetana Devarmani | Last Updated : Apr 30, 2023, 09:28 PM IST
  • ಭಾರತದಲ್ಲಿ ಚಿಪ್ಸ್ ಅನ್ನು ತಿಂಡಿಗಳಾಗಿ ಬಳಸಲಾಗುತ್ತದೆ
  • 20 ರೂ.ಗೆ ಖರೀದಿಸುವ ಚಿಪ್ಸ್ ಪ್ಯಾಕೆಟ್
  • ಅಂಗಡಿಯವರಿಗೆ ಎಷ್ಟು ಬೆಲೆಗೆ ಸಿಕ್ಕಿರುತ್ತೆ ಗೊತ್ತಾ?
Interesting Facts: ನೀವು 20 ರೂ.ಗೆ ಖರೀದಿಸುವ ಚಿಪ್ಸ್ ಪ್ಯಾಕೆಟ್, ಅಂಗಡಿಯವರಿಗೆ ಎಷ್ಟು ಬೆಲೆಗೆ ಸಿಕ್ಕಿರುತ್ತೆ ಗೊತ್ತಾ? title=
Chips

Interesting Facts: ನೀವು ಮನೆಯಿಂದ ಎಲ್ಲಾದರೂ ಔಟಿಂಗ್‌ ಹೊರಟ ತಕ್ಷಣ ಮೊದಲು ಅಂಗಡಿಯಲ್ಲಿ ಖರೀದಿಸುವುದು ಚಿಪ್ಸ್‌ ಪ್ಯಾಕೆಟ್‌. ಮಕ್ಕಳಿಂದ ಹಿಡಿದು  ಮುದುಕರವರೆಗೆ ಎಲ್ಲರೂ ಚಿಪ್ಸ್ ತಿನ್ನಲು ಇಷ್ಟಪಡುತ್ತಾರೆ. ಚಿಪ್ಸ್ ಮಾರುಕಟ್ಟೆಯಲ್ಲಿ ರೂ.5, ರೂ.10 ಮತ್ತು ರೂ.20 ರಿಂದ ದೊಡ್ಡ ಫ್ಯಾಮಿಲಿ ಪ್ಯಾಕ್‌ಗಳ ವರೆಗೆ ಲಭ್ಯವಿದೆ. ನೀವು ಅಂಗಡಿಗೆ ಹೋಗಿ 5, 10 ಅಥವಾ 20 ರೂಪಾಯಿ ಕೊಟ್ಟು ಚಿಪ್ಸ್ ಪ್ಯಾಕೆಟ್ ಖರೀದಿಸುವಿರಿ. ನೀವು 5, 10 ಅಥವಾ 20 ರೂಗಳಿಗೆ ಖರೀದಿಸುವ ಪ್ಯಾಕೆಟ್ ಅಂಗಡಿಯವರಿಗೆ ಎಷ್ಟು ಬೆಲೆಗೆ ಸಿಕ್ಕಿರುತ್ತೆ ಎಂಬುದನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ.

ಇದನ್ನೂ ಓದಿ: ಹೆಡ್ ಫೋನ್ ಇಲ್ಲದೆ ವಿಡಿಯೋ ನೋಡಿದ್ರೆ ರೂ.5000 ದಂಡ! ಈ ವಾರದಿಂದ ಹೊಸ ನಿಯಮ ಜಾರಿ

ಒಂದು ಪ್ಯಾಕೆಟ್ ಬೆಲೆ ಎಷ್ಟು? 

ಲೇಸ್ ಮತ್ತು ಬಿಂಗೊ ಚಿಪ್ಸ್ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕಂಡುಬರುತ್ತವೆ. ಇವುಗಳ ಹೊರತಾಗಿ, ಅನೇಕ ಕಂಪನಿಗಳು ಮಾರುಕಟ್ಟೆಯಲ್ಲಿ ತಮ್ಮ ಚಿಪ್ಸ್‌ಗಳನ್ನು ಮಾರುತ್ತವೆ. 20 ರೂಪಾಯಿ ಮೌಲ್ಯದ ಚಿಪ್ಸ್ ಪ್ಯಾಕ್ ಅಂಗಡಿಯವರಿಗೆ ಸುಮಾರು 18 ರೂಪಾಯಿ ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತದೆ. ನಾವು 10 ರೂ. ಚಿಪ್ಸ್‌ ಪ್ಯಾಕೆಟ್‌ ಹೇಳೋದಾದ್ರೆ ಅದರ ಬೆಲೆ ಸುಮಾರು 9 ರೂ. ಈಗ ನಾವು ಹೆಚ್ಚು ಮಾರಾಟವಾಗುವ ಚಿಪ್ಸ್ ಪ್ಯಾಕ್ ಬಗ್ಗೆ ಮಾತನಾಡುವುದಾದರೆ, ಅಂದರೆ 5 ರೂ ಪ್ಯಾಕ್ ಚಿಪ್ಸ್‌ ಪ್ಯಾಕೆಟ್‌ ಅಂಗಡಿಯವರಿಗೆ ಸುಮಾರು 4.50 ರೂ. ಗೆ ಸಿಕ್ಕಿರುತ್ತದೆ.

ಇದನ್ನೂ ಓದಿ: ಇದು ಅಪರೂಪದ ರಕ್ತದ ಗುಂಪು.. ಇಡೀ ಜಗತ್ತಲ್ಲಿ 9 ಜನ ಮಾತ್ರ ದಾನ ಮಾಡಬಹುದು!

ಪ್ರತಿ ಚಿಪ್ಸ್‌ ಪ್ಯಾಕೆಟ್‌ ಮೇಲೆ 10% ಲಾಭವಿದೆ : 

ಇದರರ್ಥ ಅಂಗಡಿಯವನು ಚಿಪ್ಸ್ ಪ್ಯಾಕ್‌ನಲ್ಲಿ ಸುಮಾರು 10% ಲಾಭವನ್ನು ಗಳಿಸುತ್ತಾನೆ. ಅಂದರೆ, ಅಂಗಡಿಯವನು 5 ರೂಪಾಯಿ ಪ್ಯಾಕೆಟ್‌ನಲ್ಲಿ 50 ಪೈಸೆ, 10 ರೂಪಾಯಿ ಪ್ಯಾಕೆಟ್‌ನಲ್ಲಿ 1 ರೂಪಾಯಿ ಮತ್ತು 20 ರೂಪಾಯಿ ಪ್ಯಾಕೆಟ್‌ನಲ್ಲಿ 2 ರೂಪಾಯಿ ಉಳಿಸುತ್ತಾನೆ. ಆದರೆ, ಕೆಲವು ಸ್ಥಳೀಯ ಕಂಪನಿಗಳ ಚಿಪ್ಸ್ ಕೂಡ ಬರುತ್ತವೆ, ಅದರಲ್ಲಿ ಅಂಗಡಿಯವರಿಗೆ ಸುಮಾರು 12 ರಿಂದ 15 ಪ್ರತಿಶತದಷ್ಟು ಲಾಭ ಸಿಗುತ್ತದೆ.

ಇದನ್ನೂ ಓದಿ: ಭೂಮಿಗೆ ಮೊದಲು ಬಂದಿದ್ದು ಕೋಳಿನಾ? ಮೊಟ್ಟೆನಾ? Chat GPT ಕೊಟ್ಟೇ ಬಿಡ್ತು ಉತ್ತರ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News