ನವದೆಹಲಿ: ಅಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಅದ್ದೂರಿಯಾಗಿ ಮದುವೆ ಸಮಾರಂಭ ನಡೆಯುತ್ತಿತ್ತು. ಮದುವೆ ಮನೆ ಬಣ್ಣಬಣ್ಣದ ಹೂಗಳಿಂದ ಸಿಂಗಾರಗೊಂಡಿತ್ತು. ಸಂಬಂಧಿಕರು, ಬಂಧುಗಳು-ಸ್ನೇಹಿತರು ಆ ಮದುವೆಗೆ ಆಗಮಿಸಿದ್ದರು. ವೇದಿಕೆ ಮೇಲೆ ಮದುಮಗ ಸೂಟ್‍ನಲ್ಲಿ ಮಿಂಚ್ತಾ ಇದ್ರೆ, ಮದುಮಗಳು ವೈಟ್‍ ಗೌನ್‍ನಲ್ಲಿ ಕಂಗೊಳಿಸುತ್ತಿದ್ದಳು.


COMMERCIAL BREAK
SCROLL TO CONTINUE READING

ವಧು-ವರ ಇಬ್ಬರೂ ಇನ್ನೇನು ರಿಂಗ್ ಎಕ್ಸ್‌ಚೇಂಜ್ ಮಾಡಿಕೊಂಡು ಪರಸ್ಪರ ಜೀವನ ಸಂಗಾತಿ ಎಂದು ಪಾದ್ರಿಯ ಮುಂದೆ ಹೇಳಬೇಕಾಗಿತ್ತು. ಈ ವಿಶೇಷ ಸಂದರ್ಭದಲ್ಲಿಯೇ ಒಂದು ಎಡವಟ್ಟು ಆಗಿಹೋಗಿತ್ತು. ಇದ್ದಕ್ಕಿದ್ದ ಹಾಗೆಯೇ ವಧು ‘Stop this Marriage!’ ಅಂತಾ ನೆರೆದಿದ್ದವರ ಮುಂದೆಯೇ ಹೇಳಿಬಿಟ್ಟಳು.


ಇದನ್ನೂಓದಿ: Viral News: ಜಮೀನಿಗೆ ಎಂಟ್ರಿ ಕೊಟ್ಟ 13 ಅಡಿ ಉದ್ದದ ಕಿಂಗ್ ಕೋಬ್ರಾ! ಆಮೇಲೇನಾಯ್ತು?



ಇದ್ರಿಂದ ಮದುವೆ ಬಂದಿದ್ದ ಅತಿಥಿಗಳು ಮಾತ್ರವಲ್ಲ ನಿಮಗೂ ಕೂಡ ಆಶ್ಚರ್ಯವಾಯ್ತು ತಾನೇ! ಪರಸ್ಪರ ಒಪ್ಪಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ವಧು-ವರರ ನಡುವೆ ಅಂಥದ್ದು ಏನ್ ಆಗಿತ್ತು ಅನ್ನೋ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬೇಕು ಅಲ್ವಾ? ಇದ್ದಕ್ಕಿದ್ದ ಹಾಗೆಯೇ ವಧು ‘ಮದುವೆ ನಿಲ್ಲಿಸಿ’ ಅಂತಾ ಹೇಳಿದ್ದು ಏಕೆ ಗೊತ್ತಾ..?


ವಾಸ್ತವವಾಗಿ ಮದುವೆ ಮನೆಗೆ ಬರುವ ವೇಳೆ ಆತುರಾತುರದಲ್ಲಿ ವಧು ತನ್ನ ವೈಟ್‍ ಗೌನಿನ ಅರ್ಧ ಡ್ರೆಸ್ ಅಷ್ಟೇ ಹಾಕಿಕೊಂಡು ಬಂದಿದ್ದಳಂತೆ. ಇದು ಆಕೆಗೆ ರಿಂಗ್ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಸಮಯದಲ್ಲಿ ನೆನಪಿಗೆ ಬಂದಿದೆ. ಹೀಗಾಗಿ ಆಕೆ ‘ಮದುವೆಯನ್ನು ನಿಲ್ಲಿಸಿ’ ಎಂದು ಹೇಳಿದ್ದಾಳೆ. ಈ ಘಟನೆಯಿಂದ ಕೆಲಕ್ಷಣ ಮದುವೆಗೆ ಬಂದಿದ್ದ ಅತಿಥಿಗಳಿಗೆ ಗಾಬರಿಗೊಂಡಿದ್ದರು.


ಇದನ್ನೂಓದಿ: Viral Video: ವೈರಲ್ ಆಗಿರೋ ಈ ವಿಡಿಯೋ ನೋಡಿದ್ರೆ ನೀವು ಕನ್ಫೂಸ್ ಆಗೋದು ಗ್ಯಾರಂಟಿ..!


ಕೊನೆಗೆ ವಧುವಿನ ಗೆಳತಿಯರು ಆಕೆಯ ಅರ್ಧ ಡ್ರೆಸ್‍ಅನ್ನು ತಂದು ತೊಡಿಸಿದ್ದಾರೆ. ಇದರಿಂದ ಆಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾಳೆ. ಅತ್ತ ಅಸಲಿ ವಿಷಯ ತಿಳಿದ ಅತಿಥಿಗಳು ಕೂಡ ತಮ್ಮ ಟೆನ್ಷನ್ ಕಡಿಮೆ ಮಾಡಿಕೊಂಡಿದ್ದಾರೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.