ಇದ್ದಕ್ಕಿಂದ್ದಂತೆ ಬಿಳಿ ಬಣ್ಣಕ್ಕೆ ತಿರುಗಿದ ಮಂತ್ರಾಲಯದ ʼಪರಿಮಳ ಪ್ರಸಾದʼ! ವಿಚಿತ್ರ ಘಟನೆಗೆ ಅಚ್ಚರಿಗೊಂಡ ಭಕ್ತರು.. ರಾಯರ ಸನ್ನಿಧಿಯಲ್ಲಿ ಹೀಗಾಗಲು ಕಾರಣವೇನು?
Mantralaya Parimala Prasadam: ಚಾತುರ್ಮಾಸದಲ್ಲಿ ಪರಿಮಳ ಪ್ರಸಾದದ ಬಣ್ಣ ಬದಲಾಯಿಸುವುದು ಶ್ರೀ ರಾಘವೇಂದ್ರಸ್ವಾಮಿ ಮಠದ ಸಂಪ್ರದಾಯ. ಆದರೆ ಇದೇ ತಿಂಗಳಲ್ಲಿ ಮೊದಲ ಬಾರಿಗೆ ಕುಂಕುಮ ಬಣ್ಣದಲ್ಲಿ ಮಾಡಬೇಕಿದ್ದ ಪ್ರಸಾದ ಏಕಾಏಕಿ ಬಿಳಿ ಬಣ್ಣಕ್ಕೆ ತಿರುಗಿದ್ದು ಭಕ್ತರು ಹಾಗೂ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.
Mantralaya Parimala Prasadam: ಆಂಧ್ರ ತೆಲಂಗಾಣ ಕರ್ನಾಟಕ ಮಹಾರಾಷ್ಟ್ರದ ಭಕ್ತರಿಗೆ ಪುಣ್ಯ ಕ್ಷೇತ್ರವೆಂದರೆ ಅದು ಮಂತ್ರಾಲಯ. ಆದರೆ ಇದೀಗ ರಾಯರ ಸನ್ನಿಧಿಯಲ್ಲಿ ವಿಚಿತ್ರ ಅನುಭವವಾಗಿದೆ. ಕರ್ನೂಲ್ ಜಿಲ್ಲೆಯ ಮಂತ್ರಾಲಯದಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ʼಪರಿಮಳ ಪ್ರಸಾದʼದ ಬಣ್ಣ ಬದಲಾಯಿಸಿದ್ದಾರೆ.
ಇದನ್ನೂ ಓದಿ: ಟೆಸ್ಟ್‌ನಲ್ಲಿ 9000 ರನ್... ವಿರಾಟ್ ದಾಖಲೆಯ ಅಬ್ಬರಕ್ಕೆ ಕ್ರಿಕೆಟ್ ಲೋಕವೇ ಫಿದಾ!
ಶ್ರೀ ರಾಘವೇಂದ್ರಸ್ವಾಮಿ ಮೂಲ ವೃಂದಾವನ ದರ್ಶನಕ್ಕೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಶ್ರೀ ಮಠದ ಬಳಿಯ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ನಂತರ ಮೊದಲು ಗ್ರಾಮ ದೇವತೆ ಮಂಚಾಲಮ್ಮನ ದರ್ಶನ ಪಡೆದು ಶ್ರೀ ರಾಘವೇಂದ್ರಸ್ವಾಮಿ ಮೂಲ ವೃಂದಾವನಕ್ಕೆ ಭೇಟಿ ನೀಡಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ರಾಯರ ಬಳಿ ಬೇಡಿಕೊಳ್ಳುತ್ತಾರೆ ಭಕ್ತರು. ಅದಾದ ನಂತರ ಪರಿಮಳ ಪ್ರಸಾದವನ್ನು ಪಡೆದುಕೊಳ್ಳಲಾಗುತ್ತದೆ.
ಆದರೆ ಇದೇ ಸಂದರ್ಭದಲ್ಲಿ ಪರಿಮಳ ಪ್ರಸಾದದ ಬಣ್ಣ ಬದಲಾಗಿದೆ. ಇದನ್ನು ಕಂಡ ಸಾವಿರಾರು ಭಕ್ತರು ಅಚ್ಚರಿಗೊಂಡಿದ್ದಾರೆ, ಆದರೆ ಈ ಬೆಳವಣಿಗೆಗೆ ಒಂದು ಹಿನ್ನೆಲೆ ಇದೆ. ಅದೇನೆಂಬುದನ್ನು ಮುಂದೆ ತಿಳಿಯೋಣ.
ಚಾತುರ್ಮಾಸದಲ್ಲಿ ಪರಿಮಳ ಪ್ರಸಾದದ ಬಣ್ಣ ಬದಲಾಯಿಸುವುದು ಶ್ರೀ ರಾಘವೇಂದ್ರಸ್ವಾಮಿ ಮಠದ ಸಂಪ್ರದಾಯ. ಆದರೆ ಇದೇ ತಿಂಗಳಲ್ಲಿ ಮೊದಲ ಬಾರಿಗೆ ಕುಂಕುಮ ಬಣ್ಣದಲ್ಲಿ ಮಾಡಬೇಕಿದ್ದ ಪ್ರಸಾದ ಏಕಾಏಕಿ ಬಿಳಿ ಬಣ್ಣಕ್ಕೆ ತಿರುಗಿದ್ದು ಭಕ್ತರು ಹಾಗೂ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಸರ್ಫರಾಜ್-ವಿರಾಟ್ ಸ್ಫೋಟಕ ಬ್ಯಾಟಿಂಗ್! ಇತಿಹಾಸದ ಪುಟಗಳನ್ನೇ ಸೇರಿತು ಬೆಂಗಳೂರು ಟೆಸ್ಟ್!
ಶ್ರೀ ರಾಘವೇಂದ್ರಸ್ವಾಮಿ ಮಠದ ಅರ್ಚಕರ ಮಾಹಿತಿ ಪ್ರಕಾರ, ನವೆಂಬರ್ 12 ರವರೆಗೆ ಭಕ್ತರಿಗೆ ಬಿಳಿ ಬಣ್ಣದ ಪರಿಮಳ ಪ್ರಸಾದವನ್ನು ಪೂರೈಸಲಾಗುತ್ತಿದೆ. ಹತ್ತಾರು ಕ್ವಿಂಟಾಲ್ ಪರಿಮಳ ಪ್ರಸಾದವನ್ನು ರವೆ, ಸಕ್ಕರೆ, ಒಣದ್ರಾಕ್ಷಿ, ಗೋಡಂಬಿ, ಏಲಕ್ಕಿ, ಹಸಿರು ಕರ್ಪೂರ ಮತ್ತು ಕೇಸರಿಯನ್ನು ಬಳಸಿ ತಯಾರಿಸಲಾಗುತ್ತದೆ. ಆದರೆ ಈ ತಿಂಗಳು ದ್ವಿದಳ ವ್ರತ ಬರುವುದರಿಂದ ಸಂಪ್ರದಾಯದ ಪ್ರಕಾರ ಏಲಕ್ಕಿ, ಕೇಸರಿ, ಗೋಡಂಬಿ, ದ್ರಾಕ್ಷಿಯನ್ನು ಸುಗಂಧ ಪ್ರಸಾದದಲ್ಲಿ ಬಳಸಲಾಗುವುದಿಲ್ಲ. ಹೀಗಾಗಿ ಪ್ರಸಾದವನ್ನು ಬಿಳಿ ಬಣ್ಣದಲ್ಲಿ ರವೆ ಮತ್ತು ಸಕ್ಕರೆಯೊಂದಿಗೆ ಅಷ್ಟೇ ತಯಾರಿಸಲಾಗುತ್ತದೆ. ನವೆಂಬರ್ 13 ರಿಂದ ಕೇಸರಿ ಬಣ್ಣದಲ್ಲಿಯೇ ಎಂದಿನಂತೆ ಪರಿಮಳ ಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀ ಮಠದ ಪದಾಧಿಕಾರಿಗಳು ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ