Viral News: ಬಾಲದೊಂದಿಗೆ ಜನಿಸಿದ ಹೆಣ್ಣು ಮಗು! ಬಾಲದ ಉದ್ದ ಕಂಡು ಬೆಚ್ಚಿ ಬಿದ್ದ ವೈದ್ಯರು
Trending News: ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ, ಬಾಲಿನ ಗಾತ್ರ ಸುಮಾರು 2 ಇಂಚು ಅಂದರೆ ಸುಮಾರು 5.7 ಸೆಂ.ಮೀ ಇತ್ತು ಮತ್ತು ಅದು 3 ರಿಂದ 5 ಎಂಎಂ ದಪ್ಪವಾಗಿತ್ತು ಎನ್ನಲಾಗಿದೆ.
Viral Content: ಮೆಕ್ಸಿಕೋದಲ್ಲಿ ಹೆಣ್ಣು ಮಗು ಜನಿಸಿದ್ದು, ನವಜಾತ ಹೆಣ್ಣು ಮಗುವಿಗೆ ಬಾಲ ಇರುವುದನ್ನು ಕಂಡು ವೈದ್ಯರು ಮತ್ತು ಆಕೆಯ ಪೋಷಕರು ಭಾರಿ ಆಘಾತಕ್ಕೊಳಗಾಗಿದ್ದಾರೆ. ಮೆಕ್ಸಿಕೋದ ನ್ಯೂವೋ ಲಿಯಾನ್ ಆಸ್ಪತ್ರೆಯಲ್ಲಿ ಆಪರೇಷನ್ ಮೂಲಕ ಈ ಹೆಣ್ಣು ಮಗು ಜನಿಸಿತ್ತು. ಬಾಲಕಿಯ ಬಾಲದ ಗಾತ್ರ ಸುಮಾರು 2 ಇಂಚು ಅಂದರೆ 5.7 ಸೆಂ.ಮೀ ಎಂದು ವೈದ್ಯರು ತಿಳಿಸಿದ್ದಾರೆ. ಬಾಲವು ಸುಮಾರು 3 ರಿಂದ 5 ಮಿಮೀ ದಪ್ಪವಾಗಿತ್ತು. ಬಾಲವು ಮೃದುವಾಗಿತ್ತು ಮತ್ತು ಅದರ ಮೇಲೆ ಕೂದಲುಗಳಿದ್ದವು. ಹೆಣ್ಣು ಮಗುವಿನ ಇತರ ಎಲ್ಲಾ ವೈದ್ಯಕೀಯ ವರದಿಗಳು ಸರಿಯಾಗಿದ್ದು. ಹುಡುಗಿಗೆ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ.
ಇದನ್ನೂ ಓದಿ-Viral News: ವಿಶ್ವ ದಾಖಲೆ ಬರೆಯಲು, ಸತತ 2 ದಿನ ಒಂದೇ ಪೋಸಿಶನ್ ನಲ್ಲಿ ನಿಂತು ಈ ಜೋಡಿ ಮಾಡಿದ್ದೇನು ನೀವೇ ಓದಿ
ಶಸ್ತ್ರಚಿಕಿತ್ಸೆಯ ನಂತರ ಬಾಲಕಿಯ ಈ ಬಾಲವನ್ನು ತೆಗೆಯಲಾಗಿದೆ. ಈ ಹೆಣ್ಣು ಮಗು ಜನಿಸಿದ ಎರಡು ತಿಂಗಳ ನಂತರ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಕ್ಕೂ ಮುನ್ನ ಆಕೆಯ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಬಾಲಕಿ ಸರಿಯಾದ ತೂಕ ಮತ್ತು ಶಸ್ತ್ರಚಿಕಿತ್ಸೆಗೆ ಯೋಗ್ಯವಾದ ನಂತರವೇ ಈ ಆಪರೇಶನ್ ನಡೆಸಲಾಗಿದೆ. ಶಸ್ತ್ರಚಿಕಿತ್ಸೆಗೆ ಮುನ್ನ ವೈದ್ಯರು ಈ ಬಾಲಕಿಯ ಎಂಆರ್‌ಐ ಸ್ಕ್ಯಾನ್ ಮತ್ತು ಇತರ ಹಲವು ಪರೀಕ್ಷೆಗಳನ್ನು ನಡೆಸಿದ್ದಾರೆ ಎನ್ನಲಾಗಿದೆ. ವೈದ್ಯಕೀಯ ವರದಿಗಳ ಪ್ರಕಾರ, ಈ ಹೆಣ್ಣು ಮಗುವಿಗೆ ಯಾವುದೇ ವೈದ್ಯಕೀಯ ಸಮಸ್ಯೆ ಇರಲಿಲ್ಲ. ಅದರ ಎಲ್ಲಾ ವರದಿಗಳು ಸಾಮಾನ್ಯವಾಗಿದ್ದವು. ಗರ್ಭಾವಸ್ಥೆಯಲ್ಲಿಯೂ ಮಗುವಿನ ತಾಯಿಗೆ ಯಾವುದೇ ಸಮಸ್ಯೆ ಇರಲಿಲ್ಲ, ತಾಯಿಗೆ ಸಂಪೂರ್ಣ ಆರೋಗ್ಯವಂತವಾಗಿರುವ ಒಬ್ಬ ಮಗನೂ ಇದ್ದಾನೆ.
ಇದನ್ನೂ ಓದಿ-Viral Video: ಜುಟ್ಟು ಎಳೆದಾಡಿಕೊಂಡು ಪರಸ್ಪರರಿಗೆ ಗೂಸಾ ಕೊಟ್ಟ ಹುಡುಗಿಯರು.. ಕಾರಣ ಏನು?
ಬಾಲವಿರುವ ಮಕ್ಕಳ ಜನನವು ಕೆಲವೇ ಪ್ರಕರಣಗಳಲ್ಲಿ ಕಂಡುಬರುತ್ತದೆ. ವರದಿಗಳ ಪ್ರಕಾರ, 2017 ರವರೆಗೆ ಇಂತಹ ಕೇವಲ 195 ಪ್ರಕರಣಗಳು ವರದಿಯಾಗಿವೆ. ಇತ್ತೀಚೆಗೆ, 2021 ರ ಜನವರಿಯಲ್ಲಿ ಬ್ರೆಜಿಲ್‌ನಲ್ಲಿ ಇಂತಹ ಒಂದು ಮಗು ಜನಿಸಿತ್ತು. ಮಗುವಿನ ಬಾಲದ ಉದ್ದವು ಸುಮಾರು 12 ಸೆಂ.ಮೀ.ನಷ್ಟಿತ್ತು. ಶಸ್ತ್ರಚಿಕಿತ್ಸೆಯ ಸಹಾಯದಿಂದ ವೈದ್ಯರು ಬಾಲವನ್ನು ಬೇರ್ಪಡಿಸಿದ್ದರು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.