Viral Video: ಜುಟ್ಟು ಎಳೆದಾಡಿಕೊಂಡು ಪರಸ್ಪರರಿಗೆ ಗೂಸಾ ಕೊಟ್ಟ ಹುಡುಗಿಯರು.. ಕಾರಣ ಏನು?

Trending Video: ಸಾಮಾಜಿಕ ಮಾಧ್ಯಮದಲ್ಲಿ ಹುಡುಗಿಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. ಇದನ್ನು ನೋಡಿ ನೀವೂ ಕೂಡ ಬೆಚ್ಚಿ ಬೀಳುವಿರಿ ಮತ್ತು ಆಶ್ಚರ್ಯ ಕೂಡ ವ್ಯಕ್ತಪಡಿಸುವಿಸುವಿರಿ.  

Written by - Nitin Tabib | Last Updated : Nov 29, 2022, 12:27 PM IST
  • ಈ ವೀಡಿಯೋ ನೋಡಿ ನೀವೂ ಒಂದು ಕ್ಷಣ ಸ್ತಭ್ದರಾಗಿರಬಹುದು.
  • ಅಷ್ಟೇ ಅಲ್ಲ, ಆ ದೃಶ್ಯ ನೋಡಿ ನಿಮಗೂ ಸಖತ್ ಶಾಕ್ ಆಗಿರಬೇಕು.
  • ಹುಡುಗಿಯರು ನಿಜವಾಗಿಯೂ ಜಾತ್ರೆಯಲ್ಲಿ ಭಾರಿ ಸೀನ್ ಕ್ರಿಯೇಟ್ ಮಾಡಿದ್ದಾರೆ.
Viral Video: ಜುಟ್ಟು ಎಳೆದಾಡಿಕೊಂಡು ಪರಸ್ಪರರಿಗೆ ಗೂಸಾ ಕೊಟ್ಟ ಹುಡುಗಿಯರು.. ಕಾರಣ ಏನು?  title=
Viral Cat Fight Video

Funny Video: ಸಾಮಾಜಿಕ ಮಾಧ್ಯಮದಲ್ಲಿ ಯಾವಾಗ ಯಾವ ವಿಷಯ ವೈರಲ್ ಆಗುತದೆ ಎಂಬುದು ಹೇಳುವುದಕ್ಕೆ ಆಗುವುದಿಲ್ಲ. ಕೆಲವೊಂದು ಬಾರಿ ಸಂಗತಿಗಳು ತುಂಬಾ ಹಾಸ್ಯಾಸ್ಪದವಾಗಿದ್ದರೆ. ಕೆಲವೊಂದು ಅಚ್ಚರಿಯನ್ನುಂಟು ಮಾಡುತ್ತವೆ. ಇದೇ ಸರಣಿಯಲ್ಲಿ ಇದೀಗ ಹುಡುಗಿಯರ ವಿಡಿಯೋವೊಂದು ಮುನ್ನೆಲೆಗೆ ಬಂದಿದ್ದು, ಇದನ್ನು ನೋಡಿದ ಜನರು ದಂಗಾಗಿದ್ದಾರೆ. ಈ ವಿಡಿಯೋದಲ್ಲಿ ಹುಡುಗಿಯರು ಪರಸ್ಪರರ ಜುಟ್ಟು ಎಳೆದಾಡಿಕೊಂಡು ಗೂಸಾ ಇಡುತ್ತಿದ್ದಾರೆ. ಈ ದೃಶ್ಯ ನೋಡಿದವರು ನಿಂತಲ್ಲೇ ಸ್ತಬ್ಧರಾಗಿದ್ದಾರೆ.

ಇದನ್ನೂ ಓದಿ-Viral Video: ಸಾರ್ವಜನಿಕರ ಎದುರೆ ವಧುವಿನ ಜೊತೆ ವರ ಮಾಡಿದ ಈ ಕೃತ್ಯ, ನಂತರ ನಡೆದಿದ್ದು ... ತಾಂಡವ

ಈ ವೈರಲ್ ವಿಡಿಯೋ ಯಾವಾಗ ಮತ್ತು ಎಲ್ಲಿಂದ ಹೊರಹೊಮ್ಮಿದೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಆದರೆ, ವಿಡಿಯೋ ನೋಡಿದರೆ, ಇದೊಂದು ಜಾತ್ರೆಯಲ್ಲಿನ ವಿಡಿಯೋ ಆಗಿದೆ ಎಂಬುದನ್ನು ನಿಖರವಾಗಿ ಹೇಳಬಹುದು. ಅಪಾರ ಸಂಖ್ಯೆಯಲ್ಲಿ ಜನರು ಅಲ್ಲಿ ನೆರೆದಿದ್ದಾರೆ. ಬೆಚ್ಚಿಬೀಳಿಸುವ ಈ ವಿಡಿಯೋದಲ್ಲಿ ಹುಡುಗಿಯರು ಹೇಗೆ ಜಗಳವಾಡುತ್ತಿದ್ದಾರೆ ಎಂಬುದನ್ನು ನೋಡಬಹುದು. ಇನ್ನೊಂದೆಡೆ, ಅಲ್ಲಿದ್ದ ಬಹುತೇಕ ಜನರು ಜಗಳ ಬಿಡಿಸುವುದನ್ನು ಬಿಟ್ಟು ಮೂಕ ಪ್ರೇಕ್ಷಕರಾಗಿದ್ದಾರೆ. ಯಾವುದೋ ವಿಚಾರಕ್ಕೆ ಹುಡುಗಿಯರ ಮಧ್ಯೆ ವ್ಯಾಜ್ಯ ಆರಂಭಗೊಂಡಿದೆ. ನಂತರ ಹುಡುಗಿಯರು ಪರಸ್ಪರರ ಜುಟ್ಟು ಹಿಡಿದುಕೊಂಡು ಗೂಸಾ ಹೊಡೆಯಲು ಪ್ರಾರಂಭಿಸಿದ್ದಾರೆ.  ಈ ಕ್ಯಾಟ್ ಫೈಟ್ ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ. ಇಲ್ಲಿ ಆಶ್ಚರ್ಯಕರ ಸಂಗತಿ ಎಂದರೆ ಈ ಜಗಳನ್ನು ಬಿಡಿಸಲು ಯಾರೂ ಮಧ್ಯಪ್ರವೇಶಿಸಲು ಯತ್ನಿಸಿಲ್ಲ. ಅಷ್ಟೇ ಅಲ್ಲ ಕೆಲವರಂತೂ ತಮ್ಮ ಮೊಬೈಲ್ ನಲ್ಲಿ ಈ ವಿಡಿಯೋವನ್ನು ಸೆರೆಹಿಡಿಯುತ್ತಿರುವುದನ್ನು ನೀವು ನೋಡಬಹುದು... ವಿಡಿಯೋ ನೋಡಿ...

ಇದನ್ನೂ ಓದಿ-Chicken Marriage: ಮದುವೆ ಊಟದಲ್ಲಿ ಕೋಳಿ ಇಲ್ಲ ಅಂತಾ ವಿವಾಹವೇ ಕ್ಯಾನ್ಸಲ್: ಕೊನೆಗೆ ಆಗಿದ್ದೇನು?

ಈ ವೀಡಿಯೋ ನೋಡಿ ನೀವೂ ಒಂದು ಕ್ಷಣ ಸ್ತಭ್ದರಾಗಿರಬಹುದು. ಅಷ್ಟೇ ಅಲ್ಲ, ಆ ದೃಶ್ಯ ನೋಡಿ ನಿಮಗೂ ಸಖತ್ ಶಾಕ್ ಆಗಿರಬೇಕು. ಹುಡುಗಿಯರು ನಿಜವಾಗಿಯೂ ಜಾತ್ರೆಯಲ್ಲಿ ಭಾರಿ ಸೀನ್ ಕ್ರಿಯೇಟ್ ಮಾಡಿದ್ದಾರೆ.  ಇದೀಗ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೊವನ್ನು Instagram ನಲ್ಲಿ 'aryanshakya759' ಹೆಸರಿನ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ಈ ಕ್ಯಾಟ್ ಫೈಟ್ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ನೋಡಿದ್ದಾರೆ. ಜೊತೆಗೆ, 1.5 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಇದೇ ವೇಳೆ, ಕೆಲ ಬಳಕೆದಾರರು ತಮಾಷೆ ಮಾಡುತ್ತಾ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಜಗಳವಾಡುವಾಗ ಈ ಹುಡುಗಿಯರು ಎಷ್ಟು ಕ್ಯೂಟ್ ಕಾಣಿಸುತ್ತಾರೆ ಎಂದು ಕೆಲವರು ಹೇಳಿದರೆ, ವಿಡಿಯೋ ತಯಾರಿಸಿದ ವ್ಯಕ್ತಿಗೆ ಹೆಚ್ಚು ಮಜಾ ಬಂದಿರಬಹುದು ಎಂದು ಒಬ್ಬರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News