ಜಪಾನ್: ರೆಸ್ಟೊರೆಂಟ್‌ನಲ್ಲಿ ಆಹಾರ ಸೇವಿಸುವುದು ಎಲ್ಲರಿಗೂ ವಿಶೇಷ. ಗ್ರಾಹಕರು ಹೊಟೇಲ್ ಪ್ರವೇಶಿಸಿದ ತಕ್ಷಣ, ಗ್ರಾಹಕರನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಲಾಗುತ್ತದೆ. ಆದರೆ ಗ್ರಾಹಕರು ಪ್ರವೇಶಿಸಿದ ತಕ್ಷಣ ಕಪಾಳಮೋಕ್ಷ ಮಾಡುವ ರೆಸ್ಟೋರೆಂಟ್ ಕೂಡ ಜಗತ್ತಿನಲ್ಲಿದೆ ಎಂದರೆ ನಂಬ್ತೀರಾ? ಕಪಾಳಮೋಕ್ಷ ಮಾಡುವುದಕ್ಕೋಸ್ಕರವೇ ಈ ರೆಸ್ಟೋರೆಂಟ್ ವಿಶ್ವಾದ್ಯಂತ ಪ್ರಸಿದ್ಧವಾಗಿದೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ ಮತ್ತು ನೆಟ್ಟಿಗರಿಗೆ ಅವರ ಕಣ್ಣುಗಳನ್ನು ನಂಬಲು ಆಗುತ್ತಿಲ್ಲ. ಅನೇಕ ಬಳಕೆದಾರರು ವೀಡಿಯೊದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ವ್ಯಕ್ತಪಡಿಸಿದ್ದಾರೆ. (Viral News In Kananda)


COMMERCIAL BREAK
SCROLL TO CONTINUE READING

ವಾಸ್ತವದಲ್ಲಿ, ಈ ರೆಸ್ಟೋರೆಂಟ್‌ನ ಹೆಸರು ಶಚಿಹೊಕೊಯಾ-ಯಾ. ಇದು ಜಪಾನ್‌ನ ನಗೋಯಾದಲ್ಲಿದೆ. ಈ ರೆಸ್ಟೋರೆಂಟ್‌ನಲ್ಲಿ ಕಪಾಳಮೋಕ್ಷ  ಮಾಡಿಸಿಕೊಳ್ಳಲು ಜನರು ಹಣವನ್ನು ಕೂಡ ಪಾವತಿಸುತ್ತಾರೆ ಎಂದು ಹೇಳಲಾಗುತ್ತದೆ. ಜನರು ಕಪಾಳಮೋಕ್ಷ ಮಾಡಿಸಿಕೊಳ್ಳಲು 300 ಜಪಾನೀಸ್ ಯೆನ್ ಅಂದರೆ 169 ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ರೆಸ್ಟೊರೆಂಟ್ ಪ್ರವೇಶಿಸಿದ ಕೂಡಲೇ ಕಪಾಳಮೋಕ್ಷ ಮಾಡುತ್ತಿರುವುದು ಕೂಡ ವಿಡಿಯೋದಲ್ಲಿ ಕಂಡು ಬರುತ್ತಿದೆ. ಕಪಾಳಮೋಕ್ಷ ಎಷ್ಟು ಪ್ರಬಲವಾಗಿದೆ ಎಂದರೆ ಜನರಿಗೆ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಈ ರೆಸ್ಟೋರೆಂಟ್ ಅನ್ನು 2012 ರಲ್ಲಿ ತೆರೆಯಲಾಗಿದೆ. ಆದರೆ ನಂತರ ಕಾಲಕ್ರಮೇಣ ಅದು ಸ್ವಲ್ಪ ಸಮಯದ ನಂತರ ಅದು ಮುಚ್ಚುವ ಹಂತದಲ್ಲಿತ್ತು ಎನ್ನಲಾಗುತ್ತದೆ. ಆದರೆ ನಂತರ ಗ್ರಾಹಕರನ್ನು ಸ್ವಾಗತಿಸಲು ಅವರ ಕಪಾಳಮೋಕ್ಷ ಮಾಡುವ ಸಂಪ್ರದಾಯ ಅಲ್ಲಿ ಪ್ರಾರಂಭವಾಯಿತು ಎನ್ನಲಾಗುತ್ತದೆ. ಇದಾದ ನಂತರ ಭಾರೀ ಸಂಖ್ಯೆಯಲ್ಲಿ ಜನರು ಇಲ್ಲಿ ಸೇರಲು ಆರಂಭಿಸಿದರು. ಇದೀಗ ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಅನೇಕ ಜನರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ. 


ಇದನ್ನೂ ಓದಿ-ಸ್ಕೈ ಡೈವಿಂಗ್ ಅಲ್ಲ, ಐಸ್ ಡೈವಿಂಗ್ ನ ಈ ವಿಡಿಯೋ ಭಾರಿ ಚಳಿಯಲ್ಲಿಯೂ ಬೆವರಿಳಿಸುವಂತಿದೆ!


ವೈರಲ್ ಆಗಿರುವ ವಿಡಿಯೋಗೆ ಜನರ ಪ್ರತಿಕ್ರಿಯೆ ಹೇಗಿದೆ?
ವೈರಲ್ ಆಗುತ್ತಿರುವ ಈ ವೀಡಿಯೋಗೆ ಜನರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಒಬ್ಬ ಬಳಕೆದಾರ, 'ಜನರು ಏಕೆ ಹೆಚ್ಚು ಕಪಾಳಮೋಕ್ಷ ಮಾಡುತ್ತಿದ್ದಾರೆ?' ಎಂದರೆ ಮತ್ತೊಬ್ಬ ಬಳಕೆದಾರ, 'ನಾನು ಇದಕ್ಕೆ ಹಣ ಕೊಡಬೇಕಾದರೆ, ನಾನು ಎಂದಿಗೂ ಅಲ್ಲಿಗೆ ಹೋಗುವುದಿಲ್ಲ' ಎಂದಿದ್ದಾನೆ. ಅದೇ ಸಮಯದಲ್ಲಿ, ಮೂರನೇ ಬಳಕೆದಾರ, 'ಇದು ನಾಚಿಕೆಗೇಡಿನ ಸಂಗತಿಯಾಗಿದೆ' ಎಂದು ಬರೆದಿದ್ದಾರೆ.


ಇದನ್ನೂ ಓದಿ-'ಶೀಲಾ ಕಿ ಜವಾನಿ...' ಹಾಡಿಗೆ ಟ್ರೈನ್ ನಲ್ಲಿ ಹುಚ್ಚೆದ್ದು ಕುಣಿದ ಲಲನೆಯರು, ರೊಚ್ಚಿಗೆದ್ದ ಜನ ಹೇಳಿದ್ದೇನು ನೀವೇ ನೋಡಿ!


ವೈರಲ್ ವಿಡಿಯೋ ಇಲ್ಲಿದೆ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ