ಸ್ಕೈ ಡೈವಿಂಗ್ ಅಲ್ಲ, ಐಸ್ ಡೈವಿಂಗ್ ನ ಈ ವಿಡಿಯೋ ಭಾರಿ ಚಳಿಯಲ್ಲಿಯೂ ಬೆವರಿಳಿಸುವಂತಿದೆ!

Viral Video: ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಲು ಜನರು ಎಂಥೆಲ್ಲಾ ವಿಚಿತ್ರ ಕೆಲಸಗಳನ್ನು ಮಾಡುತ್ತಾರೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿಯಾಗಿದೆ, ಆದರೆ ಈ ವ್ಯಕ್ತಿಯು ಧೈರ್ಯದ ಎಲ್ಲಾ ಮಿತಿಗಳನ್ನು ದಾಟಿ ಮಂಜುಗಡ್ಡೆಯ ನೀರಿಗೆ ಧುಮುಕಿದ್ದಾನೆ (Viral News In Kannada).

Written by - Nitin Tabib | Last Updated : Dec 4, 2023, 06:51 PM IST
  • ಈ ವ್ಯಕ್ತಿಯು ಹಿಮಾಚ್ಛಾದಿತ ಬೆಟ್ಟಗಳಿಂದ ಮಂಜುಗಡ್ಡೆಯ ನೀರಿಗೆ ಜಿಗಿದ ವೀಡಿಯೊ ಟ್ವಿಟರ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ
  • ಮತ್ತು ಈ ವೀಡಿಯೊ 45 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಪಡೆದುಕೊಂಡಿವೆ.
  • ಈ ಬಗ್ಗೆ ನೆಟಿಜನ್‌ಗಳು ಕೂಡ ಸಾಕಷ್ಟು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಸ್ಕೈ ಡೈವಿಂಗ್ ಅಲ್ಲ, ಐಸ್ ಡೈವಿಂಗ್ ನ ಈ ವಿಡಿಯೋ ಭಾರಿ ಚಳಿಯಲ್ಲಿಯೂ ಬೆವರಿಳಿಸುವಂತಿದೆ! title=

ಬೆಂಗಳೂರು: ಚಳಿಗಾಲದಲ್ಲಿ ನೀರು ಅಥವಾ ಐಸ್ ಹೆಸರು ಕೇಳಿದರೆ ಸಾಕು ಮೈಯಲ್ಲಿ ನಡುಕ ಹುಟ್ಟುತ್ತದೆ.  ಜನರು ನೀರನ್ನು ತಪ್ಪಿಸಲು ಸಾಕಷ್ಟು ಪ್ರಯತ್ನಿಸುತ್ತಾರೆ, ಆದರೆ ಈ ಚಳಿಯಲ್ಲೂ ಹಿಮಭರಿತ ಬೆಟ್ಟಗಳ ನಡುವೆ ಮಂಜುಗಡ್ಡೆಯ ನೀರಿನಲ್ಲಿ ಡೈವ್ ಮಾಡುವ ವ್ಯಕ್ತಿಯೊಬ್ಬರು ಇದ್ದಾರೆ ಎಂದರೆ, ಹೌದು, ನಿಮಗೆ ನಂಬಿಕೆ ಇಲ್ಲದಿದ್ದರೆ ಈ ವೀಡಿಯೋ ನೋಡಿ ಮತ್ತು ಈ ವಿಡಿಯೋ ನೋಡಿದ ನಂತರ ನಿಮಗೂ ಕೂಡ ಈತ  ನಿಜವಾಗ್ಲೂ ಮನುಷ್ಯನೋ ಅಥವಾ ಪ್ರಾಣಿಯೋ ಎಂಬ ಪ್ರಶ್ನೆ ಮೂಡುತ್ತದೆ, ಏಕೆಂದರೆ ಅಂತಹ ಚಳಿಯಲ್ಲಿ ಕೇವಲ ಅಂಡರ್ವೆಯರ್ ಧರಿಸಿ ಈ ಎಪ್ಪಾ ಮೇಲಿನಿಂದ ಐಸ್ ವಾಟರ್ ಕೂಪಕ್ಕೆ ಧುಮುಕುತ್ತಾನೆ.

ಇದನ್ನೂ ಓದಿ-'ಶೀಲಾ ಕಿ ಜವಾನಿ...' ಹಾಡಿಗೆ ಟ್ರೈನ್ ನಲ್ಲಿ ಹುಚ್ಚೆದ್ದು ಕುಣಿದ ಲಲನೆಯರು, ರೊಚ್ಚಿಗೆದ್ದ ಜನ ಹೇಳಿದ್ದೇನು ನೀವೇ ನೋಡಿ!
 
ಹಿಮಾಚ್ಛಾದಿತ ಪರ್ವದದಿಂದ ತಣ್ಣನೆಯ ನೀರಿನ ಕೂಪಕ್ಕೆ ಡುಮುಕಿದ ವ್ಯಕ್ತಿ
@Enezator ಹೆಸರಿನ ಹ್ಯಾಂಡಲ್‌ ಮೂಲಕ ಈ  ಆಘಾತಕಾರಿ ವೀಡಿಯೊವನ್ನು X ವೇದಿಕೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಪ್ಪು ಬಣ್ಣದ ಒಳಉಡುಪುಗಳನ್ನು ಮಾತ್ರ ಧರಿಸಿದ್ದು, ಅದರ ಹೊರತಾಗಿ ಆತನ ಮೈಮೇಲೆ ಯಾವುದೇ ಬಟ್ಟೆ ಇಲ್ಲ. ಅಷ್ಟೇ ಅಲ್ಲ, ಈ ವ್ಯಕ್ತಿಯ ಕೈಯಲ್ಲಿ ಎರಡು ದೊಡ್ಡ ಕೊಡಲಿಗಳಿವೆ. ವೀಡಿಯೊದಲ್ಲಿ, ಈ ವ್ಯಕ್ತಿಯು ತುಂಬಾ ಆಕ್ರಮಣಕಾರಿಯಾಗಿ ಕಾಣುತ್ತಾನೆ ಮತ್ತು ಜೋರಾಗಿ ಗರ್ಜಿಸುತ್ತಾನೆ.  ನಂತರ ಈ ವ್ಯಕ್ತಿಯು ಹಿಮಭರಿತ ಪರ್ವತದ ಕೆಳಗಿರುವ ನೀರಿಗೆ ಹೆಚ್ಚಿನ ಎತ್ತರದಿಂದ ಧುಮುಕುತ್ತಾನೆ.

ಇದನ್ನೂ ಓದಿ-ಭೋಜ್ಪುರಿ ಹಾಡಿಗೆ ಆಂಟಿ ಮೈಬಳುಕಿಸಿದ ರೀತಿ ನೋಡಿದ್ರೆ ರಾತ್ರಿ ನಿದ್ದೆಗೆ ಬೆಂಕಿ ಬೀಳೋದು ಗ್ಯಾರಂಟಿ!

ಇದು ರಿಯಾಲಿಟಿ ಅಥವಾ ವಿಎಫ್ಎಕ್ಸ್ ಎಫೆಕ್ಟ್? ಎಂದು ಪ್ರಶ್ನಿಸಿದ ಬಳಕೆದಾರರು
ಈ ವ್ಯಕ್ತಿಯು ಹಿಮಾಚ್ಛಾದಿತ ಬೆಟ್ಟಗಳಿಂದ ಮಂಜುಗಡ್ಡೆಯ ನೀರಿಗೆ ಜಿಗಿದ ವೀಡಿಯೊ ಟ್ವಿಟರ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ ಮತ್ತು ಈ ವೀಡಿಯೊ 45 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಪಡೆದುಕೊಂಡಿವೆ. ಈ ಬಗ್ಗೆ ನೆಟಿಜನ್‌ಗಳು ಕೂಡ ಸಾಕಷ್ಟು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ವ್ಯಕ್ತಿಯ ಅದ್ಭುತ ಸಾಧನೆಯನ್ನು ಕೆಲವರು ಹೊಗಳುತ್ತಿದ್ದರೆ, ಒಬ್ಬ ಬಳಕೆದಾರ ಆಶ್ಚರ್ಯಚಕಿತಗೊಂಡು, ಈತ ವಾಸ್ತವದಲ್ಲಿ ಮನುಷ್ಯನಾ? ಎಂದು ಪ್ರಶ್ನಿಸಿದ್ದಾನೆ.  ಆದರೆ ಇದು ತುಂಬಾ ಅಪಾಯಕಾರಿ ಕೆಲಸ ಎಂದು ಇನ್ನೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ. ಅವರ ಜಂಪ್ ಅದ್ಭುತವಾಗಿದೆ ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ, ಅದೇ ರೀತಿ ಅನೇಕ ಬಳಕೆದಾರರು ಈ ವ್ಯಕ್ತಿಯ ಧೈರ್ಯವನ್ನು ಹೊಗಳುತ್ತಿದ್ದಾರೆ, ಆದರೆ ಅನೇಕರು ಚಳಿಯಲ್ಲಿ ಈ ರೀತಿ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ-

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News