ಬೆಂಗಳೂರು: ಇತ್ತೀಚಿನ ದಿನಗಳಲ್ಲಿ, ವಧು ಮತ್ತು ವರರು ವಿವಾಹ ಸಮಾರಂಭಗಳಲ್ಲಿ ಅವಿಸ್ಮರಣೀಯ ಫೋಟೋಗಳನ್ನು ತೆಗೆದುಕೊಳ್ಳಲು ಅನೇಕ ಸಾಹಸಗಳನ್ನು ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ದಂಪತಿ ಜೋಡಿಗಳು ಜನರನ್ನು ಮೆಚ್ಚಿಸಲು ಏನಾದರೂ ಹೊಸದನ್ನು ಟ್ರೈ ಮಾಡಲು ಯತ್ನಿಸುತ್ತಾರೆ. ಆದರೆ, ಕೆಲವೊಮ್ಮೆ ಇಂತಹ ಸಂದರ್ಭಗಳು ವಧು-ವರ ಇಬ್ಬರಿಗೂ ಕೂಡ ದುಬಾರಿಯಾಗಿ ಪರಿಣಮಿಸುತ್ತವೆ. ಪ್ರಸ್ತುತ ಇದಕ್ಕೆ ಉದಾಹರಣೆ ಎಂಬಂತೆ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಸ್ಟಂಟ್ ಯಾವಾಗಲೂ ಸುರಕ್ಷಿತವಾಗಿಲ್ಲ ಎಂಬುದನ್ನು ನೀವು ನೋಡಬಹುದು. ವರದಿಗಳ ಪ್ರಕಾರ ಇದು ಮಹಾರಾಷ್ಟ್ರದಲ್ಲಿ ನಡೆದ ಮದುವೆ ಸಮಾರಂಭದ ಹಳೆಯ ವಿಡಿಯೋ ಆಗಿದೆ. ವೀಡಿಯೊದಲ್ಲಿ, ವಧು-ವರರು ಬೆಂಕಿ ಉಗುಳುವ ಗನ್ ಗಳನ್ನು ಕೈಯಲ್ಲಿ ಕ್ಯಾಮರಾ ಕಣ್ಣಿಗೆ ಪೋಸ್ ನೀಡುತ್ತಿರುವುದನ್ನು ನೀವು ನೋಡಬಹುದು. ವಧು-ವರರು ಅಕ್ಕಪಕ್ಕದಲ್ಲಿ ನಿಂತು ಪೋಸ್ ಕೊಡುತ್ತಿರುವುದು ಕಂಡು ಬಂದ ನಂತರ ಕ್ಯಾಮರಾಮನ್ ಮುಂದೆ ಗುಂಡುಗಳಿರುವ ಗನ್ ತೋರಿಸಿದ್ದಾರೆ. ಇದಾದ ಬಳಿಕ ವಧು ಫೈರ್ ಮಾಡಲು ಯತ್ನಿಸುತ್ತಾಳೆ. ಆಗ ಹಠಾತ್ ಆಗಿ ಆಕೆಯ ಫೈರ್ ಗನ್ ನಿಂದ ಹಿಂಬದಿಗೆ ಬಂದ ಬೆಂಕಿ ಆಕೆಯ ಮುಖ ಪೂರ್ತಿ ಸುಟ್ಟು ಕರಕಲಾಗಿಸಿದೆ. (Viral News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಪಾಕಿಸ್ತಾನದಲ್ಲೊಂದು ವಿಚಿತ್ರ ಕ್ರಿಕೆಟ್ ಪಂದ್ಯ, ಪರಸ್ಪರ ಹೊಡೆದಾಡಿಕೊಂಡ ಬ್ಯಾರ್ಟ್ಸ್ಮನ್ ಗಳು... ವಿಡಿಯೋ ನೋಡಿ!


ವಿವಾಹದಲ್ಲಿ ವಧುವಿನ ಮುಖ ಸುಟ್ಟುಹೋಗಿದೆ
ಎಲ್ಲಿಯವರೆಗೆ ದಂಪತಿಗಳು ತಮ್ಮ ಬಂದೂಕುಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದಾರೋ, ಅಲ್ಲಿಯವರೆಗೆ ಎಲ್ಲವೂ ಸರಿಯಾಗಿ ವರ್ಕೌಟ್ ಆಗಿದೆ. ಆದರೆ, ವಧು ಗನ್‌ನ ಗುಂಡಿ ಒತ್ತಿದ ತಕ್ಷಣ ಆಕೆಯ ಮುಖ ಸುಟ್ಟು ಕರಕಲಾಗಿದೆ. ವಧುವಿನ ಗನ್ ಹಿಂಬದಿಗೆ ಸಿಡಿದ ಕಾರಣ ಈ ಘಟನೆ ಸಂಭವಿಸಿದೆ. ಏನಾಯಿತು ಎಂದು ಭಯಭೀತಲಾಗಿ ಗನ್ ಕೆಳಕ್ಕೆ ಎಸೆಯುತ್ತಾಳೆ. ಬಳಿಕ ವಧುವನ್ನು ರಕ್ಷಿಸಲು ಜನರು ವಧುವಿನ ಕಡೆಯವರು ಓಡೋಡಿ ಬರುತ್ತಿದ್ದಂತೆ ವಿಡಿಯೋ ಮುಗಿದುಹೋಗಿದೆ. ಈ ವೀಡಿಯೊವನ್ನು 'ಹನ್ಸ್ನಾ ಜರೂರಿ ಹೈ' ಹೆಸರಿನ ಖಾತೆಯ ಮೂಲಕ ಸಾಮಾಜಿಕ ವೇದಿಕೆ X ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಈ ವೀಡಿಯೊ ಇದುವರೆಗೆ 37 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದೆ. 


ಇದನ್ನೂ ಓದಿ-Viral Video: ಹಸುವನ್ನು ಮುಂದೆ ಕೂರಿಸಿಕೊಂಡು ಹೋಗುತ್ತಿರುವ ಈ ಭೂಪನ ಪರಿ ನೋಡಿ ತಲೆ ಗಿರ್ರ್ ಅನ್ನುತ್ತೆ!

ವೀಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ
ಈ ವಿಡಿಯೋಗೆ ಹಲವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋಗೆ ಕಾಮೆಂಟ್ ಮಾಡಿದ ಓರ್ವ ಬಳಕೆದಾರ, "ವಧುವಿಗೆ ಇದೆಲ್ಲಾ ಯಾಕೆ ಬೇಕಿತ್ತು, ಹೇಗೋ ವಿವಾಹದ ಬಳಿಕ ಅದು ವರನ ಮೇಲೆ ಅದರ ಪ್ರಯೋಗ ನಡೆದೇ ಹೋಗುತ್ತಿತ್ತು" ಎಂದಿದ್ದರೆ,  ‘ಗನ್ ಕಂಪನಿ ವಿರುದ್ಧ ಪರಿಹಾರಕ್ಕಾಗಿ ಮೊಕದ್ದಮೆ ಹೂಡಬೇಕು’ ಎಂದು ಮತ್ತೊಬ್ಬರು ಹೇಳಿದ್ದಾರೆ. ಮೂರನೇ ಬಳಕೆದಾರ " ಮದುವೆಯೇ ಒಂದು ಸ್ಟಂಟ್ ಆಗಿರುತ್ತದೆ, ಅಂತಹ ಸಂಧರ್ಭದಲ್ಲಿ ಇಂತಹ ಸ್ಟಂಟ್ ಅಗತ್ಯವೆನಿತ್ತು? ಎಂದು ಪ್ರಶ್ನಿಸಿದ್ದಾರೆ. ಆದರೆ ಮತ್ತೊರ್ವ ಪ್ರಜ್ಞಾವಂತ ಬಳಕೆದಾರ, "ಸರಿಯಾದ ಜ್ಞಾನವಿಲ್ಲದೆ ಇತರರ ತೃಪ್ತಿಗಾಗಿ ಇಂತಹ ಕೆಲಸ ಮಾಡಬೇಡಿ" ಎಂದು ಬರೆದಿದ್ದಾರೆ. ಅಂದ ಹಾಗೆ ಈ ವಿಡಿಯೋಗೇ ನಿಮ್ಮ ಪ್ರತಿಕ್ರಿಯೆ ನೀಡಲು ಮರೆಯಬೇಡಿ 

ವಿಡಿಯೋ ನೋಡಿ: 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ