Trending video:ಮಕ್ಕಳ ಮನಸ್ಸು ನಿಷ್ಕಲ್ಮಶವಾಗಿರುತ್ತದೆ ಎಂದು ಹೇಳಲಾಗುತ್ತದೆ. ಎಷ್ಟೋ ಬಾರಿ ಅಜ್ಞಾನದಿಂದ ಮಕ್ಕಳು ಹೇಳುವ ಮಾತುಗಳು ಕೇಳಿ ಹೊಟ್ಟೆ ಹಿಡಿದು ನಗುವ ಅನುಭವ ಉಂಟಾಗುತ್ತದೆ. ಸಾಮಾಜಿಕ ಮಾಧ್ಯಮವು ಅಂತಹ ಅನೇಕ ಮಕ್ಕಳ ವಿಡಿಯೋಗಳು ದಿನನಿತ್ಯ ಪ್ರಕಟಗೊಳ್ಳುತ್ತವೆ, ಅವುಗಳನ್ನು ನೋಡುತ್ತಾ ಕುಳಿತರೆ, ಇಡೀ ದಿನ ಹೇಗೆ ಕಳೆಯಿತು ಎಂಬುದೇ ಗೊತ್ತಾಗುವುದಿಲ್ಲ. ಅಂತಹುದೇ ವಿಡಿಯೋವೊಂದು  ಸಾಮಾಜಿಕ ಜಾಲತಾಣದಲ್ಲಿ (Social Media) ಭಾರಿ ವೈರಲ್ ಆಗುತ್ತಿದ್ದು, ಅದರಲ್ಲಿ ಚಿಕ್ಕ ಮಗು ತಾನು ಏನಾಗಲು ಬಯಸುತ್ತೇನೆ ಎಂಬುದನ್ನು ಹೇಳಿಕೊಂಡಿದೆ. ವಿಡಿಯೋದಲ್ಲಿ ಮಗು ದೊಡ್ಡವನಾದಾಗ ಪಾನಿಪುರಿ ಮಾರುವವನಾಗುತ್ತೇನೆ ಎಂದು ಹೇಳುತ್ತಿದೆ. ಆದರೆ, ಮಗು ಅದಕ್ಕೆ ನೀಡಿದ ಕಾರಣ ಗೊತ್ತಾದರೆ, ನೀವೂ ಕೂಡ ಒಂದು ಕ್ಷಣ ಹೊಟ್ಟೆ ಹಿಡಿದುಕೊಂಡು ನಗುವಿರಿ.  ಬನ್ನಿ ವಿಷಯ ಏನು ತಿಳಿದುಕೊಳ್ಳೋಣ (Trending News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-Kaju Katli Bhajji: ಬೇಸನ್ ಹಿಟ್ಟಲ್ಲಿ ಕಾಜು ಕತ್ಲಿ ಅದ್ದಿ ಭಜ್ಜಿ ತಯಾರಿಸಿದ ಆಂಟಿ.... ತಲೆ ಕೆಟ್ಟು ನೆಟ್ಟಿಗರು ಹೇಳಿದ್ದೇನು ಗೊತ್ತಾ?


ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ಚಿಕ್ಕ ಮಗುವಿನ ಸಂದರ್ಶನ ತೆಗೆದುಕೊಳ್ಳುತ್ತಿರುವುದನ್ನು (Boy Want To Become Panipuriwala Video) ನೀವು ನೋಡಬಹುದು. ಸಂದರ್ಶನ ನಡೆಸುತ್ತಿರುವ ವ್ಯಕ್ತಿ ಮಗು ದೊಡ್ಡವನಾಗಿ ಏನಾಗಬೇಕು ಎಂದು ಪ್ರಶ್ನಿಸುತ್ತಾನೆ, ಅದಕ್ಕೂ ತುಂಟ ಮಗು ಪಾನಿಪುರಿ ಮಾರಲು ಬಯಸುತ್ತೇನೆ ಎಂದು ಉತ್ತರಿಸುತ್ತದೆ. ಅಲ್ಲಿಗೆ ನಿಲ್ಲದ ವ್ಯಕ್ತಿ ಪಾನಿಪುರಿಯೇ ಏಕೆ ಮಾರಾಟ ಮಾಡಬೇಕು ಎಂದು ಕೇಳುತ್ತದೆ, ಹೆಣ್ಣು ಮಕ್ಕಳಿಗೆ ಪಾನಿಪುರಿ ಎಂದರೆ ತುಂಬಾ ಇಷ್ಟ ಎಂದು ಹೇಳುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. 


ಇದನ್ನೂ ಓದಿ-Viral Video: 'ನನಗೆ ಮದುವೆ ಮಾಡಿಸು'...' ತಂದೆ ಬೇಡ ಅಂದರೂ ಹಟಕ್ಕೆ ಬಿದ್ದ ಕ್ಯೂಟ್ ಪುಟಾಣಿ


ಇಲ್ಲಿವೆ ಜನರ ಕಾಮೆಂಟ್ 
Memer Royal 🇸🇦 ಹೆಸರಿನ Instagram ಖಾತೆಯ ಮೂಲಕ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೆ 66 ಮಿಲಿಯನ್‌ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. 3.5 ಮಿಲಿಯನ್ ಗೂ ಹೆಚ್ಚು ಜನ ಇದನ್ನು ಲೈಕ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಜನರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, 'ಅಣ್ಣನ ಟಾರ್ಗೆಟ್ ಸೆಟ್ ಆಗಿದೆ' ಎಂದಿದ್ದರೆ, . ಮತ್ತೊಬ್ಬ ಬಳಕೆದಾರರು, 'ಹುಡ್ಗೀರು ಬರ್ತಾರೆ ಆದರೆ ಭಯ್ಯಾ ಅಂತಾನೂ ಕರಿತಾರೆ ಎಂದಿದ್ದಾರೆ. ಮೂರನೇ ಬಳಕೆದಾರರು,  ಇದೆ ನೋಡಿ ನಮ್ಮ ದೇಶದ ಭವಿಷ್ಯ ಎಂದಿದ್ದಾರೆ. 


ವೈರಲ್ ವಿಡಿಯೋ ಇಲ್ಲಿದೆ ನೋಡಿ



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ