Trending Video: 10 ಅಡಿ ಉದ್ದದ ಕಾಳಿಂಗ ಸರ್ಪ ಹಿಡಿಯಲು ಮುಂದಾದ ವ್ಯಕ್ತಿ, ತಿರುಗಿ ದಾಳಿ ಇಟ್ಟ ಹಾವು ...ವಿಡಿಯೋ ನೋಡಿ
Cobra Attack: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿ ಕೆಲ ಕ್ಷಣ ನಮ್ಮ ಉಸಿರಾಟವೆ ನಿಂತುಹೋಗುತ್ತದೆ. ಈ ವಿಡಿಯೋದಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಿರುವುದನ್ನು ನೀವು ಗಮನಿಸಬಹುದು
Trending Video: ಇಂಟರ್ನೆಟ್ ನಲ್ಲಿ ಕೆಲವೊಮ್ಮೆ ತುಂಬಾ ಅಪಾಯಕಾರಿ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಇಂತಹುದೇ ಒಂದು ವಿಡಿಯೋ ನೋಡಿ ನೀವು ಕೂಡ ಸ್ವಲ್ಪ ಕ್ಷಣ ಸ್ಥಬ್ಧರಾಗುವಿರಿ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿಯಲು ಯತ್ನಿಸುತ್ತಿದ್ದಾನೆ. ಇಂತಹ ಹಾವುಗಳ ವಿಡಿಯೋಗಳನ್ನು ಹಲವರು ಮೆಚ್ಚಿಕೊಳ್ಳುತ್ತಾರೆ. ನೀವೂ ಕೂಡ ಅವರಲ್ಲಿ ಒಬ್ಬರಾಗಿದ್ದಾರೆ ಈ ವಿಡಿಯೋ ನಿಮಗೂ ಕೂಡ ಮೆಚ್ಚುಗೆಯಾಗಲಿದೆ. ಈ ವಿಡಿಯೋದಲ್ಲಿ ತನಗೆ ಕಾಟ ಕೊಡುತ್ತಿರುವ ವ್ಯಕ್ತಿಗೆ ಹಾವು ತಕ್ಕ ಪಾಠವನ್ನೇ ಕಲಿಸಿದೆ.
ಕಾಳಿಂಗ ಸರ್ಪದ ಕೋಪ ನೆತ್ತಿಗೇರಿದೆ
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಿಷಕಾರಿ ಕಾಳಿಂಗ ಸರ್ಪದ ಜೊತೆಗೆ ಚೆಲ್ಲಾಟವಾಡಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು. ಅದನ್ನು ಕೈಯಲ್ಲಿ ಹಿಡಿಯಲು ಅದರ ಬಾಲವನ್ನು ಎತ್ತಿ ಹಿಡಿಯುತ್ತಾನೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಾವಿನ ಪಿತ್ತ ನೆತ್ತಿಗೇರುತ್ತದೆ ಮತ್ತು ಅದು ಆ ವ್ಯಕ್ತಿಯ ಮೇಲೆ ತಿರುಗೆ ದಾಳಿ ಇಡುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಮೊದಲು ನೀವು ವೀಕ್ಷಿಸಿ .
ಇದನ್ನೂ ಓದಿ-Viral Video: ಕೋವಿಡ್ ಕ್ವಾರಂಟೈನ್ʼಗೆ ಹೆದರಿ ಐಕಿಯಾ ಮಳಿಗೆಯಿಂದ ದಿಕ್ಕಾಪಾಲಾಗಿ ಓಡಿದ ಜನ!
ವ್ಯಕ್ತಿಯ ಬೆವರಿಳಿಸಿದ ಹಾವುಗಳ ರಾಜ
ಆದರೆ, ವ್ಯಕ್ತಿಯ ಅದೃಷ್ಟ ಸರಿಯಾಗಿತ್ತೋ ಏನೋ ಕೂದಲೆಳೆ ಅಂತರದಿಂದ ಆತ ಹಾವಿನ ಈ ದಾಳಿಯನ್ನು ತಪ್ಪಿಸಿಕೊಂಡಿದ್ದಾನೆ. ಆದರೆ, ತನ್ನ ದಾಳಿಯಿಂದ ಹಾವು ವ್ಯಕ್ತಿಯ ಬೆವರಿಳಿಸಿರುವುದು ಮಾತ್ರ ನಿಜ. ನಂತರ a ವ್ಯಕ್ತಿ ಹಾವನ್ನು ಈ ರೀತಿ ಹಿಡಿಯುವ ಮುನ್ನ ನೂರು ಬಾರಿ ಯೋಚಿಸಲಿದ್ದಾನೆ. ಸಾಮಾನ್ಯವಾಗಿ ನಾವು ಹಿಂದೆ ಮುಂದೆ ಯೋಚಿಸದೆಯೇ ಅಥವಾ ಪ್ರಾಣಿಗಳ ಮೂಡ್ ಕುರಿತು ಯೋಚಿಸದೆಯೇ ಅವುಗಳನ್ನು ಛೇಡಿಸಲು ಪ್ರಾರಂಭಿಸುತ್ತೇವೆ. ಆದರೆ, ಬಳಿಕ ನಮಗೆ ಅದರ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತದೆ.
ಇದನ್ನೂ ಓದಿ-Viral News: ಪತಿಗೆ ವಿವಾಹ ವಿಚ್ಛೇದನೆ ನೀಡಿ ಪುತ್ರನನ್ನು ವರಿಸಿದ ಪತ್ನಿ! ಸಂಪೂರ್ಣ ಮ್ಯಾಟರ್ ಇಲ್ಲಿದೆ
ವೈರಲ್ ಆದ ವಿಡಿಯೋ
ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಇನ್ಸ್ಟಾಗ್ರಾಮ್ ಮೂಲಕ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಲಕ್ಷಾಂತರ ಜನರು ಈ ವಿಡಿಯೋಗೆ ತಮ್ಮ ಲೈಕ್ ಕೂಡ ನೀಡಿದ್ದಾರೆ. ಇನ್ನುಳಿದಂತೆ ಕಾಮೆಂಟ್ ಸೆಕ್ಷನ್ ನಲ್ಲಿ ಜನರು ಭಿನ್ನ-ಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ಕೂಡ ನೀಡುತ್ತಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.