Viral News In Kannada: ಇಂಟರ್ನೆಟ್ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರ - ವಿಚಿತ್ರ ಕಥೆಗಳು ವೈರಲ್ ಆಗುತ್ತಲೇ ಇರುತ್ತವೆ. ಅಂತಹುದೇ ವಿಚಿತ್ರ ಸುದ್ದಿಯೊಂದು ಇದೀಗ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡತೊಡಗಿದೆ, ಈ ಸುದ್ದಿಯನ್ನೋದಿ ನೀವೂ ಕೂಡ ಒಂದು ಕ್ಷಣ ಬೆಚ್ಚಿಬೀಳುವಿರಿ ಮತ್ತು ಇದೆಂಥ? ಸಂಬಂಧ ಎಂದು ಖಂಡಿತ ಪ್ರಶ್ನಿಸುವಿರಿ. ನಡೆದ ಘಟನೆ ಕೇಳಿದರೆ ನೀವೂ ಕೂಡ ನಿಬ್ಬೆರಗಾಗುವಿರಿ. ಹಾಗಂತ ಈ ಸುದ್ದಿ ಸುಳ್ ಸುದ್ದಿ ಅಲ್ಲ, 100% ನಿಜ ಸುದ್ದಿ. ಈ ಸುದ್ದಿಯಲ್ಲಿ ರಷ್ಯಾದ ಮಹಿಳೆಯೊಬ್ಬಳು ತನ್ನ ಪತಿಗೆ ವಿಚ್ಛೇದನ ನೀಡಿ ಮಗನನ್ನೇ ಮದುವೆಯಾಗಿದ್ದಾಳೆ. ಆದರೆ, ಇಲ್ಲಿ ವಿಚಿತ್ರ ಸಂಗತಿ ಎಂದರೆ ಆ ಮಗ ಆಕೆಗೆ ಮಲಮಗನಾಗಬೇಕು. ಅವನು 7 ವರ್ಷದವನಾಗಿದ್ದಾಗ, ಮಹಿಳೆ ಆತನ ತಂದೆಯೊಂದಿಗೆ ವಿವಾಹವಾಗಿದ್ದಳು.
ಇದನ್ನೂ ಓದಿ-ಈ ಮಹಾರಾಜ ಮೆಟ್ರೋದಲ್ಲಿ ಪ್ರಯಾಣಿಸಿದ್ರೂ ಯಾರಿಗೂ ಗೊತ್ತೇ ಆಗಿಲ್ಲ!
ರಷ್ಯಾದ ನಿವಾಸಿ ಮರೀನಾ ಬಾಲ್ಮಾಶೆವಾ ತನ್ನ 20 ವರ್ಷದ ಮಲಮಗ ವ್ಲಾಡಿಮಿರ್ ಜೊತೆಗೆ ವಿವಾಹವಾಗಿದ್ದಾಳೆ. ಇದಕ್ಕೂ ಮೊದಲು ಆಕೆ ವ್ಲಾಡಿಮಿರ್ ಅವರ ತಂದೆ ಅಲೆಕ್ಸಿ ಶಾವಿರಿನ್ ಅವರೊಂದಿಗೆ ವಿವಾಹವಾಗಿದ್ದಳು. ಮರೀನಾ ತನ್ನ ಮಲಮಗ ವ್ಲಾಡಿಮಿರ್ ಅನ್ನು ವರಿಸಿದ್ದಾಳೆ, 2020 ರಲ್ಲಿ ಪ್ರೇಮಿಯಾದ ಉಭಾಯರಿಗೆ ಒಂದು ಮಗುವಿದ್ದು, ಮುಂದಿನ ತಿಂಗಳು ಇನ್ನೊಂದು ಮಗುವಿಗೆ ದಂಪತಿ ಜನ್ಮ ನೀಡಲಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 6.19 ಲಕ್ಷ ಹಿಂಬಾಲಕರನ್ನು ಹೊಂದಿರುವ ಮರೀನಾ ಬಲ್ಮಾಶೆವಾ ತುಂಬಾ ಜನಪ್ರೀಯಳಾಗಿದ್ದಾಳೆ. ವ್ಲಾಡಿಮಿರ್ ಅವರೊಂದಿಗಿನ ತನ್ನ ಎರಡನೇ ಮಗುವಿನ ಬಗ್ಗೆ ಬಾಲ್ಮಾಶೆವಾ ಆನ್‌ಲೈನ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ವ್ಲಾಡಿಮಿರ್ ಅನ್ನು ತೋರಿಸಲಾಗಿದೆ, ಅದರಲ್ಲಿ ಅವರು ತಂದೆಯಾಗಲಿದ್ದಾರೆ ಎಂದು ಇದ್ದಕ್ಕಿದ್ದಂತೆ ತಿಳಿಸಲಾಗಿದೆ.
ಇದನ್ನೂ ಓದಿ-ಭಾರತವನ್ನು ಹಾಡಿ ಹೊಗಳಿದ ಪಾಕ್ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್
ಇನ್ನೊಂದೆಡೆ ತಾಯಿ ಮತ್ತು ಮಗನ ಈ ಪತಿ-ಪತ್ನಿ ಸಂಬಂಧದ ಕುರಿತು ಮಾತನಾಡಿರುವ ಬಲ್ಮಾಶೇವಾ ಮಾಜಿ ಪತಿ ಅಲೆಕ್ಸಿ, ಬಲ್ಮಾಶೇವಾ ತಮ್ಮ ಮಗನನ್ನು ಮರಳು ಮಾಡಿ ತನ್ನ ಬಲೆಗೆ ಹಾಕಿಕೊಂಡಿದ್ದಾಳೆ. ಇದಕ್ಕೂ ಮುನ್ನ ತಮ್ಮ ಪುತ್ರನಿಗೆ ಯಾವುದೇ ಗರ್ಲ್ ಫ್ರೆಂಡ್ ಇರಲಿಲ್ಲ ಹಾಗೂ ಮನೆಯಲ್ಲಿ ತನ್ನ ಅನುಪಸ್ಥಿತಿಯ ಲಾಭ ಪಡೆದು ಮಗನೊಂದಿಗೆ ಗಾಢವಾದ ಸಂಬಂಧ ಬೆಳೆಸಿದ್ದಾಳೆ ಎಂದು ಆರೋಪಿಸಿದ್ದಾನೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.