Tsunami Viral Photo: ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಹಿಳೆಯೊಬ್ಬರು ಆಕಾಶದಲ್ಲಿ ಈ ಮನಮೋಹಕ ದೃಶ್ಯವನ್ನು ಕಂಡಿದ್ದಾರೆ. ಈ ದೈತ್ಯ ದೊಡ್ಡ ಮೋಡಗಳನ್ನು ಒಟ್ಟಿಗೆ ನೋಡಿದ ಮಹಿಳೆಗೆ ಅರೆ ಕ್ಷಣ ಆಘಾತವಾಗಿದ್ದಂತೂ ಸುಳ್ಳಲ್ಲ. ಆ ಹೊತ್ತಿನಲ್ಲಿ ಇಡೀ ಆಕಾಶವೇ ಒಂದು ಸಾಗರದಂತೆ ಕಂಡು ಬಂದಿದೆ.  ಮಿನ್ನೇಸೋಟದ ಬೆಮಿಡ್ಜಿ ಪಟ್ಟಣಕ್ಕೆ ಚಾಲನೆ ಮಾಡಿಕೊಂದು ಹೋಗುತ್ತಿದ್ದಾಗ, ಥೆರೆಸಾ ಬರ್ಗಿನ್ ಲ್ಯೂಕಾಸ್ ಅವರ ಕಣ್ಣಿಗೆ ಈ ದೃಶ್ಯ ಬಿದ್ದಿದೆ. ಆ ಕ್ಷಣದಲ್ಲಿ ಮೋಡಗಳ  ಚಂಡಮಾರುತವೇ ಉರುಳಲು ಪ್ರಾರಂಭಿಸಿದ ಅನುಭವವಾಗಿದೆ. ಈ ಅದ್ಬುತ ದೃಶ್ಯವನ್ನು ತಮ್ಮ ಮಗಳಿಗೆ ತೋರಿಸುವ ಸಲುವಾಗಿ ಅವರು ಅ ದೃಶ್ಯವನ್ನು ಕ್ಲಿಕ್ಕಿಸಿದ್ದಾರೆ. 


COMMERCIAL BREAK
SCROLL TO CONTINUE READING

ಆಕಾಶದಲ್ಲಿ ಕಂಡ ಭಯಾನಕ ದೃಶ್ಯ :
ಇಷ್ಟು ವೇಗವಾಗಿ ತಮ್ಮ ಜೀವಮಾನದಲ್ಲಿಯೇ ಫೋಟೋ ಕ್ಲಿಕ್ಕಿಸಿರಲಿಲ್ಲ ಎನ್ನುತ್ತಾರೆ ಆ ಮಹಿಳೆ.  ಫೋಟೋ ಏನೋ ತೆಗೆದಿದ್ದಾರೆ ಆದರೆ ಮನೆಗ್ ಬರುವವರೆಗೂ ಆ ಫೋಟೋ ಹೇಗೆ ಬಂದಿದೆ ಎನ್ನುವುದನ್ನು ಮಹಿಳೆ  ನೋಡಿರಲಿಲ್ಲ. ಮನೆಗೆ ತಲುಪಿದ ಕೂಡಲೇ ತಮ್ಮ ಪುತ್ರಿಗೆ ಈ ಫೋಟೋ ತೋರಿಸಿದ್ದಾರೆ. ಮಹಿಳೆಯ ಪುತ್ರಿ ಆ ಫೋಟೋ ನೋಡಿ ಬೆರಗಾಗಿದ್ದಾರೆ. 


ಇದನ್ನೂ ಓದಿ : Birmingham explosion: ಬರ್ಮಿಂಗ್​​ಹ್ಯಾಮ್​ನಲ್ಲಿ ಭಾರೀ ಸ್ಫೋಟ


ಕೂಡಲೇ ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲು ನಿರ್ಧರಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆಯೇ, ಅದು ವೈರಲ್ ಆಗಿದೆ.  ಚಿತ್ರವನ್ನು ನೋಡುತಿದ್ದಂತೆಯೇ ಆಕಾಶ ಸ್ಫೋಟಗೊಳ್ಳಲಿದೆ ಎಂಬಂತೆ ಭಾಸವಾಯಿತು ಎನ್ನುತ್ತಾರೆ ಥೆರೆಸಾ ಬರ್ಗಿನ್  ಪುತ್ರಿ ಲುಕ್ಸ್. 


ಸಾಮಾಜಿಕ ಜಾಲತಾಣಗಳಲ್ಲಿ ಜನರ ಮಿಶ್ರ ಪ್ರತಿಕ್ರಿಯೆ :
ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೀಕ್ಷಿಸಿದ ಜನ ಮ್ಕಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.  ಕೆಲವರು ಇದನ್ನು ಫೋಟೋಶಾಪ್  ಮಾಡಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಆಕಾಶದಲ್ಲಿ ಕಂಡು ಬಂದ ಈ ನೋಟದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ : ಪಾನಿಪುರಿ ನಿಷೇಧಿಸಿದ ಈ ದೇಶ...!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.