Twin Sisters: ಸಾಮಾನ್ಯವಾಗಿ ಅವಳಿ ಸಹೋದರರು ಅಥವಾ ಸಹೋದರಿಯರು ಮುಂದೆ ಬಂದರೆ ಸಹಜವಾಗಿ ಅವರತ್ತ  ಗಮನಹರಿಯುತ್ತದೆ. ಆದರೆ, ನೀವು ನಂಬಲು ಅಸಾಧ್ಯವಾದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಹೌದು, ಜಿಲ್ ಜಸ್ಟಿನಿಯಾನಿ ಮತ್ತು ಎರಿನ್ ಚೆಪ್ಲಕ್ ಹೆಸರಿನ ಅವಳಿ ಸಹೋದರಿಯರು ಒಂದೇ ರೀತಿ ಹೋಲುವ ಮಕ್ಕಳಿಗೆ ಜನ್ಮ ನೀಡಿದ್ದಾರೆ.  ಆಶ್ಚರ್ಯದ ವಿಷಯ ಎಂದರೆ ಅವರ ಮಕ್ಕಳು ಬೇರೆ ಬೇರೆ ತಾಯಂದಿರರಿಗೆ ಹೂಡದಿದರೂ ಕೂಡ ನಿಬ್ಬೆರಗಾಗಿಸುವ ಸಮಾನತೆಯನ್ನು ಹೊಂದಿದ್ದಾರೆ.


COMMERCIAL BREAK
SCROLL TO CONTINUE READING

ಅವಳಿ ಸಹೋದರಿಯರಿಗಿರಲಿಲ್ಲ ಈ ಅಂದಾಜು
ಅಮೆರಿಕದ ಕ್ಯಾಲಿಫೋರ್ನಿಯಾದ ಜಿಲ್ ಜಸ್ಟಿನಿಯಾನಿ ಮತ್ತು ಎರಿನ್ ಚೆಪ್ಲಕ್ ಅವರು ಒಂದೇ ಸಮಯದಲ್ಲಿ ಗರ್ಭಧರಿಸಲು ಪ್ರಯತ್ನಿಸಿದ್ದರು, ಆದರೆ, ಅವರಿಗೆ ತಾವು ಒಂದೇ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ ಗಂಡುಮಕ್ಕಳಿಗೆ ಜನ್ಮ ನೀಡುತ್ತೇವೆ ಎಂಬ ಯಾವ ಕಲ್ಪನೆಯೂ ಇರಲಿಲ್ಲ. ಅವರ ಮಕ್ಕಳ ಮುಖಗಳು ಸಹ ಪರಸ್ಪರ ಹೋಳುತ್ತವೆ ಮತ್ತು ಅವರು ತೂಕವೂ ಕೂಡ ಪರಸ್ಪರ ಹೋಲುತ್ತದೆ. 


ಈ ದೇಶದ 1.74 ಲಕ್ಷ ಮಂದಿಯಲ್ಲಿ ಕಾಣಿಸಿಕೊಂಡ ನಿಗೂಢ ಜ್ವರ: ಒಂದೇ ದಿನದಲ್ಲಿ 21 ಸಾವು!


ಕೆಲವೇ ಗಂಟೆಗಳ ಅಂತರದಲ್ಲಿ ಒಂದೇ ಆಸ್ಪತ್ರೆಯಲ್ಲಿ ಮಕ್ಕಳ ಜನನ
ಜಿಲ್ ಜಸ್ಟಿನಿಯಾನಿ ಮತ್ತು ಎರಿನ್ ಚೆಪ್ಲಾಕ್ ತಮ್ಮ ಪುತ್ರರಾದ ಸಿಲಾಸ್ ಮತ್ತು ಆಲಿವರ್ ಅವರನ್ನು ಒಂದೇ ಆಸ್ಪತ್ರೆಯಲ್ಲಿ ಸ್ವಾಗತಿಸಿದ್ದಾರೆ. ದ ಮೀರರ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಕೆಲವೇ ಗಂಟೆಗಳ ಅಂತರದಲ್ಲಿ ಈ ಮಕ್ಕಳು ಜನಿಸಿದ್ದು, ಎರಡೂ ನವಜಾತ ಶಿಶುಗಳು 7 ಪೌಂಡ್ 3oz ತೂಕ ಹೊಂದಿವೆ ಮತ್ತು 20 ಸೆಂ.ಮೀ ಎತ್ತರ ಹೊಂದಿವೆ.


ಇದನ್ನೂ ಓದಿ-Lunar Research: ಚಂದಿರನ ಅಂಗಳದಿಂದ ತಂದ ಮಣ್ಣಿನಲ್ಲಿ ಸಸ್ಯಗಳನ್ನು ಬೆಳೆದ ವಿಜ್ಞಾನಿಗಳು


ಏಕಕಾಲಕ್ಕೆ ತಾಯ್ತನದ ಆನಂದ ಬಯಸಿದ ಸಹೋದರಿಯರು
ಈ ಅವಳಿ ಸಹೋದರಿಯರು ತಮ್ಮ ಮಕ್ಕಳಿಗಾಗಿ ಏಕಕಾಲಕ್ಕೆ ಗರ್ಭಿಣಿಯಾಗುವ ವಿಶೇಷ ಯೋಜನೆ  ರೂಪಿಸಿದ್ದರು. ಆದರೆ, ಒಂದೇ ದಿನದಲ್ಲಿ ಗಂಡು ಮಕ್ಕಳು ಜನಿಸಲಿದ್ದಾರೆ ಎಂಬ ಅಂದಾಜು ಅವರಿಗಿರಲಿಲ್ಲ.  ಅವರು ತಾಯ್ತನವನ್ನು ಒಟ್ಟಿಗೆ ಆನಂದಿಸಲು ಬಯಸಿದ್ದರು. ಜಿಲ್ ಗೆ ಮೇ 5 ರಂದು ಸಿ-ಸೆಕ್ಷನ್‌ಗೆ ನಿಗದಿಪಡಿಸಲಾಗಿತ್ತು. ಆದರೆ ಅದೇ ಸಮಯದಲ್ಲಿ ಎರಿನ್‌ಗೂ ಕೂಡ ಹೆರಿಗೆ ನೋವು ಕಾಣಿಸಿಕೊಂದಿದ್ದು, ಮೇ 5ರ ಬೆಳಗ್ಗೆ ಇಬ್ಬರಿಗೂ ತಾಯ್ತನದ ಉಡುಗೊರೆ ಸಿಕ್ಕಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.