Lunar Mistry: ವಿಶ್ವಾದ್ಯಂತದ ವಿಜ್ಞಾನಿಗಳು ಕಳೆದ ಹಲವು ವರ್ಷಗಳಿಂದ ಚಂದ್ರನ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಚಂದ್ರನ ಮೇಲ್ಮೆ ಮೇಲೆ ಮಾನವನ ಜೀವನದ ಕುರಿತು ಹಲವು ಸಂಶೋಧನೆಗಳು ನಡೆಯುತ್ತಿವೆ. ಇವೆಲ್ಲವುಗಳ ನಡುವೆ ಅಚ್ಚರಿಯ ಮಾಹಿತಿಯೊಂದು ಬಹಿರಂಗಗೊಂಡಿದೆ. ವರದಿಗಳ ಪ್ರಕಾರ, ಚಂದ್ರನ ಮೇಲ್ಮೈ ಮೇಲಿನ ಮಣ್ಣಿನಲ್ಲಿ ಸಸ್ಯಗಳನ್ನು ಬೆಳೆಸಬಹುದು ಎನ್ನಲಾಗಿದೆ. ಇದೆ ಮೊದಲ ಬಾರಿಗೆ ಇಂತಹ ಒಂದು ಪ್ರಯೋಗವನ್ನು ನಡೆಸಲಾಗಿದೆ. ಫ್ಲೋರಿಡಾ ವಿಶ್ವವಿದ್ಯಾನಿಲಯದ ಸಂಶೋಧಕರಾಗಿರುವ ಥೇಲ್ ಕ್ರೆಸ್, ಅರಬಿಡೋಪ್ಸಿಸ್ ಥಾಲಿಯಾನ ಸಸ್ಯಗಳು ಚಂದ್ರನಿಂದ ತಂದ ಮಣ್ಣಿನಲ್ಲಿ ಯಶಸ್ವಿಯಾಗಿ ಮೊಳಕೆಯೋಡೆದಿವೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಈ ಸಂಶೋಧನೆಯ ನಂತರ, ಚಂದ್ರನ ಮೇಲೆ ಆಹಾರ ಮತ್ತು ಆಮ್ಲಜನಕವನ್ನು ಪೂರೈಸುವ ಸಸ್ಯಗಳನ್ನು ಬೆಳೆಸಬಹುದು ಎಂಬ ಅಂದಾಜಿಗೆ ಬಲ ಸಿಕ್ಕಂತಾಗಿದೆ.
ಇದನ್ನೂ ಓದಿ-ಬಿರು ಬೇಸಿಗೆಯಲ್ಲಿ ಕಾರಿನ ಎಸಿ ಕೈ ಕೊಟ್ರೆ.. ಈ 8 ಟ್ರಿಕ್ಸ್ ಬಳಸಿ ಕೂಲ್ ಆಗಿ
ಚಂದ್ರನ ಅಂಗಳದಲ್ಲಿ ವಿಶ್ವ ನಿರ್ಮಾಣದತ್ತ ಇಟ್ಟ ಒಂದು ದೊಡ್ಡ ಹೆಜ್ಜೆ
ಅಧ್ಯಯನದ ಸಹ-ಲೇಖಕರಲ್ಲಿ ಒಬ್ಬರಾದ ರಾಬ್ ಫೆರೆಲ್, 'ಚಂದ್ರನ ಮಣ್ಣಿನಲ್ಲಿ ಸಸ್ಯಗಳು ಬೆಳೆದಿರುವುದು ಬಹಿರಂಗಗೊಂಡಿದೆ. ಇದರಿಂದ ಚಂದ್ರನ ವಸಾಹತುಗಳಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವಲ್ಲಿ ಮಾನವನು ಇಟ್ಟ ಒಂದು ದೊಡ್ಡ ಹೆಜ್ಜೆ ಇದಾಗಿದೆ' ಎಂದಿದ್ದಾರೆ. ಈ ಸಸ್ಯವು ಸಾಸಿವೆ, ಹೂಕೋಸು ಮತ್ತು ಕೋಸುಗಡ್ಡೆಯಂತೆಯೇ ಒಂದೇ ಕುಟುಂಬಕ್ಕೆ ಸೇರಿದೆ. ಈ ಅಧ್ಯಯನದಲ್ಲಿ ತೊಡಗಿರುವ ಮತ್ತೊಬ್ಬ ಸಂಶೋಧಕಿ ಅನ್ನಾ-ಲಿಸಾ ಪೌಲ್ ಹೇಳುವ ಪ್ರಕಾರ, 'ಆಕ್ಸಿಡೇಟಿವ್ ಒತ್ತಡದ ಪ್ರತಿಕ್ರಿಯೆಗಳಿಗೆ ಹೆಚ್ಚು ಮತ್ತು ವೇಗವಾಗಿ ಪ್ರತಿಕ್ರಿಯಿಸುವ ಸಸ್ಯಗಳು ವಿಶೇಷವಾಗಿ ಅಪೊಲೊ 11 ನಿಂದ ತಂದ ಮಣ್ಣಿನ ಮಾದರಿಯಲ್ಲಿ ಬೆಳೆದಿವೆ ಮತ್ತು ಅವು ನೇರಳೆ ಬಣ್ಣಕ್ಕೆ ತಿರುಗಿವೆ ಎಂದಿದ್ದಾರೆ.
ಇದನ್ನೂ ಓದಿ-Flipkart Turbo Carnival Sale: ಕೇವಲ 1500 ರೂಪಾಯಿಗೆ ಖರೀದಿಸಿ, Vivo 5G ಸ್ಮಾರ್ಟ್‌ಫೋನ್
12 ಗ್ರಾಂ ಮಣ್ಣಿನಲ್ಲಿ ಈ ಸಂಶೋಧನೆ ನಡೆಸಲಾಗಿದೆ
NASA ಈ ದಶಕದ ಅಂತ್ಯದಲ್ಲಿ ತನ್ನ ಆರ್ಟೆಮಿಸ್ ಕಾರ್ಯಕ್ರಮದ ಭಾಗವಾಗಿ ಚಂದ್ರನ ಮೇಲೆ ಮಾನವರನ್ನು ಕಳುಹಿಸಲು ಯೋಜನೆ ರೂಪಿಸುತ್ತಿರುವ ಹಿನ್ನೆಲೆ ಈ ಸಂಶೋಧನೆ ಪ್ರಕಟಗೊಂಡಿದ್ದು, ಇದೀಗ ಭಾರಿ ಮಹತ್ವ ಪಡೆದುಕೊಂಡಿದೆ. ಸಂಶೋಧಕರು ಚಂದ್ರನ ಮೇಲಿನ ಬೆಳವಣಿಗೆಯನ್ನು ಇದರಲ್ಲಿ ವಿಶ್ಲೇಷಿಸಿದ್ದಾರೆ ಮತ್ತು ಚಂದ್ರನ ಮೇಲಿನ 12 ಗ್ರಾಂ ಮಣ್ಣಿಗೆ ನೀರು, ಬೆಳಕು ಮತ್ತು ಪೋಷಕಾಂಶಗಳನ್ನು ಸೇರಿಸಿದ್ದಾರೆ. ಈ ಮಣ್ಣಿನ ಮಾದರಿಯೊಂದಿಗೆ ಕೆಲಸ ಮಾಡುವ ಅವಕಾಶಕ್ಕಾಗಿ ತಂಡವು 11 ವರ್ಷಗಳಲ್ಲಿ ಒಟ್ಟು ಮೂರು ಬಾರಿ NASA ಗೆ ಅರ್ಜಿ ಸಲ್ಲಿಸಿತ್ತು ಮತ್ತು 18 ತಿಂಗಳ ಹಿಂದೆ ತಂಡಕ್ಕೆ ಈ ಅನುಮೋದನೆ ದೊರೆತಿತ್ತು. ಈ ಸಂಶೋಧನೆಯ ಉತ್ತಮ ಸಂಗತಿ ಎಂದರೆ ಎಲ್ಲಾ ಸಸ್ಯಗಳು ಮೊಳಕೆಯೊಡೆದಿವೆ. ಆದಾಗ್ಯೂ ಕೆಲವು ಸಷ್ಯಗಳು ವಿಭಿನ್ನ ಬಣ್ಣಗಳಲ್ಲಿ, ಗಾತ್ರಗಳಲ್ಲಿ ಮತ್ತು ಇತರ ಸಸ್ಯಗಳಿಗಿಂತ ನಿಧಾನ ಗತಿಯಲ್ಲಿ ಬೆಳೆದಿವೆ. ಈ ಸಸ್ಯಗಳಿಗೆ ಹೋಲಿಸಲು, ತಂಡ ಭೂಮಿಯ ಮಣ್ಣಿನಲ್ಲಿಯೂ ಕೂಡ ಕೆಲವು ಸಸ್ಯಗಳನ್ನು ನೆಟ್ಟಿದೆ. ಈ ಸಂಪೂರ್ಣ ಅಧ್ಯಯನ ವರದಿಯನ್ನು ದಿ ಜರ್ನಲ್ ಆಫ್ ಕಮ್ಯುನಿಕೇಶನ್ಸ್ ಬಯಾಲಜಿಯಲ್ಲಿ ಪ್ರಕಟಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.