Python Viral Video: ಹಾವನ್ನು ಪ್ರತ್ಯಕ್ಷವಾಗಿ ನೋಡುವುದಿರಲಿ ಅದರ ಹೆಸರು ಕೇಳಿದರೆ ಒಂದು ರೀತಿಯ ಭಯದ ಅನುಭವವಾಗುತ್ತದೆ. ಅಂತಹುದರಲ್ಲಿ ನಾಗರಹಾವು, ಹೆಬ್ಬಾವಿನಂತಹ ದೈತ್ಯ ಹಾವುಗಳು ಥಟ್ ಎಂದು ಕಣ್ಮುಂದೆ ಬಂದರೆ... ಅಬ್ಬಬ್ಬಾ ಅದನ್ನು ಊಹಿಸಿಕೊಳ್ಳುವುದು ಕೂಡ ಭಯಹುಟ್ಟಿಸುತ್ತದೆ. ಆದರೆ ಇಂತಹುದೇ ಒಂದು ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಆಸ್ಟ್ರೇಲಿಯ, ಮಲೇಷ್ಯಾದಂತಹ ದೇಶಗಳಲ್ಲಿ ಮನೆಗಳಲ್ಲಿ ಹಾವುಗಳು ಕಾಣಿಸುವುದು ಸರ್ವೇ ಸಾಮಾನ್ಯ. ಕೆಲವೊಮ್ಮೆ ಹಾವುಗಳು ಶೌಚಗೃಹದಲ್ಲಿ, ಟಾಯ್ಲೆಟ್ ಕಮೊಡ್ ನಲ್ಲಿ ಆವಿತುಕೊಂಡಿದ್ದರೆ, ಕೆಲವೊಮ್ಮೆ ಮನೆಯ ಮೇಲ್ಛಾವಣಿಯಲ್ಲಿ ಅಡಗಿರುವುದು ಕಂಡು ಬರುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಹೆಬ್ಬಾವುಗಳ ಭಯಾನಕ ವಿಡಿಯೋ  (Scary video of pythons)  ಕಂಡೊಡನೆ ಎದೆ ಝಲ್ ಎಂದೆನಿಸುತ್ತದೆ.  


ಇದನ್ನೂ ಓದಿ- Tigers Attack On Lion: ಒಂಟಿ ಸಿಂಹದ ಮೇಲೆ ಐದು ಹುಲಿಗಳಿಂದ ದಾಳಿ, ಮುಂದೇನಾಯ್ತು... ವಾಚ್ ವೈರಲ್ ವಿಡಿಯೋ


ಮೇಲ್ಛಾವಣಿಯಲ್ಲಿ ಅವಿತಿದ್ದ ಹೆಬ್ಬಾವುಗಳು: 
ಹೆಬ್ಬಾವಿನ ವೈರಲ್ ವಿಡಿಯೋದಲ್ಲಿ (Pythons Viral Video), ಮೊದಲಿಗೆ ಸೀಲಿಂಗ್‌ನಲ್ಲಿ ಸಣ್ಣದಾಗಿ ಹಾವಿನ ಬಾಲ ಕಾಣಿಸುತ್ತದೆ. ಇದನ್ನು ಗಮನಿಸಿದ ಕೂಡಲೇ ಹಾವು ಹಿಡಿಯುವವರನ್ನು ಕರೆಸಿದ ಮನೆಯವರಿಗೆ ದೊಡ್ಡ ಆಘಾತವೇ ಕಾದಿತ್ತು. ಹೌದು, ಹಾವು ಹಿಡಿಯಲು ಪ್ರಯತ್ನಿಸುತ್ತಿದ್ದಂತೆ ಸೀಲಿಂಗ್ ಕುಸಿದಿದ್ದು ಮೇಲ್ಛಾವಣಿಯಲ್ಲಿ ಅಡಗಿದ್ದ ಎರಡು ದೈತ್ಯ ಹೆಬ್ಬಾವುಗಳು ಜಂಟಿಯಾಗಿ ನೇತಾಡಿವೆ. ಈ ದೃಶ್ಯ ಕಂಡು ಹೌಹಾರಿದ ಮನೆಯವರು ತಮ್ಮ ಸ್ನೇಹಿತರೊಂದಿಗೆ ಸೇರಿ ಹೆಬ್ಬಾವುಗಳನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ ಎನ್ನಲಾಗಿದೆ. ದೈತ್ಯ ಜಂಟಿ ಹೆಬ್ಬಾವಿನ ಈ ಭಯಾನಕ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಳ್ಳಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಹೆಬ್ಬಾವಿನ ವೈರಲ್ ವಿಡಿಯೋ ಮಲೇಷಿಯಾದ್ದು ಎಂದು ಹೇಳಲಾಗುತ್ತಿದೆ.  


ಹೆಬ್ಬಾವಿನ ವೈರಲ್ ವಿಡಿಯೋ (Viral video of Python):


 

 

 

 



 

 

 

 

 

 

 

 

 

 

 

A post shared by Scary Sea 🌊 (@scarysea)


ಇದನ್ನೂ ಓದಿ- ವಿದ್ಯಾದೇವತೆ ಸರಸ್ವತಿಗೆ ಪ್ರದಕ್ಷಿಣೆ ಹಾಕುತ್ತಿರುವ ನವಿಲುಗಳು: ವಿಡಿಯೋ ವೈರಲ್


ಸ್ಕೇರಿಸೀ ಅಂಡ್ ದ ಡಾರ್ಕ್ ಸೈಡ್ ಆಫ್ ದಿ ನೇಚರ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೆಬ್ಬಾವಿಗೆ ಸಂಬಂಧಿಸಿದ ಈ ವೀಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ಈ ಬಗ್ಗೆ ನೆಟಿಜನ್‌ಗಳಿಂದ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಬಳಕೆದಾರರೊಬ್ಬರು "ನಾನಾಗಿದ್ದರೆ, ಮೊದಲು ಆ ಮನೆಬಿಟ್ಟು ಹೋಗುತ್ತಿದ್ದೆ, ಮತ್ತೆಂದೂ ಹಿಂತಿರುಗುತ್ತಿರಲಿಲ್ಲ" ಎಂದು ಬರೆದಿದ್ದರೆ, ಇನ್ನೊಬ್ಬ ಬಳಕೆದಾರರು, "ಇಂತಹ ದೃಶ್ಯಗಳನ್ನು ಕೆಲ್ವಲ ಸಿನಿಮಾಗಳಲ್ಲಿ ಮಾತ್ರ ನೋಡಿದ್ದೆವು" ಎಂದು ಬರೆದಿದ್ದಾರೆ. ಮತ್ತೊರ್ವ ಬಳಕೆದಾರರು, "ನನಗೆ ಹೃದಯಾಘಾತವೇ ಆಗುತ್ತಿತ್ತು" ಎಂದು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ಸಾವಿರಾರು ವೀಕ್ಷಣೆಯೊಂದಿಗೆ ಸಾಕಷ್ಟು ಲೈಕ್ಸ್ ಕೂಡ ಪಡೆದುಕೊಂಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
WhatsApp Channel- bit.ly/46lENGm
Facebook Link - https://bit.ly/3Hhqmcj 
Youtube Link - https://www.youtube.com/watch?v=kr-YIH866cM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
Twitter Link - https://bit.ly/3n6d2R8  ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.