ನವದೆಹಲಿ: ಸೌದಿ ಅರೇಬಿಯಾದ ರಾಜಮನೆತನ, ಆಹಾರ, ಉಡುಗೆ-ತೊಡುಗೆ, ಸಂಸ್ಕೃತಿ ಹಾಗೂ ಅಲ್ಲಿನ ಕಾನೂನಿನ ಬಗ್ಗೆ ನಿಮಗೆ ಕೆಲವು ವಿಷಯಗಳು ಗೊತ್ತಿರುತ್ತವೆ. ಆದರೆ ಆ ದೇಶದ ಕೆಲವು ವಿಚಿತ್ರ ಸಂಗತಿಗಳ ಬಗ್ಗೆ ನಿಮಗೆ ತಿಳಿದಿರುವುದಿಲ್ಲ.  


COMMERCIAL BREAK
SCROLL TO CONTINUE READING

ಬಹುತೇಕ ಜನರು ಸೌದಿ ಅರೇಬಿಯಾದ ಇತಿಹಾಸ, ಪದ್ಧತಿಗಳು ಮತ್ತು ಸಾಂಸ್ಕೃತಿಕ ಹಾಗೂ ಅಲ್ಲಿನ ರಾಜಕೀಯದ ಬಗ್ಗೆ ತಿಳಿದುಕೊಂಡಿರುತ್ತಾರೆ. ಆದರೆ ಸೌದಿ ಅರೇಬಿಯಾದ ಬಗ್ಗೆ ನಿಮಗೆ ಬಹುಶಃ ಕೆಲವು ವಿಷಯಗಳ ಬಗ್ಗೆ ತಿಳಿದಿರಲಿಕ್ಕಿಲ್ಲ. ಈ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: WATCH: ಹುಲಿಯ ಜೊತೆ ನಾಯಿಯ ಕಾದಾಟ.. ಇದನ್ನು ಕಂಡು ಹೆದರಿ ನಿಂತ ಸಿಂಹ.!


1) ಸೌದಿ ರಾಜನ ಅಧಿಕೃತ ಶೀರ್ಷಿಕೆ ‘ಎರಡು ಪವಿತ್ರ ಮಸೀದಿಗಳ ಪಾಲಕ’(Custodian of the Two Holy Mosques) ಎಂದು. ಕಿಂಗ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರು ಜನವರಿ 2015ರಿಂದ  ಈ ದೇಶದ ರಾಜರಾಗಿ ಆಳ್ವಿಕೆ ನಡೆಸುತ್ತಿದ್ದಾರೆ.


2) ಸೌದಿ ಅರೇಬಿಯಾವು ಒಟ್ಟು ವಿಸ್ತೀರ್ಣದಲ್ಲಿ 83,000 ಚದರ ಮೈಲುಗಳನ್ನು (2,149,690 ಚದರ ಕಿ.ಮೀ) ಹೊಂದಿದೆ. ಇದು ವಿಶ್ವದ 13ನೇ ಅತಿದೊಡ್ಡ ರಾಷ್ಟ್ರವಾಗಿದೆ. ಇದು ಮಧ್ಯಪ್ರಾಚ್ಯದಲ್ಲಿ ಪಶ್ಚಿಮ ಯೂರೋಪ್‌ನ ಗಾತ್ರ ಮತ್ತು ಅಮೆರಿಕದ ಕಾಲು ಭಾಗದಷ್ಟು ದೊಡ್ಡ ದೇಶವಾಗಿದೆ.


3) ಸೌದಿ ಅರೇಬಿಯಾದ ಕಿಂಗ್‌ಡಮ್ ಟವರ್‌ನ ನಿರ್ಮಾಣವು 2014ರಲ್ಲಿ ಪ್ರಾರಂಭವಾಯಿತು. ವಿಶ್ವದ ಹೊಸ, ಎತ್ತರದ ಕಟ್ಟಡವು 3,280 ಅಡಿ (1 km) ಎತ್ತರ ಮತ್ತು ದುಬೈನಲ್ಲಿರುವ 600 ಅಡಿ (183 ಮೀಟರ್) ಎತ್ತರದ ಬುರ್ಜ್ ಖಲೀಫಾ ಹೋಟೆಲ್ ಅನ್ನು ಮೀರಿಸುತ್ತದೆ.


4) ಪ್ರತಿ ಜನಸಂಖ್ಯೆಯ ಮರಣದ ಆಧಾರದ ಮೇಲೆ 2000ರಲ್ಲಿ ವಿಶ್ವ ಬ್ಯಾಂಕ್ ವರದಿಯು ಸೌದಿ ಅರೇಬಿಯಾ ಜೊತೆಗೆ ಮಲೇಷ್ಯಾ, ಥೈಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾವು ವಾಹನ ಚಲಾಯಿಸಲು ಅತ್ಯಂತ ಅಪಾಯಕಾರಿ ದೇಶಗಳಾಗಿವೆ ಎಂದು ತಿಳಿಸಿದೆ. ವಾಹನ ಅಪಘಾತಗಳಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಸೌದಿ ಅರೇಬಿಯಾ ಅನೇಕ ದೇಶಗಳಿಂತ ಮುಂದಿದೆ. ಅಂದರೆ ಇಲ್ಲಿ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲವಂತೆ.  


ಇದನ್ನೂ ಓದಿ: ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಗುಂಡಿನ ದಾಳಿ! ಪೊಲೀಸ್ ಅಧಿಕಾರಿ ಸೇರಿ 5 ಜನರ ಸಾವು


5) 2012ರಲ್ಲಿ ಸೌದಿ ಅರೇಬಿಯಾ ಸರ್ಕಾರಿ ಕಚೇರಿಗಳು ಮತ್ತು ಹೆಚ್ಚಿನ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿತು. ಇದರಲ್ಲಿ ಶಿಶಾಸ್ (water pipes) ನಿಷೇಧ ಸಹ ಒಳಗೊಂಡಿರುತ್ತದೆ. ಇದಲ್ಲದೆ ಅಪ್ರಾಪ್ತ ವಯಸ್ಕರಿಗೆ ತಂಬಾಕು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಸೌದಿಯ ಅಂಕಿಅಂಶಗಳ ಪ್ರಕಾರ ಈ ದೇಶವು ವಿಶ್ವದ 4ನೇ ಅತಿ ದೊಡ್ಡ ತಂಬಾಕು ಆಮದುದಾರ ಎಂದು ಹೇಳಲಾಗಿದೆ. ಸೌದಿಗಳು ದಿನಕ್ಕೆ ಸುಮಾರು 8 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹಣವನ್ನು ಸಿಗರೇಟ್‌ಗಳಿಗಾಗಿ ಖರ್ಚು ಮಾಡುತ್ತಾರಂತೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.