WATCH: ಹುಲಿಯ ಜೊತೆ ನಾಯಿಯ ಕಾದಾಟ.. ಇದನ್ನು ಕಂಡು ಹೆದರಿ ನಿಂತ ಸಿಂಹ.!

Dog Fight With Tiger Video : ಈ ವೈರಲ್ ವಿಡಿಯೋದಲ್ಲಿ ನಾಯಿಯೊಂದು ಹುಲಿಯ ಮೇಲೆ ದಾಳಿ ಮಾಡುವುದನ್ನು ನೀವು ನೋಡಬಹುದು.  

Written by - Chetana Devarmani | Last Updated : Oct 13, 2022, 02:07 PM IST
  • ಹುಲಿಯ ಜೊತೆ ನಾಯಿಯ ಕಾದಾಟ
  • ಇದನ್ನು ಕಂಡು ಹೆದರಿ ನಿಂತ ಸಿಂಹ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
WATCH: ಹುಲಿಯ ಜೊತೆ ನಾಯಿಯ ಕಾದಾಟ.. ಇದನ್ನು ಕಂಡು ಹೆದರಿ ನಿಂತ ಸಿಂಹ.!   title=
ಹುಲಿ

Dog Fight With Tiger Video : ಸಾಮಾಜಿಕ ಜಾಲತಾಣಗಳಲ್ಲಿ ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಹೆಚ್ಚಾಗಿ ಕಾಣಸಿಗುತ್ತವೆ. ಕೆಲವೊಮ್ಮೆ ಪ್ರಾಣಿಗಳ ನಡುವಿನ ಪ್ರೇಮ ದೃಶ್ಯಗಳು ಮತ್ತು ಕೆಲವೊಮ್ಮೆ ಅವುಗಳ ನಡುವೆ ನಡೆಯುವ ಭೀಕರ ಕಾಳಗ ಜನರನ್ನು ಬೆಚ್ಚಿ ಬೀಳಿಸುತ್ತವೆ. ಇದೀಗ ಹುಲಿ ಮತ್ತು ನಾಯಿಯ ವಿಡಿಯೋ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ ನೀವು ಅದ್ಭುತ ಹೋರಾಟವನ್ನು ನೋಡಬಹುದು. ಇಲ್ಲಿ ನಾಯಿಯೇ ವಿಲನ್. ನಾಯಿ ಹುಲಿಯ ಕಿವಿ ಕಚ್ಚುತ್ತಿದೆ. ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ.

ಇದನ್ನೂ ಓದಿ : ಅಂಗಡಿಗೆ ಪಾನಿ ಪುರಿ ಸವಿಯಲು ಬಂದ ಗಜರಾಜ ; Video ವೈರಲ್ 

ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿ ತನ್ನ ಬಾಯಿಯಲ್ಲಿ ಹುಲಿಯ ಕಿವಿಯನ್ನು ಹಿಡಿದಿರುವುದನ್ನು ನೀವು ನೋಡಬಹುದು ಮತ್ತು ಬಿಡುವ ಲಕ್ಷಣವನ್ನು ತೋರಿಸುವುದಿಲ್ಲ. ನಾಯಿ ನಿಜವಾಗಿಯೂ ಹುಲಿಯ ಕಿವಿಯನ್ನು ಕಚ್ಚುತ್ತಿದೆ. ಹುಲಿ ಏನೂ ಮಾಡದೇ ಇರುವುದನ್ನು ವಿಡಿಯೋದಲ್ಲಿ ನೋಡಬಹುದು. ಹುಲಿಯ ಪಕ್ಕದಲ್ಲಿದ್ದ ಸಿಂಹಕ್ಕೂ ಏನೂ ಮಾಡಲಾಗಲಿಲ್ಲ. 

 

 

ಈ ರೀತಿಯ ದೃಶ್ಯವನ್ನು ನೀವು ಸಾಮಾನ್ಯವಾಗಿ ವನ್ಯಜೀವಿ ಸಂಬಂಧಿತ ವೀಡಿಯೊಗಳಲ್ಲಿ ನೋಡುವುದಿಲ್ಲ. ಈ ವೈರಲ್ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಖಾತೆ  ನಲ್ಲಿಅಪ್‌ಲೋಡ್ ಮಾಡಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಸಾಕಷ್ಟು ಕಾಮೆಂಟ್ಸ್ ನೀಡಿದ್ದಾರೆ. ಈ ವೈರಲ್ ವೀಡಿಯೊ 561k ವೀಕ್ಷಣೆಗಳನ್ನು ಮತ್ತು 19.3k ಲೈಕ್‌ಗಳನ್ನು ಪಡೆದುಕೊಂಡಿದೆ. ಈ ದೃಶ್ಯ ಕಂಡರೆ ನಾಯಿ, ಹುಲಿ ಮತ್ತು ಸಿಂಹ ಮೂರನ್ನೂ ಯಾರು ಸಾಕಿದಂತೆ ತೋರುತ್ತದೆ. 

ಇದನ್ನೂ ಓದಿ : Bride Groom Video: ವರನ ಮುಂದೆ ಅಳುತ್ತಾ ಮಾಜಿ ಲವರ್‌ಗೆ ಹಾಡು ಹೇಳಿದ ವಧು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News