ನವದೆಹಲಿ: 52 ವರ್ಷದ ಶಿಕ್ಷಕನಿಗೆ 20 ವರ್ಷದ ವಿದ್ಯಾರ್ಥಿನಿ ಲವ್ ಪ್ರಪೋಸ್ ಮಾಡಿ ಮದುವೆಯಾಗಿರುವ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇವರಿಬ್ಬರ ಲವ್ ಸ್ಟೋರಿ ತುಂಬಾ ರೋಚಕವಾಗಿದ್ದು, ನೆಟಿಜನ್‍ಗಳ ಗಮನ ಸೆಳೆದಿದೆ.


COMMERCIAL BREAK
SCROLL TO CONTINUE READING

ಜೊಯಾ ನೂರ್ ಎಂಬ ವಿದ್ಯಾರ್ಥಿನಿ ಸಾಜಿದ್ ಆಲಿ ಎಂಬ ಶಿಕ್ಷಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಈ ಜೋಡಿಯ ನಡುವೆ ಬರೋಬ್ಬರಿ 32 ವರ್ಷಗಳ ವಯಸ್ಸಿನ ಅಂತರವಿದೆ. ಬಿಕಾಂ ಓದುತ್ತಿರುವ ವಿದ್ಯಾರ್ಥಿನಿ ಜೊಯಾ ಪಾಠ ಹೇಳಿಕೊಡುವ ಶಿಕ್ಷಕನ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ.


ಇದನ್ನೂ ಓದಿ: Viral News: ಮದುವೆಯ ದಿನವೇ ವಧುವಿಗೆ ಶುರುವಾಯ್ತು ಹೆರಿಗೆ ನೋವು... ಅದ್ಹೇಗೆ ಸಾಧ್ಯ ಅಂತೀರಾ... ಸುದ್ದಿ ಓದಿ 


ಪೋಷಕರ ವಿರೋಧದ ನಡುವೆಯೂ ಶಿಕ್ಷಕ ಸಾಜಿದ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೊಯಾ ಸಂಸಾರ ನಡೆಸುತ್ತಿದ್ದಾಳೆ. ಇಬ್ಬರ ನಡುವೆ ದೊಡ್ಡ ವಯಸ್ಸಿನ ಅಂತರವಿದ್ದ ಕಾರಣ ಜೊಯಾ ಕುಟುಂಬಸ್ಥರು ಈ ಮದುವೆಗೆ ಒಪ್ಪಿರಲಿಲ್ಲ. ಆದರೆ ಶಿಕ್ಷಕನ ಅಪ್ರತಿಮ ವ್ಯಕ್ತಿತ್ವಕ್ಕೆ ನಾನು ಮಾರುಹೋಗಿ ಮದುವೆಯಾಗಲು ನಿರ್ಧರಿಸಿದೆ ಎಂದು ಜೊಯಾ ಹೇಳಿಕೊಂಡಿದ್ದಾಳೆ.


ಈ ಪಾಕಿಸ್ತಾನದ ದಂಪತಿ ತಮ್ಮ ಲವ್ ಸ್ಟೋರಿಯನ್ನು ಯುಟ್ಯೂಬರ್ ಮತ್ತು ಕಂಟೆಂಟ್ ಕ್ರಿಯೇಟರ್ ಸೈಯದ್ ಬಸಿತ್ ಅಲಿ ಅವರೊಂದಿಗೆ ಹಂಚಿಕೊಂಡಿದ್ದಾರೆ. ಇವರಿಬ್ಬರ ಸಂದರ್ಶನದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.


ಈ ಬಗ್ಗೆ ಮಾತನಾಡಿರುವ ಜೊಯಾ, ‘ಶಿಕ್ಷಕ ಸಾಜಿದ್​ ವಿಭಿನ್ನ ವ್ಯಕ್ತಿತ್ವವೇ ಅವರ ಪ್ರೀತಿಯ ಬಲೆಯಲ್ಲಿ ನಾನು ಬೀಳಲು ಕಾರಣ. ಮದುವೆಯಾಗುವ ಬಯಕೆಯನ್ನು ನಾನೇ ಮೊದಲು ಅವರ ಮುಂದೆ ಪ್ರಸ್ತಾಪಿಸಿದ್ದೆ. ಆದರೆ, ಆರಂಭದಲ್ಲಿ ಸಾಜಿದ್ ನನ್ನ ಪ್ರೀತಿಯನ್ನು ನಿರಾಕರಿಸಿದರು. ನಮ್ಮಿಬ್ಬರ ನಡುವೆ 32 ವರ್ಷ ವಯಸ್ಸಿನ ಅಂತರವಿದೆ. ಹೀಗಾಗಿ ಮದುವೆಯಾಗಲು ಸಾಧ್ಯವಿಲ್ಲವೆಂದು ಹೇಳಿದ್ದರು. ಇದಾದ ಬಳಿಕ 1 ವಾರ ನನಗೆ ಸಮಯ ಬೇಕು ಅಂತಾ ಹೇಳಿದ್ದರು. ಬಳಿಕ ಅವರು ನನ್ನನ್ನು ಒಪ್ಪಿಕೊಂಡರು. ಆದರೆ, ಇಬ್ಬರ ಪ್ರೀತಿಗೆ ಎರಡೂ ಮನೆಯವರಿಂದ ವಿರೋಧವಿತ್ತು. ಎಲ್ಲಾ ವಿರೋಧಗಳ ನಡುವೆಯೇ ನಾವಿಬ್ಬರು ಸಪ್ತಪದಿ ತುಳಿದೇವು’ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಜ್ಯೂಸ್‌ನಲ್ಲಿ ಆಸಿಡ್‌ ಹಾಕಿ ಕುಡಿಸಿ ಲವರ್‌ ಕೊಂದ ಸುರ ಸುಂದರಿ..!


ಮದುವೆ ಬಳಿಕ ನಾವಿಬ್ಬರು ಅಮೇಜಾನ್​ FBA ತರಬೇತಿ ಪಡೆದುಕೊಂಡೆವು. ಇದೀಗ ಇಬ್ಬರು ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಿದ್ದೇವೆ. ಬಿಕಾಂ ಅಧ್ಯಯನದಿಂದ ಪಡೆದ ಜ್ಞಾನ ಮತ್ತು ಸಾಜಿದ್ ಅನುಭವ ಬಳಸಿಕೊಂಡು ನಾವಿಬ್ಬರು ಉತ್ತಮ ಆದಾಯ ಗಳಿಸುತ್ತಿದ್ದೇವೆ.  ಪ್ರತಿ ತಿಂಗಳು ಲಕ್ಷಾಂತರ ಸಂಪಾದನೆ ಮಾಡುತ್ತಾ ನಾವಿಬ್ಬರು ಸುಖಮಯ ಜೀವನ ನಡೆಸುತ್ತಿದ್ದೇವೆ’ ಅಂತಾ ಜೊಯಾ ಹೇಳಿದ್ದಾಳೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.