Relationships:ಎಂಟು ಪುರುಷರ ಜೊತೆಗೆ ಸಂಬಂಧ ಬೆಳೆಸಿ 11 ಮಕ್ಕಳು, 30 ಮಕ್ಕಳ ಪ್ಲ್ಯಾನಿಂಗ್

Viral Relationships: ಸಾಮಾಜಿಕ ಮಾಧ್ಯಮಗಳ ಮೇಲೆ ಮಹಿಳೆಯೋರ್ವಳ ವಿಡಿಯೋ ಭಾರಿ ಸಂಚಲನ ಮೂಡಿಸಿದೆ. ಮಹಿಳೆಯ ಪ್ರಕಾರ, ಆಕೆಗೆ 11 ಮಕ್ಕಳು ಮತ್ತು 8 ಜನ ಗಂಡಂದಿರಿದ್ದಾರೆ. ಅಷ್ಟೇ ಅಲ್ಲ. ಈ ಮಹಿಳೆ 30 ಮಕ್ಕಳಿಗೆ ತಾಯಿಯಾಗುವ ಬಯಕೆ ಹೊಂದಿದ್ದಾಳೆ.  

Written by - Nitin Tabib | Last Updated : Oct 29, 2022, 07:12 PM IST
  • ವೈರಲ್ ವಿಡಿಯೋದಲ್ಲಿ, ಮಕ್ಕಳನ್ನು ಹೆರುವುದನ್ನು ಇದೇ ರೀತಿ ಮುಂದುವರೆಸುವುದಾಗಿ ಫೈ ಹೇಳಿದ್ದಾಳೆ.
  • ಮಹಿಳೆ ಇನ್ನೂ 19 ಮಕ್ಕಳಿಗೆ ಜನ್ಮ ನೀಡುವ ಮೂಲಕ ಒಟ್ಟು 30 ಮಕ್ಕಳನ್ನು ಹೊಂದಲು ಬಯಸುತ್ತಾಳೆ.
  • ಮುಂದಿನ ಗಂಡಂದಿರ ಆಯ್ಕೆಯ ಬಗ್ಗೆಯೂ ಮಹಿಳೆ ಯೋಚಿಸಿದ್ದಾಳೆ.
Relationships:ಎಂಟು ಪುರುಷರ ಜೊತೆಗೆ ಸಂಬಂಧ ಬೆಳೆಸಿ 11 ಮಕ್ಕಳು, 30 ಮಕ್ಕಳ ಪ್ಲ್ಯಾನಿಂಗ್  title=
Trending Relationship

Trending Relationship: ಒಂದಕ್ಕಿಂತ ಹೆಚ್ಚು ವಿಚಿತ್ರ ಕಥೆಗಳ ದುನಿಯಾ ಅಂದರೆ  ಅದುವೇ ಸಾಮಾಜಿಕ ಜಾಲತಾಣ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಷಯಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಒಬ್ಬರಲ್ಲ, ಇಬ್ಬರಲ್ಲ 8 ಜನ ಗಂಡಂದಿರನ್ನು ಹೊಂದಿರುವ ಮಹಿಳೆಯ ಬಗ್ಗೆ ನೀವು ಖಂಡಿತಾ ಕೇಳಿರಲಿಕ್ಕಿಲ್ಲ. ವಿಡಿಯೋ ಬಿಡುಗಡೆ ಮಾಡುವ ಮೂಲಕ ಈ ಮಹಿಳೆ ತನ್ನ ನಡೆಯ ಹಿಂದಿನ ಕಾರಣವನ್ನೂ ಕೂಡ ಹೇಳಿಕೊಂಡಿದ್ದಾಳೆ.

ಮಹಿಳೆ ಬಹಿರಂಗಪಡಿಸಿದ್ದೇನು?
ಫೈ ಎಂಬ ಈ ಮಹಿಳೆ ಅಮೆರಿಕದ ನಿವಾಸಿಯಾಗಿದ್ದಾಳೆ. ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಲ್ಲಿ ಮಹಿಳೆ ತನ್ನ ವೈಯಕ್ತಿಕ ಜೀವನದ ಕುರಿತು ದೊಡ್ಡ ಮಾಹಿತಿಯನ್ನೇ ಬಹಿರಂಗಪಡಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಕೆಲವು ವೀಡಿಯೊಗಳಲ್ಲಿ, ಮಹಿಳೆಯರು ತಮ್ಮ ಮಕ್ಕಳೊಂದಿಗೆ ಮೋಜು ಮಾಡುತ್ತಿರುವುದನ್ನು ನೀವು ನೋಡಬಹುದು. 11 ಮಕ್ಕಳು ಮತ್ತು 8 ಸಂಗಾತಿಗಳನ್ನು ಹೊಂದಿದ್ದಕ್ಕಾಗಿ ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಟ್ರೋಲ್ ಗೆ ಒಳಗಾಗಿದ್ದಾಳೆ.

ಇದನ್ನೂ ಓದಿ-Swarm Of Bees: ಯುವಕನ ಕೈಮೇಲೆ ಗೂಡು ಕಟ್ಟಿದ ಜೇನುನೊಣಗಳು... ವಿಡಿಯೋ ನೋಡಿ

11 ಮಕ್ಕಳ 8 ತಂದೆಯರು
ತನ್ನ 8 ಗಂಡಂದಿರನ್ನು ಉಲ್ಲೇಖಿಸಿ, ಮಹಿಳೆ ಇದನ್ನು ಸರಳ ಗಣಿತ ಎಂದು ಕರೆದಿದ್ದಾರೆ. 8 ಜನ ಗಂಡಂದಿರ ಮಕ್ಕಳಿಗೆ ಜನ್ಮ ನೀಡುವುದರ ಹಿಂದೆ ರಹಸ್ಯ ಕಾರಣವಿದೆ ಎನ್ನುತ್ತಾರೆ ಮಹಿಳೆ. ತನ್ನ ಎಲ್ಲಾ ಮಕ್ಕಳಿಗೆ ಒಬ್ಬನೇ ತಂದೆಯಾಗಿದ್ದರೆ, ಅವಳು ಹೋದ ನಂತರ ಅಥವಾ ಸತ್ತ ನಂತರ, ತನ್ನ ಎಲ್ಲಾ ಮಕ್ಕಳು ಒಂಟಿಯಾಗುತ್ತಾರೆ ಎಂದು ಮಹಿಳೆ ಹೇಳಿದ್ದಾಳೆ. 8 ಗಂಡಂದಿರಲ್ಲಿ 3 ಜನ ಅಗಲಿದರೂ ಕೂಡ ಅಥವಾ ಅವರನ್ನು ಬಿಟ್ಟು ಹೋದರು ಕೂಡ ಆಗಲೂ ಕೂಡ ಮಕ್ಕಳಿಗೆ 5 ಜನ ತಂದೆಯಿರುತ್ತಾರೆ ಎನ್ನುತ್ತಾಳೆ ಫೈ.

ಇದನ್ನೂ ಓದಿ-Viral Video: ಕೆಲವೇ ಸೆಕೆಂಡ್ ಗಳಲ್ಲಿ ಸಂಪೂರ್ಣ ಜಿಂಕೆಯನ್ನು ಗಬಗಬನೇ ನುಂಗಿ ಹಾಕಿದ ದೈತ್ಯ ಹೆಬ್ಬಾವು

ವೈರಲ್ ಆದ ವಿಡಿಯೋ
ವೈರಲ್ ವಿಡಿಯೋದಲ್ಲಿ, ಮಕ್ಕಳನ್ನು ಹೆರುವುದನ್ನು ಇದೇ ರೀತಿ ಮುಂದುವರೆಸುವುದಾಗಿ ಫೈ ಹೇಳಿದ್ದಾಳೆ. ಮಹಿಳೆ ಇನ್ನೂ 19 ಮಕ್ಕಳಿಗೆ ಜನ್ಮ ನೀಡುವ ಮೂಲಕ ಒಟ್ಟು 30 ಮಕ್ಕಳನ್ನು ಹೊಂದಲು ಬಯಸುತ್ತಾಳೆ. ಮುಂದಿನ ಗಂಡಂದಿರ ಆಯ್ಕೆಯ ಬಗ್ಗೆಯೂ ಮಹಿಳೆ ಯೋಚಿಸಿದ್ದಾಳೆ. ಹೆಚ್ಚಿನವರು ಮಹಿಳೆಯನ್ನು ಟೀಕಿಸಿದರೆ, ಕೆಲವರು ಮಹಿಳೆಯನ್ನು ಬೆಂಬಲಿಸುತ್ತಿರುವುದು ಕಂಡುಬಂದಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News