Viral News: ಹಬ್ಬಕ್ಕೆ ಹೆಂಡತಿ ತವರಿಗೆ ಹೋಗ್ತಿದ್ದಂತೆ ಬೇರೆ ಯುವತಿಯೊಂದಿಗೆ ಸಿಕ್ಕಿಬಿದ್ದ ಶಿಕ್ಷಕ!
Bihar Viral News: ಕುಡಿತದ ಚಟ ಹೊಂದಿದ್ದ ಶಿಕ್ಷಕ ರಾಜೇಶ್ ಹೆಂಡತಿ ತವರು ಮನೆಗೆ ಹೋದ ಬೆನ್ನಲ್ಲೇ ತನ್ನ ಪರಿಚಯದ ಯುವತಿಯನ್ನು ಮನೆಗೆ ಕರೆಸಿಕೊಂಡಿದ್ದಾನೆ. ಆ ಯುವತಿಯೊಂದಿಗೆ ಬೆಡ್‌ರೂಂನಲ್ಲಿ ಸಿಕ್ಕಿಬಿದ್ದ ಬೆನ್ನಲ್ಲೇ ಗ್ರಾಮಸ್ಥರು ಶಿಕ್ಷಕನಿಗೆ ಆಕೆಯೊಂದಿಗೆ ಮದುವೆ ಮಾಡಿಸಿದ್ದಾರೆ.
Bihar Viral News: ಹಬ್ಬಕ್ಕೆಂದು ಪತ್ನಿ ತವರು ಮನೆಗೆ ಹೋಗುತ್ತಿದ್ದಂತೆ ಶಿಕ್ಷಕನೊರ್ವ ಬೇರೊಬ್ಬಳು ಯುವತಿಯನ್ನು ಮನೆಗೆ ಕರೆಸಿಕೊಂಡು ಸರಸ ಸಲ್ಲಾಪದಲ್ಲಿದ್ದಾಗಲೇ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಬಿಹಾರದ ಪುರ್ನಿಯಾದಲ್ಲಿ ನಡೆದಿದೆ. ಸಿಕ್ಕಿಬಿದ್ದ ಶಿಕ್ಷಕನನ್ನು ಸ್ಥಳೀಯರು ಮನೆಯಿಂದ ಎಳೆದು ಹೊರತಂದು ಮರಕ್ಕೆ ಕಟ್ಟಿಹಾಕಿ ಬುದ್ಧಿ ಕಲಿಸಿದ್ದಾರೆ. ಬಳಿಕ ಆ ಯುವತಿಯೊಂದಿಗೆ ಗ್ರಾಮಸ್ಥರು ಮದುವೆಯನ್ನೂ ಮಾಡಿಸಿದ್ದಾರೆ.
ವರದಿಗಳ ಪ್ರಕಾರ, ಝುನ್ನಿ ಈಸ್ತಂಬರ್ ಪಂಚಾಯತ್‌ನ ಬೇಗಂಪುರ ಮಾಧ್ಯಮಿಕ ಶಾಲೆಯ ಶಿಕ್ಷಕ ಶೇಖರ್ ಪಾಸ್ವಾನ್ ಅಲಿಯಾಸ್ ರಾಜೇಶ್ ಕುಮಾರ್ ಗ್ರಾಮದ ಬುಡಕಟ್ಟು ಹುಡುಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಎರಡು ದಿನಗಳ ಹಿಂದಷ್ಟೇ ರಾಜೇಶ್ ಕುಮಾರ್ ಹೆಂಡತಿ ಹಬ್ಬಕ್ಕೆಂದು ತವರು ಮನೆಗೆ ಹೋಗಿದ್ದಳು. ಈ ವೇಳೆ ಯುವತಿಯನ್ನು ಆತ ಮನೆಗೆ ಕರೆಸಿಕೊಂಡಿದ್ದ.
ಇದನ್ನೂ ಓದಿ: 295 ಕೋಚ್‌ಗಳು, ಎಳೆಯಲು 6 ಇಂಜಿನ್‌ಗಳು..! ಭಾರತದ ಅತಿ ಉದ್ದದ ರೈಲಿನ ಬಗ್ಗೆ ನಿಮಗೆಷ್ಟು ಗೊತ್ತು?
ಕುಡಿತದ ಚಟ ಹೊಂದಿದ್ದ ಶಿಕ್ಷಕ ರಾಜೇಶ್ ಹೆಂಡತಿ ತವರು ಮನೆಗೆ ಹೋದ ಬೆನ್ನಲ್ಲೇ ತನ್ನ ಪರಿಚಯದ ಯುವತಿಯನ್ನು ಮನೆಗೆ ಕರೆಸಿಕೊಂಡಿದ್ದಾನೆ. ಆ ಯುವತಿಯೊಂದಿಗೆ ಬೆಡ್‌ರೂಂನಲ್ಲಿ ಸಿಕ್ಕಿಬಿದ್ದ ಬೆನ್ನಲ್ಲೇ ಗ್ರಾಮಸ್ಥರು ಶಿಕ್ಷಕನಿಗೆ ಆಕೆಯೊಂದಿಗೆ ಮದುವೆ ಮಾಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮೊದಲ ಹೆಂಡತಿ ತವರು ಮನೆಯಿಂದ ಹಿಂದಿರುಗಿ ಬಂದಿದ್ದು, ಆಘಾತ ವ್ಯಕ್ತಪಡಿಸಿದ್ದಾಳೆ. ಸದ್ಯ ಈ ಘಟನೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತನ್ನ ಪತಿಯಿಂದ ಆಗಿರುವ ಅನ್ಯಾಯಕ್ಕೆ ಮೊದಲ ಪತ್ನಿ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾಳೆ. ನನಗೆ ಗಂಡನಿಂದ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾಳೆ.
ಇದನ್ನೂ ಓದಿ: ಒಂದಲ್ಲ..ಎರಡಲ್ಲ...23 ರೈಲ್ವೆಗಳು ನಿಲ್ಲುತ್ತವೆ ಈ ಸ್ಟೇಶನ್ ನಲ್ಲಿ..! ಅಚ್ಚರಿ ಹಾಗೂ ರೋಚಕ ಕಥನಗಳಿವೆ ಇಲ್ಲಿ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.