ಫಾರ್ಮಾ ಕಂಪನಿಯಲ್ಲಿ ಭೀಕರ ಸ್ಫೋಟ... 18 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ

Andhra Pradesh pharma company Blast: ಅಚ್ಯುತಪುರಂ ಎಸ್‌ಇಜೆಡ್‌ನ ಫಾರ್ಮಾ ಕಂಪನಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವಿನ ಸಂಖ್ಯೆ 18 ಕ್ಕೆ ತಲುಪಿದೆ. ಗಾಯಾಳುಗಳ ಸಂಖ್ಯೆಯೂ ಹೆಚ್ಚುತ್ತಿದೆ.

Written by - Chetana Devarmani | Last Updated : Aug 22, 2024, 12:53 PM IST
    • ಫಾರ್ಮಾ ಕಂಪನಿಯಲ್ಲಿ ಭೀಕರ ಸ್ಫೋಟ
    • 18 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ
    • ಅಚ್ಯುತಪುರಂ ಎಸ್‌ಇಜೆಡ್‌ನ ಫಾರ್ಮಾ ಕಂಪನಿ
ಫಾರ್ಮಾ ಕಂಪನಿಯಲ್ಲಿ ಭೀಕರ ಸ್ಫೋಟ... 18 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ title=

Andhra Pradesh pharma company Blast: ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ ನಡೆದಿದೆ. ಅನಕಪಲ್ಲಿ ಜಿಲ್ಲೆಯ ರಾಂಬಿಲ್ಲಿ ಮಂಡಲದ ಅಚ್ಯುತಪುರಂ ನಲ್ಲಿ ಫಾರ್ಮಾ ಕಂಪನಿಯ ರಿಯಾಕ್ಟರ್ ಸ್ಫೋಟಗೊಂಡು 18 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ಮಧ್ಯಾಹ್ನ ರಿಯಾಕ್ಟರ್ ಸ್ಫೋಟಗೊಂಡಿದ್ದು, ಕಂಪನಿಯಲ್ಲಿ ಸುಮಾರು 381 ಜನರು ಕೆಲಸ ಮಾಡುತ್ತಿದ್ದರು.  

ಫಾರ್ಮಾಸ್ಯುಟಿಕಲ್ ಕಂಪನಿ ಕೇಂದ್ರವಾದ ಅಚ್ಯುತಪುರಂ ವಿಶೇಷ ಆರ್ಥಿಕ ವಲಯದಲ್ಲಿರುವ (ಎಸ್​ಇಝಡ್) ಔಷಧೀಯ ಕಂಪನಿ ಎಸ್ಸೆಂಟಿಯಾದಲ್ಲಿ ಊಟದ ವಿರಾಮದ ವೇಳೆ ಸ್ಫೋಟ ಸಂಭವಿಸಿದೆ. 

ಅವಘಟದಲ್ಲಿ ಗಾಯಗೊಂಡವರನ್ನು ವಿಶಾಖಪಟ್ಟಣಂನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲವರನ್ನು ಅನಕಪಲ್ಲಿ ಎನ್‌ಟಿಆರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಇದನ್ನೂ ಓದಿ: Daily GK Quiz: ಬಾಹ್ಯಾಕಾಶಕ್ಕೆ ಕಳುಹಿಸಿದ ಮೊದಲ ಕೃತಕ ಉಪಗ್ರಹದ ಹೆಸರೇನು?

ಅನಕಪಲ್ಲಿ ಜಿಲ್ಲಾಧಿಕಾರಿ ವಿಜಯ್ ಕೃಷ್ಣನ್ ಮಾತನಾಡಿ, ಈ ಕಾರ್ಖಾನೆಯಲ್ಲಿ 381 ಕಾರ್ಮಿಕರು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಊಟದ ವಿರಾಮದ ವೇಳೆ ಈ ಅವಘಡ ಸಂಭವಿಸಿದೆ ಎಂದಿದ್ದಾರೆ.

ಎಸೆನ್ಷಿಯಾ ಅಡ್ವಾನ್ಸ್ಡ್ ಸೈನ್ಸಸ್ ಕಂಪನಿಯು ರಾಸಾಯನಿಕಗಳು ಮತ್ತು ಔಷಧೀಯ ಪದಾರ್ಥಗಳನ್ನು (API ಗಳು) ತಯಾರಿಸುತ್ತದೆ. ಇದು ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮದ (APIIC) ಬಹು ಉತ್ಪನ್ನ ವಿಶೇಷ ಆರ್ಥಿಕ ವಲಯ (SEZ) ನಲ್ಲಿ ಅಚ್ಯುತಪುರಂ ಕ್ಲಸ್ಟರ್‌ನಲ್ಲಿ 40 ಎಕರೆಗಳಷ್ಟು ಪ್ರದೇಶದಲ್ಲಿದೆ. 

ಅನಕಪಲ್ಲಿ ಹಾಗೂ ಸುತ್ತಮುತ್ತಲ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿದೆ. 

ಇದನ್ನೂ ಓದಿ: ನೀವು ಎಂದಾದರೂ ಈ 7 ಫೋಟೋಗಳ ಹಿಂದಿನ ಕಥೆ ಕೇಳಿದ್ದಿರಾ? ರೋಚಕತೆಯ ಆಗರ ಈ ಫೋಟೋಗಳು ..!

ಫಾರ್ಮಾ ಕಂಪನಿಯಲ್ಲಿ ಬೆಂಕಿ ಅವಘಡಕ್ಕೆ ಸಿಎಂ ಚಂದ್ರಬಾಬು ನಾಯ್ಡು ಬೇಸರ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಿಎಂ ಸೂಚಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಜತೆಗೆ ಮೃತರ ಕುಟುಂಬಗಳನ್ನೂ ಸಿಎಂ ಚಂದ್ರಬಾಬು ನಾಯ್ಡು ಭೇಟಿ ಮಾಡಲಿದ್ದಾರೆ.

ಈ ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದರು. ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬುದು ತನಿಖೆಯಿಂದ ತಿಳಿದು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಚಂದ್ರಬಾಬು ಎಚ್ಚರಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News