ಪಾಟ್ನಾ: ಪ್ರೀತಿಗೋಸ್ಕರ ಪ್ರೇಮಿಗಳು ಏನೇನೋ ಮಾಡಿದ್ದಾರೆ. ಅದೇ ರೀತಿ ಬಿಹಾರದಲ್ಲಿ ಪ್ರಿಯಕರನ ಭೇಟಿಗಾಗಿ ಪ್ರಿಯತಮೆಯೊಬ್ಬಳು ಇಡೀ ಊರಿನ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾಳೆ. ಈ ವಿಚಾರ ಬೆಳಕಿಗೆ ಬಂದ ಹಿನ್ನೆಲೆ ಗ್ರಾಮಸ್ಥರನ್ನು ಪ್ರಿಯಕರನನ್ನು ಹಿಡಿದು ಥಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಘಟನೆ ನಡೆದಿರುವುದು ಬಿಹಾರದ ಪಶ್ಚಿಮ ಚಂಪಾರಣ್‍ನಲ್ಲಿ. ಬೆಟ್ಟಯ್ಯ ಗ್ರಾಮದ ಪ್ರೀತಿ ಎನ್ನುವ ಯುವತಿ ರಾಜ್‍ಕುಮಾರ್‌ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಪರಸ್ಪರ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರೀತಿ, ರಾಜ್‌ಕುಮಾರ್‍ನನ್ನು ಭೇಟಿಯಾಗುವುದ ಹೇಗೆಂದು ಚಿಂತಿಸಿದ್ದಾಳೆ.


ಏನಾದರೂ ಮಾಡಿ ತಾನು ತನ್ನ ಪ್ರಿಯಕರನನ್ನು ಭೇಟಿ ಮಾಡಬೇಕೆಂದು ನಿರ್ಧರಿಸಿದ ಪ್ರೀತಿ ರಾತ್ರಿ ಗ್ರಾಮದ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಪ್ಲ್ಯಾನ್ ಮಾಡಿದ್ದಳು. ಅದರಂತೆ ಅನೇಕ ದಿನಗಳ ಕಾಲ ಇಡೀ ಗ್ರಾಮದ ವಿದ್ಯುತ್ ಕಡಿತಗೊಳಿಸಿ ಪ್ರಿಯಕರ ರಾಜ್‍ಕುಮಾರ್‍ನನ್ನು ಭೇಟಿಯಾಗುತ್ತಿದ್ದಳು.


ಇದನ್ನೂ ಓದಿ: “ಚೀನಾ ಬಳಿಕ ಅಮೆರಿಕಾದಿಂದ ಕೋವಿಡ್ ತರಹದ ವೈರಸ್ ಹರಡುತ್ತದೆ”: ಶಾಕಿಂಗ್ ವರದಿ ಬಹಿರಂಗ


ಪ್ರತಿದಿನ ರಾತ್ರಿ ಕರೆಂಟ್‌ ಹೋಗುತ್ತಿದ್ದರಿಂದ ಗ್ರಾಮದ ಜನರಿಗೆ ಚಿಂತೆಯುಂಟಾಗಿತ್ತು. ಅಲ್ಲದೆ ವಿದ್ಯುತ್ ಇಲ್ಲದ ಕತ್ತಲ ಗ್ರಾಮದಲ್ಲಿ ಕಳ್ಳತನ ಸಹ ಜಾಸ್ತಿಯಾಗಿತ್ತು. ಇದರಿಂದ ಬೇಸರಗೊಂಡ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರು. ಆದರೆ ನಾವು ಯಾವುದೇ ರೀತಿ ವಿದ್ಯುತ್ ತೆಗೆಯುತ್ತಿಲ್ಲ, ನಿಮ್ಮ ಊರಿನಲ್ಲೇ ಏನೋ ಸಮಸ್ಯೆ ಇರಬೇಕು ಎಂದು ಅಧಿಕಾರಿಗಳು ತಿಳಿಸಿದ್ದರು.


ಹೀಗಾಗಿ ರಾತ್ರಿ ವೇಳೆ ಗ್ರಾಮದಲ್ಲಿ ಕರೆಂಟ್ ಏಕೆ ಹೋಗುತ್ತದೆ ಅನ್ನೋದರ ಕಾರಣ ತಿಳಿಯಲು ಗ್ರಾಮಸ್ಥರು ನಿರ್ಧರಿಸಿದ್ದರು. ಪ್ರತಿದಿನ ಒಂದೇ ಸಮಯಕ್ಕೆ ಕರೆಂಟ್ ಹೋಗುತ್ತಿರುವುದನ್ನು ಗ್ರಾಮಸ್ಥರು ಗಮನಿಸಿದ್ದರು. ಯಾರೋ ಬೇಕಂತಲೇ ಗ್ರಾಮದಲ್ಲಿ ಕರೆಂಟ್ ತೆಗೆಯುತ್ತಿದ್ದಾರೆಂಬ ಅನುಮಾನ ಮೂಡಿತ್ತು. ಒಂದು ದಿನ ರಾತ್ರಿ ಕರೆಂಟ್ ಹೋದ ಬಳಿಕ ರಾಜ್‍ಕುಮಾರ್ ಹಾಗೂ ಪ್ರೀತಿಯನ್ನು ಗ್ರಾಮಸ್ಥರು ರೆಂಡ್‍ಹ್ಯಾಂಡ್‍ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.


ಪ್ರತಿದಿನ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು ಪ್ರೀತಿಯೇ ಅನ್ನೋದು ಗ್ರಾಮಸ್ಥರಿಗೆ ಗೊತ್ತಾಗಿದೆ. ಅದೂ ಪ್ರಿಯಕರನ ಭೇಟಿಗೆ ಆಕೆ ಹೀಗೆ ಮಾಡುತ್ತಿದ್ದಳು ಅನ್ನೋದು ತಿಳಿದ ಗ್ರಾಮಸ್ಥರು ಕುಪಿತಗೊಂಡು ರಾಜ್‍ಕುಮಾರ್‍ನನ್ನು ಹಿಡಿದು ಥಳಿಸಿದ್ದಾರೆ. ಈ ವೇಳೆ ಆತನಿಗೆ ಏನು ಮಾಡದಂತೆ ಪ್ರೀತಿ ಊರಿನ ಹಿರಿಯರಲ್ಲಿ ಬೇಡಿಕೊಂಡಿದ್ದಾಳೆ. ತಾವಿಬ್ಬರೂ ಪ್ರೀತಿಸುತ್ತಿದ್ದು ಪರಸ್ಪರ ಭೇಟಿಯಾಗಲು ಹೀಗೆ ಮಾಡುತ್ತಿದ್ದೇವೆ ಎಂದು ಪ್ರೀತಿ ತಪ್ಪು ಒಪ್ಪಿಕೊಂಡಿದ್ದಾಳೆ. ಬಳಿಕ ಗ್ರಾಮಸ್ಥರೆಲ್ಲರೂ ಸೇರಿ ಪ್ರೀತಿ ಮತ್ತು ರಾಜ್‍ಕುಮಾರ್ ಮದುವೆ ಮಾಡಿಸಿ ಶುಭ ಹಾರೈಸಿದ್ದಾರೆ.


ಇದನ್ನೂ ಓದಿ: Online gambling: ಬರೋಬ್ಬರಿ 58 ಕೋಟಿ ರೂ. ಕಳೆದುಕೊಂಡ ಉದ್ಯಮಿ..!


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.