ಮಣಿಪುರದಲ್ಲಿ ಮತ್ತೊಂದು ಘೋರ ಕೃತ್ಯ: ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ!

Manipur Horrific Incident: ಕಾರು ವಾಷಿಂಗ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಕೆಲಸದ ಸ್ಥಳದಿಂದ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ 40 ಕಿಮೀ ದೂರದಲ್ಲಿ ಹತ್ಯೆ ಮಾಡಿ ಎಸೆದಿರುವ ಭಯಾನಕ ಘಟನೆ ನಡದಿದೆ.

Written by - Puttaraj K Alur | Last Updated : Jul 22, 2023, 07:56 PM IST
  • ಕುಕಿ ಸಮುದಾಯದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಬೆತ್ತಲೆ ಮೆರವಣಿಗೆ ಪ್ರಕರಣ
  • ಈ ಆಘಾತಕಾರಿ ಘಟನೆ ಮಾಸುವ ಮುನ್ನವೇ ಮಣಿಪುರದಲ್ಲಿ ಮತ್ತೊಂದು ಘೋರ ಕೃತ್ಯ ನಡೆದಿದೆ
  • ಕಾರು ವಾಷಿಂಗ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ
ಮಣಿಪುರದಲ್ಲಿ ಮತ್ತೊಂದು ಘೋರ ಕೃತ್ಯ: ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ! title=
ಮಣಿಪುರದಲ್ಲಿ ಮತ್ತೊಂದು ಘೋರ ಕೃತ್ಯ ನಡೆದಿದೆ

ನವದೆಹಲಿ: ಮಣಿಪುರ ರಾಜ್ಯದ ಕಾಂಗ್‌ಪೋಪಿ ಜಿಲ್ಲೆಯಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಬೆತ್ತಲೆ ಮೆರವಣಿಗೆ ನಡೆಸಿಸಲಾಗಿತ್ತು. ಈ ಪೈಶಾಚಿಕ ಕೃತ್ಯಕ್ಕೆ ದೇಶದಾದ್ಯಂತ ವ್ಯಾಪಕ ಆ‍ಕ್ರೋಶ ವ್ಯಕ್ತವಾಗಿತ್ತು. ಈ ಆಘಾತಕಾರಿ ಘಟನೆಯ ಬೆನ್ನಲ್ಲಿಯೇ ಮತ್ತೊಂದು ಘೋರ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ಕಾರು ವಾಷಿಂಗ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಕೆಲಸದ ಸ್ಥಳದಿಂದ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ 40 ಕಿಮೀ ದೂರದಲ್ಲಿ ಹತ್ಯೆ ಮಾಡಿ ಎಸೆದಿರುವ ಭಯಾನಕ ಘಟನೆ ನಡದಿದೆ. ಕಾಂಗ್‌ಪೋಕ್ಪಿ ಜಿಲ್ಲೆಯ 21 ಮತ್ತು 24 ವರ್ಷ ವಯಸ್ಸಿನ ಇಬ್ಬರು ಮಹಿಳೆಯರನ್ನು ಮೇ 4ರಂದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಕುಕಿ ಸಮುದಾಯದ ಮಹಿಳೆಯರ ನಗ್ನ ಮೆರವಣಿಗೆ ನಡೆದ ಸ್ಥಳದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಇಂಫಾಲ್ ಪೂರ್ವ ಜಿಲ್ಲೆಯ ಕೊನುಂಗ್ ಮಮಾಂಗ್ ಸಮೀಪ ಕಾರು ವಾಷಿಂಗ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಮೇಲೆ ಗುಂಪೊಂದು ದಾಳಿ ಮಾಡಿ ಕೃತ್ಯ ಎಸೆಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪರಸ್ಪರ ಒಪ್ಪಿಗೆಯಿಂದ ಶಾರೀರಿಕ ಸಂಬಂಧ, ನಂತರ ರೇಪ್ ಕೇಸ್ ದಾಖಲು, ಹೈಕೋರ್ಟ್ ಹೇಳಿದ್ದೇನು?

ಮೇ 4ರಂದು ಸಂಜೆ 5.30ರ ವೇಳೆಗೆ ಕಾರು ವಾಷಿಂಗ್ ಘಟಕಕ್ಕೆ ಮಹಿಳೆಯರ ದೊಡ್ಡ ಗುಂಪು ನುಗ್ಗಿತ್ತು. ಅಲ್ಲಿ ಬುಡಕಟ್ಟು ಮಹಿಳೆಯರು ಕೆಲಸ ಮಾಡುವ ವಿಷಯ ಅವರಿಗೆ ತಿಳಿದಿತ್ತು. ಇಬ್ಬರು ಸಂತ್ರಸ್ತ ಮಹಿಳೆಯರನ್ನು ಕೊಠಡಿಯಲ್ಲಿ ಕೂಡಿಹಾಕಿ ಅತ್ಯಾಚಾರ ಎಸಗುವಂತೆ ಮಹಿಳೆಯರೇ ಪುರುಷರಿಗೆ ಕುಮ್ಮಕ್ಕು ನೀಡಿದ್ದರಂತೆ. ಹೀಗಾಗಿ ಅವರನ್ನು ಕೊಠಡಿಗೆ ಎಳೆದುಕೊಂಡು ಹೋಗಿ ಒಬ್ಬರ ಬಳಿಕ ಒಬ್ಬರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ.

ಒಂದೂವರೆ ಗಂಟೆಗಳ ಕಾಲ ಈ ಹೇಯ ಕೃತ್ಯ ನಡೆಸಿದ ಬಳಿ ಬಳಿಕ ಇಬ್ಬರು ಮಹಿಳೆಯರನ್ನು ಹೊರಕ್ಕೆ ಎಳೆದು ಮಿಲ್ ಬಳಿ ಎಸೆದು ಹೋಗಿದ್ದಾರೆ. ಅವರ ಬಟ್ಟೆಗಳು ಹರಿದಿದ್ದವು ಮತ್ತು ಕೂದಲನ್ನು ಕತ್ತರಿಸಲಾಗಿತ್ತು ಹಾಗೂ ದೇಹಗಳು ರಕ್ತಸಿಕ್ತವಾಗಿದ್ದವಂತೆ. ಮಹಿಳೆಯರು ಚೀರದಂತೆ ಬಾಯಿಗೆ ಬಟ್ಟೆ ತುರುಕಿದ್ದರು. ಈ ಘಟನೆಗೆ ಸಾಕ್ಷಿಯಾದ ಪುರುಷ ಸಹೋದ್ಯೋಗಿಯೊಬ್ಬರ ಹೇಳಿಕೆ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಬುಡಕಟ್ಟು ಮಹಿಳೆಯರನ್ನು ಬೆತ್ತಲೆಗೊಳಿಸಿ ಹಲ್ಲೆ..! ದೀದಿ ನಾಡಲ್ಲಿ ಅಮಾನವೀಯ ಘಟನೆ

ಈ ಬಗ್ಗೆ ದಾಖಲಾದ ಎಫ್‌ಐಆರ್‍ನಲ್ಲಿ ‘ಮಹಿಳೆಯರನ್ನು ಅತ್ಯಾಚಾರ ಮತ್ತು ಭೀಕರವಾಗಿ ಚಿತ್ರಹಿಂಸೆ ನೀಡಿದ ನಂತರ ಕ್ರೂರವಾಗಿ ಕೊಲ್ಲಲಾಯಿತು’ ಎಂದು ಹೇಳಲಾಗಿದೆ. ನಂತರ ಈ ಪ್ರಕರಣವನ್ನು ಇಂಫಾಲ್ ಪೂರ್ವ ಜಿಲ್ಲೆಯ ಪೊರೊಂಪತ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಇದೇ ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳೆಯರನ್ನು ಅಪಹರಣ, ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ. ಈ ಘಟನೆ ಇದೀಗ ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News